ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಭಾರತ 9ನೇ ಬಾರಿಗೆ ಕಪ್ ಗೆದ್ದಿತು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಹಸ್ತಾಂತರಿಸಲು ಇಚ್ಛಿಸಿದ್ದರಿಂದ ಭಾರತ ತಂಡವು ಅದನ್ನು ನಿರಾಕರಿಸಿತು. ಇದರಿಂದ ಟ್ರೋಫಿಯನ್ನ ನಖ್ವಿಯವರೇ ತೆಗೆದುಂಕೊಂಡು ಸ್ಟೇಜ್‌ನಿಂದ ಓಡಿ ಹೋದರು.
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಈ ವಿಷಯವನ್ನು ಎಸಿಸಿ ಸಭೆಯಲ್ಲಿ ಪ್ರಸ್ತಾಪಿಸಿದರು. ನಖ್ವಿಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇದರೊಂದಿಗೆ, ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಸೇರಿದಂತೆ ಹಲವರು ನಖ್ವಿಯ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ.
ಏಷ್ಯಾ ಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 28, 2025ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಭಾರತದ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡವು ಪಾಕಿಸ್ತಾನದ ಸಲ್ಮಾನ್ ಅಗಾ ನೇತೃತ್ವದ ತಂಡವನ್ನು ಅಂತಿಮ ಓವರ್‌ನಲ್ಲಿ ಸೋಲಿಸಿತು. ಆದರೆ, ಪಂದ್ಯ ಮುಗಿದ ನಂತರದ ಪ್ರಶಸ್ತಿ ವಿತರಣಾ ಸಮಾರಂಭವು ಒಂದು ಗಂಟೆಯಷ್ಟು ವಿಳಂಬಗೊಂಡಿತು. ಕಾರಣ, ಭಾರತ ತಂಡವು ಟ್ರೋಫಿಯನ್ನು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಸ್ವೀಕರಿಸಲು ನಿರಾಕರಿಸಿತು.
ಈ ಘಟನೆಯ ನಂತರ, ಬಿಸಿಸಿಐ ಉಪಾಧ್ಯಕ್ಷ ರಜೀವ್ ಶುಕ್ಲಾ ಮತ್ತು ಎಕ್ಸ್-ಆಫಿಸಿಯೋ ಅಶೀಷ್ ಶೇಲಾರ್ ಸೇರಿದಂತೆ ಭಾರತೀಯ ಪ್ರತಿನಿಧಿಗಳು ಸೆಪ್ಟೆಂಬರ್ 30ರಂದು ದುಬೈನಲ್ಲಿ ನಡೆದ ಎಸಿಸಿ ಸಭೆಯಲ್ಲಿ ,ನಖ್ವಿ ಟ್ರೋಫಿಯನ್ನು ಭಾರತ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್‌ಗೆ ಕೊಡಿಸುವುದಾಗಿ ಹೇಳಿದರೂ, ಬಿಸಿಸಿಐ ಅದನ್ನು ನಿರಾಕರಿಸಿತು. ಭಾರತೀಯರು ನಖ್ವಿಯ ಭಾರತ ವಿರೋಧಿ ಪೋಸ್ಟ್‌ಗಳನ್ನು ಉಲ್ಲೇಖಿಸಿ, ಅಂತಹ ವ್ಯಕ್ತಿಯಿಂದ ಟ್ರೋಫಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಸಿಸಿಐ ಸೆಕ್ರಟರಿ ದೇವಜಿತ್ ನಖ್ವಿಗೆ ಪತ್ರ ಬರೆದು, ಟ್ರೋಫಿ ಮತ್ತು ಪದಕಗಳನ್ನು ತ್ವರಿತವಾಗಿ ಹಿಂದಿರುಗಿಸಿ ಎಂದು ಒತ್ತಾಯ ಮಾಡಿದ್ದಾರೆ. ನವೆಂಬರ್‌ನಲ್ಲಿ ದುಬೈನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲು ನಿರ್ಧರಿಸಿದೆ. ನಖ್ವಿ ಈಗಾಗಲೇ ಬಿಸಿಸಿಐಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದಾರೆ.
ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ನಖ್ವಿಯ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ. ಅಫ್ರಿದಿ ಮಾತನಾಡಿ, ನಖ್ವಿ ಸಾಹೆಬ್‌ಗೆ ಎರಡು ಹುದ್ದೆಗಳು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪಿಸಿಬಿ ಮತ್ತು ಇಂಟೀರಿಯರ್ ಮಿನಿಸ್ಟ್ರಿ ಸಂಪೂರ್ಣವಾಗಿ ಬೇರ್ಪಡಿಸಬೇಕು. ಇದು ದೊಡ್ಡ ನಿರ್ಧಾರ, ತ್ವರಿತವಾಗಿ ತೆಗೆದುಕೊಳ್ಳಿ. ಪಾಕಿಸ್ತಾನ ಕ್ರಿಕೆಟ್‌ಗೆ ವಿಶೇಷ ಗಮನ ಮತ್ತು ಸಮಯ ಬೇಕು. ಅಫ್ರಿದಿ ನಖ್ವಿಯನ್ನು ಕ್ರಿಕೆಟ್ ಬಗ್ಗೆ ತುಸು ಜ್ಞಾನವಿಲ್ಲ ಎಂದು ಟೀಕಿಸಿ ಬೇರೆಯವರನ್ನ ಸಲಹೆಗಾರರನ್ನು ನೇಮಿಸಿ ಎಂದು ಸಲಹೆ ನೀಡಿದ್ದಾರೆ.
.





