ಸಂಖ್ಯಾಶಾಸ್ತ್ರದ ಪ್ರಕಾರ ಸೋಮವಾರದ ದಿನ ಭವಿಷ್ಯ ಏನು ಹೇಳುತ್ತೆ?

Untitled design (69)

ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 7, 2025ರ ಸೋಮವಾರದ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.. ಈ ದಿನದ ಭವಿಷ್ಯವನ್ನು ಜನ್ಮಸಂಖ್ಯೆಯ ಆಧಾರದಲ್ಲಿ ತಿಳಿಯಿರಿ.

ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)

ಈ ದಿನ ಒಂಟಿತನದ ಭಾವನೆ ಕಾಡಬಹುದು. ನಿಮ್ಮ ಮಾತುಗಳಿಂದ ಕೆಲವು ತೊಂದರೆಗಳು ಉಂಟಾಗಿರುವುದು ಗಮನಕ್ಕೆ ಬರಲಿದೆ. ಆಲೋಚಿಸಿ ಮಾತನಾಡುವುದು ಒಳಿತು. ಕೆಲಸದ ಸ್ಥಳದಲ್ಲಿ ನಿಮ್ಮ ದೌರ್ಬಲ್ಯಗಳು ಅಥವಾ ಆಲಕ್ಷ್ಯದ ಬಗ್ಗೆ ಸಹೋದ್ಯೋಗಿಗಳಿಂದ ಸೂಚನೆ ಬರಬಹುದು. ಸಿಟ್ಟಿಗೆ ಒಳಗಾಗದೆ ಆತ್ಮವಿಮರ್ಶೆ ಮಾಡಿಕೊಳ್ಳಿ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುವವರಿಗೆ ಯಶಸ್ಸಿನ ಸಾಧ್ಯತೆ ಇದೆ. ಆದರೆ ಕೆಲಸದ ಸ್ಥಳದ ಷರತ್ತುಗಳನ್ನು ಚೆನ್ನಾಗಿ ಪರಿಶೀಲಿಸಿ. ಆತುರದ ನಿರ್ಧಾರಗಳು ನಂತರ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು.

ADVERTISEMENT
ADVERTISEMENT
ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)

ಮಕ್ಕಳ ಆರೋಗ್ಯ, ಆಹಾರ ಮತ್ತು ಓಡಾಟದ ಬಗ್ಗೆ ಗಮನಹರಿಸಿ. ಆರೋಗ್ಯದಲ್ಲಿ ಏರುಪೇರು ಕಂಡರೆ, ವೈದ್ಯರ ಸಲಹೆ ಪಡೆಯಿರಿ. ಹಿಂದಿನ ಔಷಧಿಗಳನ್ನು ಬಳಸದಿರಿ, ಇದು ಸಮಸ್ಯೆಯನ್ನು ಜಟಿಲಗೊಳಿಸಬಹುದು. ಹಣಕಾಸಿನ ವ್ಯವಹಾರದಲ್ಲಿ ತೊಡಗಿರುವವರು ಬಾಕಿ ವಸೂಲಿಗೆ ಒತ್ತು ನೀಡಿ. ಕೆಲವರಿಗೆ ಹಣ ವಸೂಲಿಗಾಗಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣದ ಯೋಜನೆಗಳನ್ನು ತಪ್ಪಿಸಿ, ಏಕೆಂದರೆ ಇದು ತೊಂದರೆಗೆ ಕಾರಣವಾಗಬಹುದು.

ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)

ಕೆಲಸ ಮತ್ತು ಆದಾಯದ ಕಡೆಗೆ ಗಮನ ಕೊಡುವ ಒಲವು ಈ ದಿನ ಕಂಡುಬರಲಿದೆ. ಆದರೆ ಇದರಿಂದ ಕೆಲವು ಸ್ನೇಹಿತರು ದೂರವಾಗುವ ಸಾಧ್ಯತೆ ಇದೆ. ಸಿನಿಮಾ ಕ್ಷೇತ್ರದಲ್ಲಿರುವವರಿಗೆ ಅಹಂಕಾರದ ಆರೋಪ ಬರಬಹುದು, ಇದರಿಂದ ಕೆಲವು ಅವಕಾಶಗಳು ಕೈತಪ್ಪಬಹುದು. ಮನೆಯಲ್ಲಿ ಹಳೆಯ ವಸ್ತುಗಳ ಮಾರಾಟದ ಯೋಚನೆ ಮೂಡಲಿದೆ, ಆದರೆ ಕುಟುಂಬದ ಸಮ್ಮತಿಯಿಲ್ಲದಿರಬಹುದು.

ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಹುಟ್ಟಿದವರು)

ಸಂಗೀತಗಾರರು, ನೃತ್ಯಗಾರರು, ನಾಟಕ ಮೇಷ್ಟ್ರರಿಗೆ ಜನಪ್ರಿಯತೆ ಮತ್ತು ಸ್ಥಾನಮಾನದಲ್ಲಿ ಏರಿಕೆಯಾಗಲಿದೆ. ವರ್ಗಾವಣೆಯ ಆಸೆ ಇರುವವರಿಗೆ ಈ ದಿನ ಒಳ್ಳೆಯದು. ಆಹಾರದಲ್ಲಿ ಕಾಳು ಸೇವನೆಯಲ್ಲಿ ಎಚ್ಚರಿಕೆಯಿರಲಿ, ಅಲರ್ಜಿಯ ಸಮಸ್ಯೆ ಇರುವವರು ಮುಂಜಾಗ್ರತೆ ವಹಿಸಿ. ದೂರದಿಂದ ಶುಭ ಸುದ್ದಿಗಳು ಬರಬಹುದು. ಮೊಮ್ಮಕ್ಕಳಿಗಾಗಿ ಬೆಳ್ಳಿ ವಸ್ತುಗಳ ಖರೀದಿಯ ಯೋಗವಿದೆ.

ಜನ್ಮಸಂಖ್ಯೆ 5 (5, 14, 23ನೇ ತಾರೀಕು ಹುಟ್ಟಿದವರು)

ಈ ದಿನ ಚುರುಕಾಗಿ ಆಲೋಚಿಸಿ ಕಾರ್ಯಗತಗೊಳಿಸಲಿದ್ದೀರಿ. ತೊಂದರೆಗಳಿಂದ ಸುಲಭವಾಗಿ ಹೊರಬರಲಿದ್ದೀರಿ. ದೀರ್ಘಕಾಲದಿಂದ ಖರೀದಿಸಬೇಕೆಂದಿದ್ದ ವಸ್ತುಗಳನ್ನು ಕೊಳ್ಳಲಿದ್ದೀರಿ. ನೇಯ್ಗೆ ವೃತ್ತಿಯವರಿಗೆ ಆದಾಯ ಹೆಚ್ಚಳ ಮತ್ತು ಹೊಸ ಆರ್ಡರ್‌ಗಳು ಬರಲಿವೆ. ಬಾಡಿಗೆ ಮನೆ ಬದಲಾವಣೆಗೆ ಒಳ್ಳೆಯ ಸ್ಥಳ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯಗಳ ದಿನ ನಿಗದಿಯಾಗಲಿದೆ.

Exit mobile version