ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಜನಿಸಿದವರು)
ಇಂದು ನಿಮಗೆ ಸ್ವಲ್ಪ ಮಿಶ್ರಫಲದ ದಿನ. ಈ ಹಿಂದೆ ನಿಮ್ಮ ಕೆಲಸ ಮತ್ತು ನಿರ್ಧಾರಗಳನ್ನು ಮೆಚ್ಚುತ್ತಿದ್ದವರು ಇಂದು ನಿಮ್ಮನ್ನು ನಿರ್ಲಕ್ಷಿಸಬಹುದು. ಇದು ನಿಮ್ಮ ಮನಸ್ಸಿಗೆ ಕೊಂಚ ಬೇಸರ ತರಬಹುದು. ಭಾವನಾತ್ಮಕವಾಗಿ ಕುಗ್ಗದೆ, ವಾಸ್ತವವನ್ನು ಒಪ್ಪಿಕೊಳ್ಳಿ. ವಾಹನ ಚಾಲನೆ ಮಾಡುವಾಗ ಅತೀವ ಎಚ್ಚರಿಕೆ ಅಗತ್ಯ.
ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಜನಿಸಿದವರು)
ಬೇರೆಯವರ ಟೀಕೆಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳಬೇಡಿ. ಯಾರೋ ನಿಮ್ಮನ್ನು ಅವಮಾನಿಸಿದರು ಎಂಬ ಕಾರಣಕ್ಕೆ ಅವರಿಗೆ ಏನನ್ನೋ ಸಾಬೀತು ಮಾಡಲು ಹೋಗಿ ನಿಮ್ಮ ಸಮಯ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಜವಾಬ್ದಾರಿಗಳನ್ನು ನೀವೇ ನಿಭಾಯಿಸಿ.
ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಜನಿಸಿದವರು)
ಆರ್ಥಿಕವಾಗಿ ಇಂದು ನಿಮಗೆ ಶುಭ ದಿನ. ಷೇರು ಮಾರುಕಟ್ಟೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುವ ಬಲವಾದ ಆಲೋಚನೆ ಬರಲಿದೆ. ಆಪ್ತರಿಂದ ಬರಬೇಕಾದ ಹಣವು ಹೂಡಿಕೆಯ ರೂಪದಲ್ಲಿ ನಿಮ್ಮ ಕೈ ಸೇರಬಹುದು. ಇಂದು ನೀವು ಐಷಾರಾಮಿ ಕಾರು ಖರೀದಿಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಜನಿಸಿದವರು)
ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಹಳೆಯ ವಿಚಾರಗಳನ್ನು ಕೆದಕಿ ವಿವಾದ ಮಾಡಿಕೊಳ್ಳಬೇಡಿ. ಮುಖ್ಯವಾಗಿ ಹೊರಗಿನ ಆಹಾರ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಗಮನವಿರಲಿ, ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಮಾಧಾನದಿಂದ ಇರುವುದು ಇರಿ
ಜನ್ಮಸಂಖ್ಯೆ 5 (5, 14, 23ನೇ ತಾರೀಕು ಜನಿಸಿದವರು)
ಇಂದು ನೀವು ಪರರ ಸೇವೆಗಾಗಿ ಸಮಯ ಮೀಸಲಿಡುವಿರಿ. ಸ್ನೇಹಿತರು ಅಥವಾ ಸಂಬಂಧಿಕರ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲುವಿರಿ. ಹಣದ ಉಳಿತಾಯದ ಬಗ್ಗೆ ಗಂಭೀರ ಚರ್ಚೆ ನಡೆಸುವಿರಿ. ಮನೆಯಲ್ಲಿ ನಿಮ್ಮ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ ಮತ್ತು ನಿಮ್ಮ ಸಾಮರ್ಥ್ಯದ ವ್ಯಾಪ್ತಿ ಹೆಚ್ಚಲಿದೆ ಎಂಬ ಆತ್ಮವಿಶ್ವಾಸ ಮೂಡಲಿದೆ.
ಜನ್ಮಸಂಖ್ಯೆ 6 (6, 15, 24ನೇ ತಾರೀಕು ಜನಿಸಿದವರು)
ಕಲೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಇಂದು ಸುವರ್ಣ ಅವಕಾಶಗಳು ಕಾದಿವೆ. ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಭವಿಷ್ಯದಲ್ಲಿ ದೊಡ್ಡ ಲಾಭವಾಗಲಿದೆ. ಆದರೆ, ವ್ಯಾಪಾರಿಗಳಿಗೆ, ಅದರಲ್ಲೂ ಖಾದಿ ವಸ್ತ್ರ ಮಾರಾಟಗಾರರಿಗೆ ಇಂದು ಅಲ್ಪ ಹಿನ್ನಡೆಯಾಗಬಹುದು. ವ್ಯವಹಾರದಲ್ಲಿ ಬದಲಾವಣೆ ತರುವ ಆಲೋಚನೆ ಮೂಡಬಹುದು.
ಜನ್ಮಸಂಖ್ಯೆ 7 (7, 16, 25ನೇ ತಾರೀಕು ಜನಿಸಿದವರು)
ಇಂದು ನಿಮಗೆ ಲೌಕಿಕ ಜಗತ್ತಿನ ಬಗ್ಗೆ ಒಂದು ರೀತಿಯ ವಿರಕ್ತಿ ಉಂಟಾಗಬಹುದು. ಕೆಲಸದ ಜಾಗದಲ್ಲಿ ಅತಿಯಾದ ಭಾವೋದ್ವೇಗದಿಂದ ಮಾತನಾಡುವುದು ಬೇಡ. ನಿಮ್ಮ ಈಗಿನ ಮನಸ್ಥಿತಿ ತಾತ್ಕಾಲಿಕವಾಗಿದ್ದು, ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಶಾಂತವಾಗಿರಿ.
ಜನ್ಮಸಂಖ್ಯೆ 8 (8, 17, 26ನೇ ತಾರೀಕು ಜನಿಸಿದವರು)
ಮನೆಯ ಆಧುನೀಕರಣಕ್ಕೆ ಇದು ಸಕಾಲ. ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಅಥವಾ ಡಿಷ್ ವಾಷರ್ ನಂತಹ ಆಧುನಿಕ ಉಪಕರಣಗಳನ್ನು ಖರೀದಿಸುವ ಮನಸ್ಸು ಮಾಡುವಿರಿ. ಇಎಂಐ ಮೂಲಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ಆದರೆ ಸ್ನೇಹಿತರು ನೀಡುವ ಆಮಿಷಗಳಿಗೆ ಅಥವಾ ಆಫರ್ ಗಳಿಗೆ ಮರುಳಾಗಬೇಡಿ.
ಜನ್ಮಸಂಖ್ಯೆ 9 (9, 18, 27ನೇ ತಾರೀಕು ಜನಿಸಿದವರು)
ನಡೆಯುತ್ತಿದ್ದ ಕೆಲಸವೊಂದು ಅರ್ಧಕ್ಕೆ ನಿಲ್ಲುವ ಸಂಭವವಿದೆ. ಆರ್ಥಿಕ ವ್ಯವಹಾರಗಳಲ್ಲಿ ಯಾರಿಗಾದರೂ ಮಾತು ನೀಡಿದ್ದರೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಉದಾಸೀನತೆ ತೋರಿದರೆ ಗೌರವಕ್ಕೆ ಧಕ್ಕೆ ಬರಬಹುದು. ವಿದ್ಯಾರ್ಥಿಗಳಿಗೆ ಇಂದು ಶೈಕ್ಷಣಿಕವಾಗಿ ಬಹಳ ಮಹತ್ವದ ದಿನವಾಗಲಿದೆ.
