ಸಂಖ್ಯಾಶಾಸ್ತ್ರದಲ್ಲಿ ಜನ್ಮಸಂಖ್ಯೆ ಒಂದು ವ್ಯಕ್ತಿಯ ದಿನನಿತ್ಯದ ಮನೋಭಾವ, ನಿರ್ಧಾರಗಳು, ಅವಕಾಶಗಳು ಮತ್ತು ಸವಾಲುಗಳನ್ನೂ ಸೂಚಿಸುತ್ತದೆ. ನಿಮ್ಮ ಜನ್ಮ ದಿನಾಂಕದ ಕೊನೆಯ ಅಂಕೆಯನ್ನು ಸೇರಿಸಿ ಬಂದ ಸಂಖ್ಯೆಯೇ ನಿಮ್ಮ ಜನ್ಮಸಂಖ್ಯೆ. ಈಗ ನವೆಂಬರ್ 22ರ ಶನಿವಾರ ನಿಮಗೆ ಯಾವ ರೀತಿಯ ಪರಿಣಾಮಗಳು ಬೀಳಬಹುದು ಎಂಬುದನ್ನು ಪರಿಶೀಲಿಸೋಣ.
ಜನ್ಮಸಂಖ್ಯೆ 1 (1, 10, 19, 28)
ಇಂದು ನಿಮಗೆ “ಯಾವುದಕ್ಕೂ ಬೆಲೆ ಕಟ್ಟಲೇಬೇಕು” ಎಂಬ ಮಾತು ಮತ್ತೆ ಮತ್ತೆ ನೆನಪಾಗುವ ದಿನ. ಕೆಲವೊಂದು ಸಂಗತಿಗಳಲ್ಲಿ ಇತರರು ಬಿಟ್ಟು ನೀವು ಹಿಂದುಳಿದಿದ್ದೀರಿ ಎಂಬ ಭಾವ ಮೂಡಬಹುದು. ಇದರಿಂದ ನೀವು ಬದಲಾವಣೆ ಮಾಡಲು ಮನಸ್ಸು ಮಾಡುತ್ತೀರಿ. ಮನೆಗೆ ಸಂಬಂಧಿಸಿದಂತೆ ಸುತ್ತಮುತ್ತಲಿನ ಅಲಂಕಾರ ಕಾರ್ಯಗಳಿಗೆ ಗಮನಹರಿಸುವ ಸಾಧ್ಯತೆ ಇದೆ. ಹಣ ಹೂಡಿರುವವರು ಕೆಲವು ಹೂಡಿಕೆಗಳನ್ನು ಹಿಂದಕ್ಕೆ ಪಡೆಯಬೇಕೆಂಬ ಆಲೋಚನೆ ಮಾಡಬಹುದು. ಅಧಿಕೃತ ದಾಖಲೆಗಳು–ಆಧಾರ್, ಪಾನ್, ವೋಟರ್ ಐಡಿ ಇಂಥವುಗಳನ್ನು ಜೋಪಾನವಾಗಿ ಇಡುವುದು ಮುಖ್ಯ. ಕೆಲವು ದಾಖಲೆ ಕಳೆದು ತೊಂದರೆ ಅನುಭವಿಸುವ ಸೂಚನೆ ಇದೆ.
ಜನ್ಮಸಂಖ್ಯೆ 2 (2, 11, 20, 29)
ಇಂದು ಮನೆಯ ಬಳಕೆ ವಸ್ತುಗಳು, ಕಿಚನ್ ಉಪಕರಣಗಳು, ಸ್ಮಾರ್ಟ್ ಸಾಧನಗಳು ಖರೀದಿಸಲು ನೀವು ಹೆಚ್ಚು ಸಮಯ ವ್ಯಯಿಸಬಹುದು. ಕೆಲ ವಸ್ತುಗಳನ್ನು ಬ್ರ್ಯಾಂಡೆಡ್ ಮಳಿಗೆಗಳಿಂದ ಕೊಳ್ಳುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಕೆ ಜಾಗ್ರತೆ ಅಗತ್ಯ. ರೆಸ್ಟೋರೆಂಟ್ ಅಥವಾ ಹೋಟೆಲ್ ವ್ಯವಹಾರದಲ್ಲಿರುವವರು ಹೊಸ ಐಟಂಗಳನ್ನು ಮೆನುವಿಗೆ ಸೇರಿಸಿ ಆದಾಯ ಹೆಚ್ಚಿಸಬಹುದು.
ಜನ್ಮಸಂಖ್ಯೆ 3 (3, 12, 21, 30)
ಎಲ್ಲ ವಿಷಯಕ್ಕೂ ಗದರಿಕೆ ಅಥವಾ ಎಚ್ಚರಿಕೆ ನೀಡುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದು ಇಂದು ಸ್ಪಷ್ಟವಾಗುತ್ತದೆ. ಐಟಿ, ಬಿಪಿಒ, AI ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬಳಲುವಿರಿ. ಆದರೆ ಆ ಕಾರಣಕ್ಕೆ ಇತರರ ಮೇಲೆ ಸಿಟ್ಟು ತೋರಬಾರದು. ಚಿನ್ನಾಭರಣ ವ್ಯವಹಾರದಲ್ಲಿರುವವರು ಒಪ್ಪಿಕೊಂಡ ಕೆಲಸಗಳನ್ನು ಸಮಯಕ್ಕೆ ಮುಗಿಸುವ ಒತ್ತಡ ಅನುಭವಿಸಬಹುದು. ಏನಾದರೂ ವಿಳಂಬವಿದ್ದರೆ ಗ್ರಾಹಕರಿಗೆ ನಿಜ ಸ್ಥಿತಿಯನ್ನು ವಿವರಿಸಿ. ಸುಳ್ಳು ಹೇಳುವುದು ಸಮಾಲೋಚನೆಯನ್ನು ಕಷ್ಟಪಡಿಸಬಹುದು.
ಜನ್ಮಸಂಖ್ಯೆ 4 (4, 13, 22, 31)
ಜನರ ಜತೆ ಬೆರೆಯುವಾಗ ಗಡಿ ರೇಖೆ ಎಲ್ಲಿ ಇರಬೇಕು ಎಂಬುದನ್ನು ಅರಿಯುವುದು ಇಂದಿನ ಪ್ರಮುಖ ಪಾಠ. ಹಳೆಯ ಗೆಳೆಯರನ್ನು ಭೇಟಿಯಾದಾಗ ಮಾತನಾಡುವ ಶೈಲಿ ಹಾಗೂ ಪದಬಳಕೆ ಬಗ್ಗೆ ಜಾಗರುಕರಾಗಬೇಕಾಗಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಬಯಸುವವರು ಕೆಲವು ಹೊಸ ಕೋರ್ಸ್‌ಗಳಿಗೆ ಅರ್ಜಿ ಹಾಕಬಹುದು. ಈಗಾಗಲೇ ಸ್ವೀಕೃತಿಯ ಹಂತದಲ್ಲಿ ಇರುವವರು ಪ್ರಯಾಣ ತಯಾರಿಯಲ್ಲಿ ಬ್ಯುಸಿಯಾಗುತ್ತಾರೆ. ಲೇವಾದೇವಿ ವ್ಯವಹಾರದಲ್ಲಿರುವವರು ಬಾಕಿ ಹಣವನ್ನು ತಕ್ಷಣ ವಸೂಲಿ ಮಾಡಬೇಕೆಂಬ ಒತ್ತಡಕ್ಕೆ ಒಳಗಾಗುತ್ತಾರೆ. ಕುಟುಂಬದೊಂದಿಗೆ ಫುಡ್ ಸ್ಟ್ರೀಟ್ ಅಥವಾ ಮಾಲ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 5 (5, 14, 23)
ನವ ವಿವಾಹಿತರಿಗೆ ಇದು ಅತ್ಯಂತ ಶುಭದ ದಿನ. ಹೊಸ ಕಾರು ಖರೀದಿಸುವ ಅಥವಾ ಬುಕ್ ಮಾಡುವ ನಿರ್ಧಾರ ಕೈಗೊಳ್ಳಬಹುದು. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಬಡ್ತಿ ಅಥವಾ ವೇತನ ಹೆಚ್ಚಳದ ಮಾಹಿತಿ ಬರಬಹುದು. ಹೊಸ ತಂತ್ರಜ್ಞಾನ ಕಲಿಯುವ ಆಸಕ್ತಿ ಕೂಡಾ ಮೂಡಬಹುದು. ಆದರೆ, ಹಿಂದಿನ ಕೆಲವು ಅವಮಾನಗಳ ನೆನಪು ನಿಮಗೆ ಮಾನಸಿಕವಾಗಿ ಸಂಕೋಚ ಉಂಟುಮಾಡಬಹುದು. ಇದರಿಂದ ಕೆಲ ಕೆಲಸಗಳಿಗೆ ಏಕಾಗ್ರತೆ ಕೊರತೆಯಾಗಬಹುದು.
ಜನ್ಮಸಂಖ್ಯೆ 6 (6, 15, 24)
ಆರೋಗ್ಯ ವಿಚಾರದಲ್ಲಿ ಜಾಗ್ರತೆ ಅಗತ್ಯ. ಎಣ್ಣೆ, ಖಾರ, ಮಸಾಲೆ ಪದಾರ್ಥಗಳನ್ನು ಬಿಟ್ಟು ಶಾಂತವಾದ ಮನೆಯ ಊಟವೇ ಉತ್ತಮ. ಕ್ರೆಡಿಟ್ ಕಾರ್ಡ್ ಹೊಸದಾಗಿ ತೆಗೆಯಬಯಸುವವರು ನಿರ್ಧಾರವನ್ನು ಕೆಲ ದಿನ ಮುಂದೂಡಬಹುದು. ಪಿಪಿಎಫ್, ಆರ್‌ಡಿ, ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಉಳಿತಾಯ ಯೋಜನೆಗಳಿಗೆ ಹಣ ಹಾಕುವ ಯೋಗ. ಮನೆಯಲ್ಲಿನ ಕೆಲವು ಗೊಂದಲಗಳು ಪರಿಹಾರವಾಗುವ ಸಾಧ್ಯತೆ ಇದೆ. ಹೊಸ ಬಟ್ಟೆ, ವಾಚ್, ಶೂ ಖರೀದಿ ಮಾಡುವ ಖರ್ಚು ಬರಬಹುದು.
ಜನ್ಮಸಂಖ್ಯೆ 7 (7, 16, 25)
ಇಂದು ಅಲ್ಪ ವಿಷಯಕ್ಕೂ ಜಗಳ ಮಾಡಬೇಕೆನಿಸುವ ಸ್ಥಿತಿ. ಹಠಮಾರಿ ಧೋರಣೆಯಿಂದ ಕೆಲವು ಗೊಂದಲಗಳು ಉಂಟಾಗಬಹುದು. ಕಾರ್ಯಕ್ರಮಗಳಿಗೆ ಆಹ್ವಾನ ದೊರೆತು, ಅಲ್ಲಿ ಸಿಗುವ ಊಟ-ತಿಂಡಿ ಮನಸ್ಸಿಗೆ ಸಂಭ್ರಮ ನೀಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹಕಾರಿ ವಾತಾವರಣ ಇರುವುದಿಲ್ಲ.
ಜನ್ಮಸಂಖ್ಯೆ 8 (8, 17, 26)
ಅದೃಷ್ಟ ನಿಮ್ಮ ಕಡೆ ನಿಂತಿದೆ. ಮನೆಗೆ ಸಂಬಂಧಿಸಿದ ಸಣ್ಣ ಪುಟ್ಟ ಕೆಲಸಗಳು ಸುಗಮವಾಗಿ ಮುಗಿಯುತ್ತವೆ. ಭೂಮಿ ಸಂಬಂಧಿತ ವ್ಯವಹಾರವೂ ಈಗ ಸುಲಭವಾಗಿ ಆಗುವ ಸಾಧ್ಯತೆ ಇದೆ. ವಾಸ್ತುಶಿಲ್ಪಿಗಳು ಅಥವಾ ಡಿಸೈನರ್‌ಗಳಿಗೆ ದೊಡ್ಡ ಮಟ್ಟದ ಆದಾಯ ಏರಿಕೆ ಸೂಚನೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ಬೇಗ ಗುಣಮುಖರಾಗುತ್ತಾರೆ.
ಜನ್ಮಸಂಖ್ಯೆ 9 (9, 18, 27)
ಇಡೀ ದಿನ ಕೆಲಸದ ಮಧ್ಯೆ ಓಡಾಡುವ ಪರಿಸ್ಥಿತಿ. ಅನುಕೂಲಕರವಲ್ಲದ ವಾತಾವರಣದಲ್ಲೂ ಫಲಿತಾಂಶ ತರುವ ಒತ್ತಡ ಎದುರಾಗಬಹುದು. ದುರ್ಬಲರಿಗೆ ಸಹಾಯ ಮಾಡಲು ಯೋಜನೆ ರೂಪಿಸುವಿರಿ. ಸಹೋದ್ಯೋಗಿಗಳು ನಿಮ್ಮ ನೆರವನ್ನು ಕೇಳಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಕುಟುಂಬದೊಂದಿಗೆ ಅಭಿಪ್ರಾಯ ಭೇದಗಳು ಮೂಡಬಹುದು. ಪ್ರತಿಕ್ರಿಯಿಸುವ ಮೊದಲು ಎದುರಿನವರ ಮಾತು ಸಂಪೂರ್ಣವಾಗಿ ಕೇಳುವುದು ಉತ್ತಮ.
