ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ಸಂಖ್ಯಾಶಾಸ್ತ್ರದ ಭವಿಷ್ಯ ಇಲ್ಲಿದೆ. ಈ ದಿನದ ಆರೋಗ್ಯ, ಹಣಕಾಸು, ಉದ್ಯೋಗ, ಮತ್ತು ಕುಟುಂಬದ ವಿಷಯದಲ್ಲಿ ಯಾವ ಜನ್ಮಸಂಖ್ಯೆಗೆ ಏನು ಫಲ ಎಂಬುದನ್ನು ತಿಳಿಯಿರಿ.
ಜನ್ಮಸಂಖ್ಯೆ 1 (1, 10, 19, 28 ರಂದು ಜನಿಸಿದವರು)
ಪ್ರಾಪಂಚಿಕ ವಿಷಯಗಳ ಬಗ್ಗೆ ನಿರಾಸಕ್ತಿ ಕಾಣಬಹುದು. ಉದ್ಯೋಗ ಅಥವಾ ವೃತ್ತಿಯ ಚರ್ಚೆಯಲ್ಲಿ ತಾತ್ಕಾಲಿಕ ಭಾವನೆಗಳಿಗೆ ಬೆಲೆ ಕೊಡದಿರಿ. ಮನೆಯ ಸ್ವಚ್ಛತೆಗೆ ಯಂತ್ರಗಳ ಖರೀದಿಯ ಆಲೋಚನೆ ಇರಲಿದೆ. ಸ್ನೇಹಿತರ ಆಫರ್‌ಗಳನ್ನು ಒಪ್ಪಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಿ.
ಜನ್ಮಸಂಖ್ಯೆ 2 (2, 11, 20, 29 ರಂದು ಜನಿಸಿದವರು)
ಕೆಲಸ ಅಥವಾ ಅವಕಾಶವೊಂದು ಮಧ್ಯದಲ್ಲಿ ನಿಲ್ಲಬಹುದು. ಹಣಕಾಸಿನ ಒಡಂಬಡಿಕೆಯಲ್ಲಿ ಗಂಭೀರವಾಗಿರಿ. ವಿದ್ಯಾರ್ಥಿಗಳಿಗೆ ಕ್ರೀಡೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಳ್ಳೆಯ ದಿನ. ಖಾದಿ ವ್ಯವಹಾರದವರಿಗೆ ಪ್ರಮಾಣ ಕಡಿಮೆಯಾಗಬಹುದು.
ಜನ್ಮಸಂಖ್ಯೆ 3 (3, 12, 21, 30 ರಂದು ಜನಿಸಿದವರು)
ಸ್ನೇಹಿತರಿಗಾಗಿ ಕೆಲಸಕ್ಕೆ ಸಹಾಯ ಮಾಡಬೇಕಾಗಬಹುದು. ಹಣದ ಉಳಿತಾಯಕ್ಕೆ ಚಿಂತೆ. ವಿವಾಹಿತರಿಗೆ ಸಂಗಾತಿಯೊಂದಿಗೆ ಸಣ್ಣ ಭಿನ್ನಾಭಿಪ್ರಾಯ. ಆಹಾರ ಸ್ವಚ್ಛತೆಗೆ ಗಮನ ಕೊಡಿ, ಇಲ್ಲದಿದ್ದರೆ ಹೊಟ್ಟೆ ಸಮಸ್ಯೆ ಕಾಡಬಹುದು.
ಜನ್ಮಸಂಖ್ಯೆ 4 (4, 13, 22, 31 ರಂದು ಜನಿಸಿದವರು)
ನಿಮ್ಮನ್ನು ಹೊಗಳಿದವರು ಇಂದು ದೂರವಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ, ಗಾಯದ ಸಾಧ್ಯತೆ. ಜವಾಬ್ದಾರಿಯನ್ನು ಇತರರಿಗೆ ವರ್ಗಾಯಿಸಬೇಡಿ. ವೇರಿಕೋಸ್ ಸಮಸ್ಯೆಗೆ ವೈದ್ಯರನ್ನು ಭೇಟಿಯಾಗಿ.
ಜನ್ಮಸಂಖ್ಯೆ 5 (5, 14, 23 ರಂದು ಜನಿಸಿದವರು)
ಷೇರು, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಗೆ ಒಳ್ಳೆಯ ದಿನ. ವಿಲಾಸಿ ಕಾರು ಖರೀದಿಯ ಯೋಗ. ಸಾಮಾಜಿಕ ಸ್ಥಾನಮಾನದಲ್ಲಿ ಬದಲಾವಣೆ. ಸಂತಾನಕ್ಕಾಗಿ ಪ್ರಯತ್ನಿಸುವವರಿಗೆ ಶುಭ ಸುದ್ದಿ.
ಜನ್ಮಸಂಖ್ಯೆ 6 (6, 15, 24 ರಂದು ಜನಿಸಿದವರು)
ಕೆಲಸಗಾರರು ಅಥವಾ ಪಾಲುದಾರರಿಗೆ ಸೂಕ್ತವಾದವರು ಸಿಗಲಿದ್ದಾರೆ. ಪ್ರಾಜೆಕ್ಟ್ ಮುನ್ನಡೆಸಲು ಸೂಚನೆ. ಸೈಟ್/ಮನೆ ಖರೀದಿಗೆ ನಿರ್ಧಾರ. ವಿಟಮಿನ್-ಡಿ ಕೊರತೆಗೆ ವೈದ್ಯರ ಭೇಟಿ. ಜೀವನಶೈಲಿಯನ್ನು ಸಕಾರಾತ್ಮಕವಾಗಿ ಬದಲಿಸಿ.
ಜನ್ಮಸಂಖ್ಯೆ 7 (7, 16, 25 ರಂದು ಜನಿಸಿದವರು)
ಹಣದ ಮೂಲಗಳು ತೆರೆದುಕೊಳ್ಳಲಿವೆ. ವಕೀಲರು, ಸಿಎ, ಟ್ಯಾಕ್ಸ್ ಕನ್ಸಲ್ಟೆಂಟ್‌ಗಳಿಗೆ ಉತ್ತಮ ದಿನ. ವೃತ್ತಿಯಲ್ಲಿ ಮುಂದಿನ ಹಂತಕ್ಕೆ ಅವಕಾಶ. ಪ್ರಭಾವಿಗಳ ಸಂಪರ್ಕ.
ಜನ್ಮಸಂಖ್ಯೆ 8 (8, 17, 26 ರಂದು ಜನಿಸಿದವರು)
ಸೋದರ-ಸೋದರಿಯರಿಂದ ಅಸಮಾಧಾನ. ಗ್ಯಾಜೆಟ್‌ನಲ್ಲಿ ತೊಂದರೆ. ನಂಬಿಕೆಯಿಟ್ಟವರಿಂದ ಗೌಪ್ಯ ಭೇದ. ಸಣ್ಣ ವಿಷಯಗಳಿಗೆ ದೊಡ್ಡವರಿಂದ ನಿರಾಸೆ.
ಜನ್ಮಸಂಖ್ಯೆ 9 (9, 18, 27 ರಂದು ಜನಿಸಿದವರು)
ಉದ್ಯೋಗಾವಕಾಶಗಳು ಸಿಗಲಿವೆ. ಫ್ರೀಲ್ಯಾನ್ಸರ್‌ಗಳಿಗೆ ದೀರ್ಘಾವಧಿಯ ಕೆಲಸ. ವಿದೇಶದ ವ್ಯಾಸಂಗ/ಉದ್ಯೋಗಕ್ಕೆ ಅಡೆತಡೆ ನಿವಾರಣೆ. ಸೋದರತ್ತೆ/ಮಾವನಿಂದ ಸಹಾಯ.





