ಐಪಿಎಲ್ 2026ರ ಸಂಭ್ರಮದ ಮಧ್ಯೆಯೇ ದೊಡ್ಡ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮುಂಬೈನ ಪ್ರಸಿದ್ಧ ಟ್ರೈಡೆಂಟ್ ಹೋಟೆಲ್‌ನಲ್ಲಿ ಬಿಸಿಸಿಐನ (BCCI) ಹಿರಿಯ ಬ್ರಾಡ್‌ಕಾಸ್ಟ್ ಎಂಜಿನಿಯರ್ ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ ಅವರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ.
ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಈ ಬ್ರಿಟಿಷ್ ಪ್ರಜೆಯ ದಿಢೀರ್ ಸಾವು ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ.
ಘಟನೆಯ ವಿವರ :
ಮುಂಬೈನ ಪ್ರಸಿದ್ಧ ಟ್ರೈಡೆಂಟ್ ಹೋಟೆಲ್‌ನಲ್ಲಿ ಬಿಸಿಸಿಐನ (BCCI) ಹಿರಿಯ ಬ್ರಾಡ್‌ಕಾಸ್ಟ್ ಎಂಜಿನಿಯರ್ ಇಯಾನ್ ವಿಲಿಯಮ್ಸ್ ಅವರು ಮಾರ್ಚ್ 24ರಿಂದ ಐಪಿಎಲ್ ಕೆಲಸಕ್ಕಾಗಿ ಟ್ರೈಡೆಂಟ್ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಐಪಿಎಲ್ ಪಂದ್ಯಗಳ ನೇರ ಪ್ರಸಾರದ ತಾಂತ್ರಿಕ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದರು.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಸಾವಿನ ನಿಜವಾದ ಕಾರಣ ಇನ್ನೂ ನಿಗೂಢವಾಗಿದೆ. ಆತ್ಮಹತ್ಯೆ, ದಾಳಿ ಅಥವಾ ಇತರ ಕಾರಣಗಳ ಸಾಧ್ಯತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಘಟನೆಯು ಐಪಿಎಲ್ 2026ರ ಸಂಭ್ರಮಕ್ಕೆ ದೊಡ್ಡ ಆಘಾತವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ಬಿಸಿಸಿಐ ಅಧಿಕಾರಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಪ್ರಸ್ತುತ ಮೃತದೇಹವನ್ನು ಮುಂಬೈನ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.





