ಐಪಿಎಲ್ ಸೀಸನ್ 18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅತ್ಯುತ್ತಮ ಪ್ರದರ್ಶನ ತೋರಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿರುವ ಆರ್‌ಸಿಬಿ, ಪ್ಲೇಆಫ್‌ಗೆ ತಲುಪುವ ತವಕದಲ್ಲಿದೆ. ಆದರೆ, ಕನ್ನಡಿಗ ಆಟಗಾರ ದೇವದತ್ ಪಡಿಕ್ಕಲ್ ಗಾಯದಿಂದಾಗಿ ಉಳಿದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ದೇವದತ್ ಪಡಿಕ್ಕಲ್ ಈ ಸೀಸನ್‌ನಲ್ಲಿ ತಂಡದ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 10 ಪಂದ್ಯಗಳಲ್ಲಿ 247 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧಶತಕಗಳಿದ್ದು, 150.61ರ ಸ್ಟ್ರೈಕ್ ರೇಟ್‌ನೊಂದಿಗೆ ಅವರ ಉತ್ತಮ ಐಪಿಎಲ್ ಪ್ರದರ್ಶನವಾಗಿದೆ. ಆದರೆ, ಮಂಡಿನೋವಿನ ಗಾಯದಿಂದಾಗಿ ಇಡೀ ಸೀಸನ್‌ನಿಂದಲೇ ಹೊರಗುಳಿದಿದ್ದಾರೆ. ಇದರಿಂದಾಗಿ, ಮೇ 17ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಪಡಿಕ್ಕಲ್ ಆಡುವುದಿಲ್ಲ.
ನಮ್ಮ ಮನೆ ಮಗ ಮಯಾಂಕ್! 🥹
After 1️⃣2️⃣ long years, 𝐡𝐞’𝐬 𝐛𝐚𝐜𝐤 where he belongs. Happy #HomeComing, Mayank. 🏡
12th Man Army will be on top of the moon hearing this, and they’ll all be right behind you. 🫶 pic.twitter.com/k5RwAGINrG
— Royal Challengers Bengaluru (@RCBTweets) May 7, 2025
ಆರ್‌ಸಿಬಿ, ಪಡಿಕ್ಕಲ್ ಬದಲಿಗೆ ಕರ್ನಾಟಕದ ಮಯಾಂಕ್ ಅಗರ್ವಾಲ್‌ರನ್ನು 1 ಕೋಟಿ ರೂಪಾಯಿಗೆ ಸೇರಿಸಿಕೊಂಡಿದೆ. ಮಯಾಂಕ್ ಐಪಿಎಲ್‌ನಲ್ಲಿ 127 ಪಂದ್ಯಗಳನ್ನಾಡಿದ್ದು, 2661 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 13 ಅರ್ಧಶತಕಗಳನ್ನು ಬಾರಿಸಿರುವ ಅವರು, 2011-2013ರ ಅವಧಿಯಲ್ಲಿ ಆರ್‌ಸಿಬಿಯಲ್ಲೇ ತಮ್ಮ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದರು. ಕಳೆದ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಆಡಿದ್ದ ಮಯಾಂಕ್, ಈ ಬಾರಿಯ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ, ಆರ್‌ಸಿಬಿಯ ಅಗತ್ಯಕ್ಕೆ ತಕ್ಕಂತೆ ಈಗ ತಂಡಕ್ಕೆ ಮರಳಿದ್ದಾರೆ.
𝘛𝘩𝘦 𝘬𝘯𝘰𝘤𝘬𝘴 𝘸𝘦𝘳𝘦 𝘤𝘳𝘪𝘴𝘱, 𝘵𝘩𝘦 𝘧𝘰𝘳𝘮 𝘸𝘢𝘴 𝘨𝘰𝘭𝘥, 🌟 𝘺𝘰𝘶𝘳 𝘴𝘵𝘰𝘳𝘺 𝘵𝘩𝘪𝘴 𝘴𝘦𝘢𝘴𝘰𝘯 𝘸𝘢𝘴 𝘮𝘢𝘨𝘪𝘤 𝘶𝘯𝘵𝘰𝘭𝘥 ✨
This campaign won’t be the same without you, Dev. Heal up fast, we’ll keep the fight on, and wait for your comeback next year,… pic.twitter.com/Z4KJ1LkxfG
— Royal Challengers Bengaluru (@RCBTweets) May 7, 2025
ಮೇ 17ರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಆರ್‌ಸಿಬಿಯ ಬ್ಯಾಟಿಂಗ್ ಕ್ರಮವನ್ನು ಬಲಪಡಿಸುವ ಸಾಧ್ಯತೆಯಿದೆ. ತಂಡದ ನಾಯಕ ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರೊಂದಿಗೆ, ಮಯಾಂಕ್‌ನ ಅನುಭವವು ಆರ್‌ಸಿಬಿಗೆ ಪ್ಲೇಆಫ್‌ನಲ್ಲಿ ಯಶಸ್ಸಿಗೆ ನೆರವಾಗ್ತಾರ ಕಾದುನೋಡಬೇಕಿದೆ.