ಶನಿವಾರ ಯಾರಿಗೆ ಧನಲಾಭ, ಯಾರಿಗೆ ಆರೋಗ್ಯ ಸಮಸ್ಯೆ? ಸಂಪೂರ್ಣ ರಾಶಿಭವಿಷ್ಯ ಇಲ್ಲಿದೆ

Untitled design 2025 10 24T063422.649

ಇಂದು ಶನಿವಾರ. ಶನಿಯೇ ಪ್ರಧಾನ ಗ್ರಹವಾಗಿರುವ ಈ ದಿನದಲ್ಲಿ ಪ್ರತಿ ರಾಶಿಗೂ ವಿಶೇಷ ಪ್ರಭಾವ ಬೀರುತ್ತದೆ. ಕೆಲವರಿಗೆ ಧನಲಾಭ, ವ್ಯಾಪಾರದಲ್ಲಿ ಏರಿಕೆ, ಕುಟುಂಬ ಸುಖ ಇನ್ನು ಕೆಲವರಿಗೆ ಎಚ್ಚರಿಕೆಯ ಸಂದೇಶ. ಈ ಶನಿವಾರದ ದಿನದ ರಾಶಿಫಲವನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ.

ಮೇಷ ರಾಶಿ

ಇಂದು ನಿಮ್ಮ ದಿನ ಅತ್ಯಂತ ಶುಭಕರ. ವ್ಯಾಪಾರ-ವಹಿವಾಟು, ಅಲಂಕಾರ ವ್ಯವಹಾರ, ಸೌಂದರ್ಯ ಕ್ಷೇತ್ರಗಳಲ್ಲಿ ಭಾರೀ ಲಾಭದ ಯೋಗವಿದೆ. ಬಂಧು-ಸ್ನೇಹಿತರ ಸಂಪೂರ್ಣ ಸಹಕಾರ ದೊರೆಯುತ್ತದೆ. ಸಾಯಂಕಾಲ ಸ್ನೇಹಿತರೊಂದಿಗೆ ಸಂತೋಷದ ವಿಹಾರ ಸಾಧ್ಯ. ಆದರೆ ಸ್ತ್ರೀಯರು ಸ್ವಲ್ಪ ಎಚ್ಚರ ವಹಿಸಿ. ಆರೋಗ್ಯ ಹಾಗೂ ಖರ್ಚಿನಲ್ಲಿ ಜಾಗೃತೆ ಬೇಕು. ಕೆಲಸ-ಕಾರ್ಯಗಳಲ್ಲಿ ಒಳ್ಳೆಯ ಪ್ರಗತಿ ಕಾಣುತ್ತೀರಿ.

ವೃಷಭ ರಾಶಿ

ವೃತ್ತಿ-ಉದ್ಯೋಗದಲ್ಲಿ ಅನುಕೂಲಕರ ದಿನ. ಆದರೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ಬಿನ್ನಾಭಿಪ್ರಾಯ ಉಂಟಾಗಬಹುದು. ಸಣ್ಣ ವಿಷಯಕ್ಕೂ ಜಗಳವಾಗದಂತೆ ನೋಡಿಕೊಳ್ಳಿ. ದೂರದ ಪ್ರಯಾಣ ಇಂದು ತಪ್ಪಿಸಿ, ತೊಂದರೆಯ ಸಾಧ್ಯತೆ ಇದೆ. ದುರ್ಗಾ ದೇವಿಯ ಸನ್ನಿಧಾನಕ್ಕೆ ಹಾಲು ಸಮರ್ಪಿಸಿ, ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಮಿಥುನ ರಾಶಿ

ಕಾರ್ಯಗಳು ಯಶಸ್ವಿಯಾಗುವ ದಿನ. ಹಿರಿಯರ ಸಹಕಾರ, ಧನಲಾಭದ ಯೋಗವಿದೆ. ಆದರೆ ಮಹಿಳೆಯರಿಗೆ ಸ್ವಲ್ಪ ಆರೋಗ್ಯ ವ್ಯತ್ಯಾಸ, ಚರ್ಮ ಸಂಬಂಧಿ ತೊಂದರೆ ಬರಬಹುದು. ಬಂಧುಗಳೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಬಹುದು.

ಕರ್ಕಾಟಕ ರಾಶಿ

ಕೆಲಸದಲ್ಲಿ ಒಳ್ಳೆಯ ಪ್ರಗತಿ, ಚುರುಕು ಬುದ್ಧಿ, ದೈವಾನುಗ್ರಹ ಇದೆ. ಆದರೆ ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಲಲಿತಾ ಸಹಸ್ರನಾಮ ಪಠಿಸಿ, ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಸಿಂಹ ರಾಶಿ

ವೃತ್ತಿಯಲ್ಲಿ ಅನುಕೂಲವಿದೆ. ಮಹಿಳೆಯರಿಗೆ ಅಧಿಕಾರ ಬಲ ಬರುತ್ತದೆ. ಆದರೆ ಪ್ರಯಾಣದಲ್ಲಿ ಎಚ್ಚರ, ಸ್ನೇಹಿತರೊಂದಿಗೆ ವಾಗ್ವಾದ ತಪ್ಪಿಸಿ. ಕೃಷಿ ಕ್ಷೇತ್ರದವರು ಜಾಗ್ರತೆ ವಹಿಸಿ. ಶ್ರೀಕೃಷ್ಣನ ಪ್ರಾರ್ಥನೆ ಮಾಡಿ, ದಿನ ಶುಭವಾಗಿ ಮುಗಿಯುತ್ತದೆ.

ಕನ್ಯಾ ರಾಶಿ

ಕೆಲಸದ ಕ್ಷೇತ್ರದಲ್ಲಿ ಸ್ವಲ್ಪ ತೊಡಕುಗಳು ಕಾಣಿಸಬಹುದು. ಆದರೆ, ಮನೆ ವಾತಾವರಣ ಅನುಕೂಲಕರವಾಗಿರುತ್ತದೆ. ಸ್ತ್ರೀಯರು ಕುಟುಂಬದಲ್ಲಿ ಪ್ರಾಮುಖ್ಯತೆ ಪಡೆಯಲಿದ್ದಾರೆ. ಹಣ್ಣು, ಹಾಲು ಮತ್ತು ಹೈನು ಉತ್ಪಾದನೆ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ದೊರೆಯಲಿದೆ. ನರಸಿಂಹ ದೇವರ ಆರಾಧನೆ ಮಾಡಿ.

ತುಲಾ ರಾಶಿ

ಗುರುಜನರು ಮತ್ತು ಹಿರಿಯರ ಮಾರ್ಗದರ್ಶನ ನಿಮಗೆ ದೊರೆಯಲಿದೆ. ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ಜರುಗಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ. ಕುಟುಂಬದ ಒಳಗೆ ಸ್ವಲ್ಪ ತಕರಾರು ಉಂಟಾಗಬಹುದು. ಮನೆದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ ರಾಶಿ

ಆರೋಗ್ಯದ ಕಡೆ ಗಮನ ಕೊಡಬೇಕು. ಮಾನಸಿಕವಾಗಿ ಗೊಂದಲದ ಪರಿಸ್ಥಿತಿ ಉಂಟಾಗಬಹುದು. ಹೆಚ್ಚಿನ ಆಶೆ-ಬಯಕೆಗಳಿಂದ ತೊಂದರೆ ಎದುರಾಗಬಹುದು. ಶರೀರಕ್ಕೆ ಸ್ವಲ್ಪ ಪೆಟ್ಟು ತಗಲುವ ಸಾಧ್ಯತೆ ಇದೆ.

ಧನು ರಾಶಿ

ವೃತ್ತಿಯಲ್ಲಿ ಹೆಚ್ಚು ಪರಿಶ್ರಮ, ಆರೋಗ್ಯದಲ್ಲಿ ಸ್ವಲ್ಪ ತೊಂದರೆ. ಸ್ನೇಹಿತರಿಂದ ಮಾತ್ರ ಸಹಕಾರ. ಗುರು ಸನ್ನಿಧಾನಕ್ಕೆ ನವಧಾನ್ಯ ಸಮರ್ಪಿಸಿ, ಸಮಸ್ಯೆಗಳು ದೂರವಾಗುತ್ತವೆ.

ಮಕರ ರಾಶಿ

ವೃತ್ತಿ ಜೀವನದಲ್ಲಿ ಅನುಕೂಲಕರ ಸನ್ನಿವೇಶವಿರುತ್ತದೆ. ಹಿರಿಯರ ಆಶೀರ್ವಾದ ಮತ್ತು ಸಹಕಾರ ದೊರೆಯಲಿದೆ. ಕೆಲಸದಲ್ಲಿ ಹೊಸತನವನ್ನು ತರಲು ಪ್ರಯತ್ನಿಸಬಹುದು. ಮನೆದೇವರ ಪ್ರಾರ್ಥನೆ ಮಾಡಿ ಶುಭವನ್ನು ಆಹ್ವಾನಿಸಿ.

ಕುಂಭ ರಾಶಿ

ಮಿಶ್ರ ಫಲ. ಮಕ್ಕಳಿಂದ ಪ್ರೀತಿ-ಸಂತೋಷ, ಹಣಕಾಸಿನ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ, ಎಲ್ಲ ತೊಡಕುಗಳು ನಿವಾರಣೆಯಾಗುತ್ತವೆ.

ಮೀನ ರಾಶಿ

ವೃತ್ತಿಯಲ್ಲಿ ಸಹಕಾರ, ಮಕ್ಕಳಿಂದ ಸಂತೋಷ. ಸ್ನೇಹಿತರಲ್ಲಿ ಸ್ವಲ್ಪ ಅಸಮಾಧಾನ, ಧಾರ್ಮಿಕ ಕಾರ್ಯಗಳಲ್ಲಿ ಹಿನ್ನಡೆ. ಈಶ್ವರ ಪ್ರಾರ್ಥನೆ ಮಾಡಿ, ದಿನ ಶುಭವಾಗಿ ಮುಗಿಯುತ್ತದೆ.

Exit mobile version