ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಮತ್ತು ಫಿಲ್ಮ್‌ಮೇಕರ್-ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ನಡುವಿನ ನಿಶ್ಚಿತಾರ್ಥ ಹಾಗೂ ಮದುವೆ ಕಾರ್ಯಕ್ರಮಗಳು ನವೆಂಬರ್ 23ರಂದು ಜರುಗಬೇಕಿತ್ತು. ಕುಟುಂಬಸ್ಥರು, ಆಪ್ತ ಸ್ನೇಹಿತರು ಮತ್ತು ಕ್ರಿಕೆಟ್-ಸಿನಿಮಾ ಲೋಕದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಮದುವೆಗೆ ಕೆಲವೇ ಗಂಟೆಗಳ ಮೊದಲು ಅನಿರೀಕ್ಷಿತ ತಿರುವು ಕಂಡುಬಂದಿತ್ತು. ಪಲಾಶ್ ಮುಚ್ಚಲ್ ಅವರ ಸಹೋದರಿ ಪಲಕ್ ಮುಚ್ಚಲ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ “ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ” ಎಂದು ಘೋಷಿಸಿದ್ದರು.
ಮೊದಲಿಗೆ ಮದುವೆ ಮುಂದೂಡಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಮೂಡಿಸಿತು. ನಂತರ, ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ್ ಮಂಧನಾಗೆ ಹೃದಯಾಘಾತ ಸಂಭವಿಸಿದ್ದು, ಅವರ ಆರೋಗ್ಯದ ದಿಟ್ಟ ಕಾರಣದಿಂದ ಮದುವೆ ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ಮಂಧನಾ ಕುಟುಂಬದ ಆಪ್ತ ವಲಯದವರು, “ತಂದೆ ಆಸ್ಪತ್ರೆಯಲ್ಲಿ ಇದ್ದಾಗ ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ ಎಂದು ಸ್ಮೃತಿ ನಿರ್ಧರಿಸಿದ್ದಾರೆ” ಎಂದು ತಿಳಿಸಿದರು.
ಆದರೆ ಇದರ ಜೊತೆಗೆ ಮತ್ತೊಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆ ಮುಂದೂಡಿದ ಕೆಲವೇ ಗಂಟೆಗಳಲ್ಲೇ ಕೆಲ ಇನ್‌ಸ್ಟಾಗ್ರಾಂ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ಮೇರಿ ಡಿ’ಕೋಸ್ಟಾ ಎನ್ನುವ ಮಹಿಳೆ, ಪಲಾಶ್ ಮುಚ್ಚಲ್ ಅವರೊಂದಿಗೆ ತಮಗೆ ನಡೆದ ಚಾಟ್‌ಗಳನ್ನು ಸ್ಟೋರಿ ರೂಪದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸ್ಕ್ರೀನ್‌ಶಾಟ್‌ಗಳು ರೆಡ್ಡಿಟ್ ಹಾಗೂ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದ್ದು, ಮದುವೆ ಮುಂದೂಡಿಕೆಯ ಹಿಂದೆ ಬೇರೆ ಏನಾದರೂ ಕಾರಣ ಇದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.
Meet Mary Decosta,
She claimed that Palash Muchhal was flirting with her while being in a relationship with Smriti Mandhana,
She has also cleared that she never met Palash.
if this is actually true, i feel genuinely sad for Smriti Mandhana. pic.twitter.com/49XIaB6YKN
— Jeet (@JeetN25) November 25, 2025
ಮೇರಿ ಡಿ’ಕೋಸ್ಟಾ ಎಂಬ ಮಹಿಳೆಯೊಬ್ಬರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ ಚಾಟ್‌ನಲ್ಲಿ ಪಲಾಶ್ ಮುಚ್ಚಲ್ ಅವರೇ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಆ ಚಾಟ್‌ನಲ್ಲಿ ಪಲಾಶ್, ಸ್ಮೃತಿ ಜತೆಗಿನ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್ ಹಾಗೂ ಆಕೆಯ ಜತೆ ಟೂರ್ ಹೋಗುವುದರ ಬಗ್ಗೆ ಆಗುವ ಸವಾಲುಗಳ ಬಗ್ಗೆ ಪಲಾಶ್ ಚಾಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೇರಿ ಅವರನ್ನು ಫ್ಲರ್ಟ್ ಮಾಡುತ್ತಾ “ನೀನು ಸ್ವಿಮ್ಮಿಂಗ್ ಮಾಡ್ತೀಯಾ? ನನ್ನ ಜತೆ ಈಜಲು ಬಾ” ಎಂದು ಆಹ್ವಾನಿಸಿದ್ದಾರೆ. ಈ ವಿಚಾರ ಅಭಿಮಾನಿಗಳಲ್ಲಿ ಗೊಂದಲ ಮತ್ತು ಊಹಾಪೋಹಗಳಿಗೆ ಕಾರಣವಾಯಿತು.
ಅಲ್ಲದೇ ಸ್ಮೃತಿ ಮಂಧನಾ, ಆಕೆಯ ಆಪ್ತ ಗೆಳತಿಯಾದ ಜೆಮಿಮಾ ರೋಡ್ರಿಗ್ಸ್ ಸೇರಿದಂತೆ ಹಲವರು ಮದುವೆ ಪೂರ್ವ ಕಾರ್ಯಕ್ರಮಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
