IND vs SA: ಟೀಮ್ ಇಂಡಿಯಾ ಪ್ಲೇಯಿಂಗ್ 11 ಬದಲಾಗುತ್ತದೆಯಾ?

BeFunky collage 2026 02 21T143055.678

ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ತನ್ನ ಸೂಪರ್-8 ಅಭಿಯಾನ ಆರಂಭಿಸಲಿದೆ. ಈ ಪಂದ್ಯದ ಬಳಿಕ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ.

ಸೂಪರ್-8 ಹಂತದಲ್ಲಿ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಯಾವುದಾದರೂ ಬದಲಾವಣೆ ಆಗುತ್ತದೆಯಾ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ. ಆರಂಭಿಕ ಆಲ್-ರೌಂಡರ್ ಅಭಿಷೇಕ್ ಶರ್ಮಾ ಕಳೆದ ಮೂರು ಪಂದ್ಯಗಳಲ್ಲಿ ಸರಿಯಾಗಿ ರನ್ ಕಲೆಹಾಕದಿದ್ದರೂ, ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಿದ್ದಾರೆ. ಏಕೆಂದರೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೂಡ ಫಾರ್ಮ್‌ನಲ್ಲಿಲ್ಲ.

ಹೀಗಾಗಿ ಅಭಿಷೇಕ್ ಶರ್ಮಾಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯವೂ ಅದೇ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆದಿದ್ದರಿಂದ, ಅದೇ ಪ್ಲೇಯಿಂಗ್ 11 ಅನ್ನೇ ಸೌತ್ ಆಫ್ರಿಕಾ ವಿರುದ್ಧವೂ ಮುಂದುವರೆಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 (IND vs SA):

  1. ಇಶಾನ್ ಕಿಶನ್ (wk)
  2. ಅಭಿಷೇಕ್ ಶರ್ಮಾ
  3. ತಿಲಕ್ ವರ್ಮಾ
  4. ಸೂರ್ಯಕುಮಾರ್ ಯಾದವ್ (c)
  5. ಹಾರ್ದಿಕ್ ಪಾಂಡ್ಯ
  6. ಅಕ್ಷರ್ ಪಟೇಲ್
  7. ಶಿವಂ ದುಬೆ
  8. ರಿಂಕು ಸಿಂಗ್
  9. ವರುಣ್ ಚಕ್ರವರ್ತಿ
  10. ಅರ್ಷದೀಪ್ ಸಿಂಗ್
  11. ಜಸ್‌ಪ್ರೀತ್ ಬುಮ್ರಾ

ಟೀಮ್ ಇಂಡಿಯಾ ಪೂರ್ಣ ಸ್ಕ್ವಾಡ್: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (wk), ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (wk), ರಿಂಕು ಸಿಂಗ್.

ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೂಪರ್-8ರಲ್ಲಿ ಉತ್ತಮ ಸ್ಥಾನ ಪಡೆಯಲು ಸಹಾಯವಾಗುತ್ತದೆ. ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಲಿದೆ. ಪಂದ್ಯ ಫೆಬ್ರವರಿ 22ರಂದು ಸಂಜೆ ನಡೆಯಲಿದ್ದು, ಭಾರತೀಯ ಅಭಿಮಾನಿಗಳು ತಂಡದ ಮೇಲೆ ಭರವಸೆ ಇಟ್ಟಿದ್ದಾರೆ.

Exit mobile version