IPL 2025 ಭರ್ಜರಿ ಓಪನಿಂಗ್: ಅಭಿಮಾನಿಗಳನ್ನು ಮನರಂಜಿಸಿದ ಬಾಲಿವುಡ್ ಸ್ಟಾರ್ಸ್!

Film (25)

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌‌‌‌‌‌ನಲ್ಲಿ IPL ಸೀಸನ್ 18,ಗ್ರಾಂಡ್ ಓಪನಿಂಗ್ ಆಗಿದೆ. ಈ ಬಾರಿಯೂ ಅದ್ಭುತವಾದ ಪರ್ಫಾಮೆನ್ಸ್, ಸ್ಟೇಜ್ ಶೋಗಳು ನಡೆದಿವೆ. ಐಪಿಎಲ್ ಮನರಂಜನಾ ಉದ್ಯಮದೊಂದಿಗೆ ಲಿಂಕ್ ಆಗಿದೆ. ಉದ್ಘಾಟನಾ ಪಂದ್ಯಕ್ಕಾಗಿ ಈಡನ್​ ಗಾರ್ಡನ್ಸ್​ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಜಗಮಗಿಸುವ ಲೈಟ್ಸ್, ಅದ್ಧೂರಿಯಾದ ಸ್ಟೇಜ್, ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಲಕ್ಷಾಂತರ ಅಭಿಮಾನಿಗಳ ಮಧ್ಯೆ ಐಪಿಎಲ್​ ಸೀಸನ್​ 18, ಗ್ರ್ಯಾಂಡ್ ಓಪನಿಂಗ್ ಪಡದುಕೊಂಡಿದೆ. ಸೂಪರ್‌ಸ್ಟಾರ್ ಸೆಲೆಬ್ರಿಟಿ ಮಾಲೀಕರಿಂದ ಹಿಡಿದು ಬಾಲಿವುಡ್‌ನ ದೊಡ್ಡ ಹೆಸರುಗಳವರೆಗೆ, IPL ಯಾವಾಗಲೂ ಸ್ಟಾರ್ ಪವರ್ ತೋರಿಸುತ್ತದೆ.


ಪ್ರತಿ IPL ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ರಂಗು ಇದ್ದೇ ಇರುತ್ತದೆ.  ಈ ವರ್ಷ ಕೋಲ್ಕತ್ತಾದ ಈಡನ್ ಗಾರ್ಡನ್ಸ್, ಉದ್ಘಾಟನಾ ಪಂದ್ಯ ಮತ್ತು ಅದಕ್ಕೂ ಮುನ್ನ ನಡೆಯುವ ಸಮಾರಂಭಕ್ಕೆ ಆತಿಥ್ಯ ವಹಿಸಿದೆ.

 


ಪಂದ್ಯ ಆರಂಭಕ್ಕೂ ಮೊದಲೇ ಸ್ಟೇಡಿಯಂನಲ್ಲಿ ನೆರೆದಿದ್ದ ಐಪಿಎಲ್​ ಫ್ಯಾನ್ಸ್​ಗಳನ್ನು ಬಾಲಿವುಡ್​ ಸ್ಟಾರ್ಸ್​ ರಂಜಿಸಿದರು. ಅಲ್ಲದೇ ಬಾಲಿವುಡ್ ಸೂಪರ್‌ಸ್ಟಾರ್ ಹಾಗೂ ಕೆಕೆಆರ್​ ತಂಡದ ಓನರ್ ಶಾರುಖ್ ಖಾನ್ ಕೂಡ ಅಭಿಮಾನಿಗಳಿಗೆ ಬಿಗ್ ಟ್ರೀಟ್ ನೀಡಿದರು. ಕೆಕೆಆರ್ ತಂಡದ ಸದಸ್ಯರು ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಆರ್​ಸಿಬಿ ಆಟಗಾರರು ಕೂಡ ಮನರಂಜನೆಯಲ್ಲಿ ಭಾಗಿಯಾಗಿ ಖುಷಿ ಪಟ್ಟರು.


ಖ್ಯಾತ ಗಾಯಕಿ ಶ್ರೇಯಾ ಘೋಷಾಲ್, ಬಾಲಿವುಡ್ ಮೆಗಾಸ್ಟಾರ್ ದಿಶಾ ಪಟಾನಿ ಮತ್ತು ಕರಣ್ ಔಜ್ಲಾದಲ್ಲಿ ದೇಸಿ ಹಿಪ್-ಹಾಪ್ ಮತ್ತು ಅತ್ಯಂತ ಜನಪ್ರಿಯ ಪಂಜಾಬಿ ರ‍್ಯಾಪರ್‌ಗಳಲ್ಲಿ ಒಬ್ಬರಾದ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೋಲ್ಕತ್ತಾದಲ್ಲಿ ಈ ಮೂವರು ಕಲಾವಿದರು ತಮ್ಮ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಈ ಸಮಾರಂಭವು ಭರ್ಜರಿಯಾಗಿ ಎಂಟರ್​ಟೈನ್​ಮೆಂಟ್, ಗ್ಲಾಮರ್ ಮತ್ತು ಉತ್ಸಾಹದ ಕಾರ್ಯಕ್ರಮವಾಗಿದೆ.

Exit mobile version