ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಏಕೆ ಗೊತ್ತಾ..? ಇಲ್ಲಿದೆ ರೋಚಕ ಇತಿಹಾಸ..!

Untitled design 2026 01 13T220443.104

ಹಿಂದೂ ಕ್ಯಾಲೆಂಡರ್ ಮತ್ತು ದೃಕ್ ಪಂಚಾಂಗದ ಪ್ರಕಾರ, 2026ರ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಆಚರಿಸಲಾಗುತ್ತಿದೆ. ಈ ಹಬ್ಬದ ಪ್ರಮುಖ ಆಕರ್ಷಣೆಯೇ ಆಕಾಶದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ನೃತ್ಯ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ. ಆದರೆ, ಈ ಆಟದ ಹಿಂದೆ ರಾಮಾಯಣದ ನಂಟು ಮತ್ತು ವೈಜ್ಞಾನಿಕ ಆರೋಗ್ಯದ ಲಾಭಗಳಿವೆ.

1. ಗಾಳಿಪಟಕ್ಕೂ ಶ್ರೀರಾಮನಿಗೂ ಇದೆ ಪುರಾತನ ನಂಟು! 

ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯವು ಕೇವಲ ಮನೋರಂಜನೆಗಾಗಿ ಆರಂಭವಾಗಿಲ್ಲ. ರಾಮಾಯಣದ ಪ್ರಕಾರ, ಮರ್ಯಾದಾ ಪುರುಷೋತ್ತಮ ಶ್ರೀರಾಮನು ಮೊದಲ ಬಾರಿಗೆ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸಿದನು ಎಂಬ ನಂಬಿಕೆಯಿದೆ. ಆತ ಹಾರಿಸಿದ ಗಾಳಿಪಟವು ಎಷ್ಟೊಂದು ಎತ್ತರಕ್ಕೆ ಹೋಗಿತ್ತೆಂದರೆ, ಅದು ನೇರವಾಗಿ ಇಂದ್ರಲೋಕವನ್ನೇ ತಲುಪಿತ್ತಂತೆ. ಈ ವಿಶೇಷ ಘಟನೆಯ ಉಲ್ಲೇಖವನ್ನು ರಾಮಚರಿತಮಾನಸದ ಬಾಲಕಾಂಡದಲ್ಲಿಯೂ ಕಾಣಬಹುದು. ಅಂದಿನಿಂದ ಭಕ್ತರು ಶ್ರೀರಾಮನ ಸ್ಮರಣಾರ್ಥವಾಗಿ ಇಂದಿಗೂ ಆಕಾಶಕ್ಕೆ ಗಾಳಿಪಟಗಳನ್ನು ಹಾರಿಸುವ ಪದ್ಧತಿ ಬೆಳೆದುಕೊಂಡು ಬಂದಿದ್ದಾರೆ.

ಗಾಳಿಪಟದ ಇತಿಹಾಸಕ್ಕೆ ಸುಮಾರು 2,000 ವರ್ಷಗಳ ಸುದೀರ್ಘ ಹಿನ್ನೆಲೆಯಿದೆ. ಇದು ಮೊದಲಿಗೆ ಚೀನಾದಲ್ಲಿ ಜನ್ಮತಾಳಿತು ಎಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಇದನ್ನು ಕ್ರೀಡೆಗಾಗಿ ಬಳಸುವ ಬದಲು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ರಹಸ್ಯ ಸಂದೇಶಗಳನ್ನು ಕಳುಹಿಸಲು ಬಳಸಲಾಗುತ್ತಿತ್ತು. ಭಾರತಕ್ಕೆ ಚೀನಾದ ಪ್ರವಾಸಿಗರಾದ ಫಾ ಹಿಯಾನ್ ಮತ್ತು ಹ್ಯೂಯೆನ್ ತ್ಸಾಂಗ್ ಮೂಲಕ ಗಾಳಿಪಟ ಪರಿಚಯವಾಯಿತು. ನಂತರದ ದಿನಗಳಲ್ಲಿ ಮೊಘಲರು ದೆಹಲಿಯಲ್ಲಿ ದೊಡ್ಡ ಮಟ್ಟದ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಇದನ್ನು ಜನಪ್ರಿಯಗೊಳಿಸಿದರು.

3. ಗಾಳಿಪಟ ಹಾರಿಸುವುದರಿಂದ ಸಿಗುವ ಆರೋಗ್ಯ ಭಾಗ್ಯ

ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಕೇವಲ ಧಾರ್ಮಿಕ ಆಚರಣೆಯಲ್ಲ, ಇದರಲ್ಲಿ ಅದ್ಭುತ ವೈಜ್ಞಾನಿಕ ಕಾರಣವೂ ಅಡಗಿದೆ:

Exit mobile version