ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ಜನ್ಮಸಂಖ್ಯೆಯನ್ನು ಲೆಕ್ಕ ಹಾಕಿ, ಆಗಸ್ಟ್ 17, 2025 ರ ಭಾನುವಾರದ ದಿನದ ಭವಿಷ್ಯವನ್ನು ತಿಳಿಯಿರಿ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮ ದಿನಾಂಕದ ಒಟ್ಟು ಅಂಕಿಗಳನ್ನು ಒಂದಂಕಿಯಾಗುವವರೆಗೆ ಕೂಡಿರಿ (ಉದಾಹರಣೆ: 19=1+9=10=1+0=1). ಈ ಕೆಳಗಿನ ಭವಿಷ್ಯವು ನಿಮ್ಮ ಜನ್ಮಸಂಖ್ಯೆಗೆ ತಕ್ಕಂತೆ ರೂಪಿಸಲಾಗಿದೆ.
ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)
ಸ್ನೇಹಿತರಿಗೆ ಕೊಟ್ಟ ಮಾತನ್ನು ಈ ದಿನ ಈಡೇರಿಸಲು ಆದ್ಯತೆ ನೀಡುವಿರಿ. ಕಟ್ಟಡ ನಿರ್ಮಾಣ ಅಥವಾ ರಿನೋವೇಷನ್ ಕೆಲಸಗಳಲ್ಲಿ ತೊಡಗಿರುವವರಿಗೆ ಒಂದೇ ಸಮಯದಲ್ಲಿ ಬಹು ಕೆಲಸಗಳು ಬರಲಿವೆ. ಉದ್ಯೋಗ ಸ್ಥಳದಲ್ಲಿ ಆಪ್ತರು ಕೆಲಸ ಬಿಡುವ ನಿರ್ಧಾರ ಕೈಗೊಳ್ಳಬಹುದು. ಮ್ಯಾನೇಜರ್ ಅಥವಾ ಉನ್ನತ ಹುದ್ದೆಯವರಿಗೆ ಸಂಸ್ಥೆಯಿಂದ ದೊಡ್ಡ ನಿರೀಕ್ಷೆ ಇದೆ ಎಂಬುದು ಗೊತ್ತಾಗಲಿದೆ. ಕೆಲಸಗಳನ್ನು ಸಮಯಕ್ಕೆ ಮುಗಿಸಿ. ಹಣ್ಣು, ಹೂವು, ತರಕಾರಿ ವ್ಯಾಪಾರಿಗಳಿಗೆ ಹೊಸ ಹೂಡಿಕೆಗೆ ಒಲವು ತೋರಲಿದೆ. ಪ್ರೀತಿಯಲ್ಲಿರುವವರು ಮನೆಯಲ್ಲಿ ಮದುವೆಯ ವಿಷಯವನ್ನು ಪ್ರಸ್ತಾಪಿಸಬಹುದು.
ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)
ಚಾಲಕರಿಗೆ ಒತ್ತಡದ ದಿನವಾಗಲಿದೆ. ವಾಹನದ ಸರ್ವೀಸ್ ಮತ್ತು ಸ್ಥಿತಿಯನ್ನು ಪರಿಶೀಲಿಸಿ. ಸಾಧ್ಯವಾದರೆ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ. ಬ್ಯಾಂಕ್ ಉದ್ಯೋಗಿಗಳಿಗೆ ಟಾರ್ಗೆಟ್ ಪರಿಷ್ಕರಣೆ ಸಾಧ್ಯತೆ ಇದೆ. ಕಾರು ಖರೀದಿಯ ಯೋಜನೆ ಮುಂದಿನ ಹಂತಕ್ಕೆ ಸಾಗಲಿದೆ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಖರ್ಚಿನ ಮೇಲೆ ನಿಗಾ ಇರಿಸಿ, ಅನಗತ್ಯ ಖರೀದಿಯಿಂದ ದೂರವಿರಿ. ಹಳೆಯ ಆಸ್ತಿ ವಿವಾದಗಳು ಸಂಧಾನದಿಂದ ಬಗೆಹರಿಯದಿರಬಹುದು.
ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)
ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಸಂಗದ ಪ್ರಯತ್ನದವರಿಗೆ ಶುಭ ಸುದ್ದಿ ಸಿಗಲಿದೆ. ಹೋಟೆಲ್ ಉದ್ಯಮಿಗಳಿಗೆ ವಿಸ್ತರಣೆಯ ಯೋಚನೆ ಬರಲಿದೆ, ಸಾಲದ ಪ್ರಕ್ರಿಯೆಗೆ ವೇಗ ಸಿಗಲಿದೆ. ಚಿನ್ನದ ಬಾಂಡ್ ಅಥವಾ ETFನಿಂದ ಹಣ ವಾಪಸ್ ಪಡೆಯುವ ಆಲೋಚನೆ ಮೂಡಲಿದೆ. ಮನೆಯ ಕೆಲಸಗಳಿಗೆ ಸಂಬಂಧಿತರೊಂದಿಗೆ ಚರ್ಚೆ ನಡೆಸುವಿರಿ. ಬಳಕೆಯಾಗದ ವಸ್ತುಗಳ ಮಾರಾಟದ ಯೋಗವಿದೆ. ವಿವಾಹದ ಪ್ರಯತ್ನಗಳು ಫಲ ನೀಡಲಿವೆ.
ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಹುಟ್ಟಿದವರು)
ಸಂಬಂಧಿಕರ ಕಾರ್ಯಕ್ರಮಗಳಿಗೆ ಸಹಾಯಕ್ಕೆ ಕರೆಯಬಹುದು. ಟೀವಿ, ಸ್ಪೀಕರ್ ಖರೀದಿಯ ತೀರ್ಮಾನ ಕೈಗೊಳ್ಳುವಿರಿ. ಅಧ್ಯಾತ್ಮ ಕಾರ್ಯಕ್ರಮಗಳಿಗೆ ದೇಣಿಗೆ ನೀಡಲಿದ್ದೀರಿ. ಆಸ್ತಿ ದಾಖಲೆಗಳಿಗೆ ಸಹಾಯ ಸಿಗಲಿದೆ. ಹಳೆಯ ಪರಿಚಿತರಿಂದ ಉಡುಗೊರೆ ಅಥವಾ ಹಣ ಸಿಗಬಹುದು. ಟೈಲ್ಸ್-ಗ್ರಾನೈಟ್ ಕೆಲಸಗಾರರಿಗೆ ದೊಡ್ಡ ಕೆಲಸ ಮತ್ತು ಆದಾಯದ ಯೋಗವಿದೆ.
ಜನ್ಮಸಂಖ್ಯೆ 5 (5, 14, 23ನೇ ತಾರೀಕು ಹುಟ್ಟಿದವರು)
ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳ ಆಲೋಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ಶಿಕ್ಷಣ ಕ್ಷೇತ್ರದವರಿಗೆ ಆದಾಯ ಹೆಚ್ಚಾಗಲಿದೆ. ಶ್ವಾಸಕೋಶ ಸಮಸ್ಯೆಯವರು ವೈದ್ಯೋಪಚಾರಕ್ಕೆ ಆದ್ಯತೆ ನೀಡಿ. ಕಾರ್ಯಕ್ರಮಗಳಿಗಾಗಿ ಹೊಸ ಬಟ್ಟೆ ಖರೀದಿಯ ಯೋಗವಿದೆ. ದಂಪತಿಗಳ ಕಲಹದಲ್ಲಿ ಮಾತಿನ ಜಾಗರೂಕತೆ ಮುಖ್ಯ. ವಕೀಲರಿಗೆ ಹೊಸ ಜನರ ನಿಯೋಜನೆಯ ತೀರ್ಮಾನ ಸಾಧ್ಯ.
ಜನ್ಮಸಂಖ್ಯೆ 6 (6, 15, 24ನೇ ತಾರೀಕು ಹುಟ್ಟಿದವರು)
ಹಣಕಾಸಿನ ವ್ಯವಸ್ಥೆಗೆ ಗಮನ ನೀಡಿ. ವಾಹನ ವಿನಿಮಯದ ಯೋಚನೆ ಬರಲಿದೆ. ಬ್ಯಾಂಕ್ ವ್ಯವಹಾರಗಳು ಮುಗಿಯಲಿವೆ. ಉದ್ಯೋಗ ಬದಲಾವಣೆಗೆ ರೆಫರೆನ್ಸ್ ಮತ್ತು ಇಂಟರ್‌ವ್ಯೂ ಸಾಧ್ಯತೆ ಇದೆ. ದೂರದ ಸಂಬಂಧಿಕರಿಂದ ಸಹಾಯದ ಕೋರಿಕೆ ಬರಬಹುದು. ಸರ್ಕಾರಿ ಉದ್ಯೋಗ ಪ್ರಯತ್ನಕ್ಕೆ ಮಾರ್ಗದರ್ಶನ ಸಿಗಲಿದೆ. ಸಾರ್ವಜನಿಕ ವಾಹನದಲ್ಲಿ ಜಾಗರೂಕರಾಗಿರಿ.
ಜನ್ಮಸಂಖ್ಯೆ 7 (7, 16, 25ನೇ ತಾರೀಕು ಹುಟ್ಟಿದವರು)
ಕುಟುಂಬದಲ್ಲಿ ಹಣಕಾಸು, ಆಸ್ತಿ ಚರ್ಚೆ ಜಗಳಕ್ಕೆ ಕಾರಣವಾಗಬಹುದು. ಮಾತಿನ ಜಾಗರೂಕತೆ ಮುಖ್ಯ. 35 ವರ್ಷ ಮೇಲ್ಪಟ್ಟವರು ಆರೋಗ್ಯ ಚೆಕಪ್‌ಗೆ ಆದ್ಯತೆ ನೀಡಿ. ಹೊಟ್ಟೆ ಸಮಸ್ಯೆಯವರು ಆಹಾರದಲ್ಲಿ ಎಚ್ಚರಿಕೆ ವಹಿಸಿ. ಲೇವಾದೇವಿ ವ್ಯವಹಾರಿಗಳು ವಿಸ್ತರಣೆಗೆ ಸಲಹೆ ತೆಗೆದುಕೊಳ್ಳುವ ಮುನ್ನ ಆಲೋಚಿಸಿ.
ಜನ್ಮಸಂಖ್ಯೆ 8 (8, 17, 26ನೇ ತಾರೀಕು ಹುಟ್ಟಿದವರು)
ಪ್ರಮುಖ ವ್ಯಕ್ತಿಗಳ ಭೇಟಿಯಿಂದ ವೃತ್ತಿಯಲ್ಲಿ ಬೆಳವಣಿಗೆ ಸಾಧ್ಯ. ಹಣಕಾಸಿನ ಚರ್ಚೆ ಕುಟುಂಬದಲ್ಲಿ ಒತ್ತಡ ಸೃಷ್ಟಿಸಲಿದೆ. ಸ್ವತಂತ್ರ ನಿರ್ಧಾರಕ್ಕೆ ಧೈರ್ಯ ಕಡಿಮೆಯಾಗಬಹುದು. ಸ್ಪಷ್ಟ ಆಲೋಚನೆಗೆ ಗೊಂದಲ ಬರಬಹುದು. ಸಣ್ಣ ಸಾಲಕ್ಕೆ ಯೋಗವಿದ್ದು, ಅಗತ್ಯಕ್ಕೆ ತಕ್ಕಷ್ಟು ಸಾಲ ತೆಗೆದುಕೊಳ್ಳಿ.
ಜನ್ಮಸಂಖ್ಯೆ 9 (9, 18, 27ನೇ ತಾರೀಕು ಹುಟ್ಟಿದವರು)
ಆಪ್ತರಿಗಾಗಿ ಉಡುಗೊರೆ ಖರೀದಿಯ ಯೋಗವಿದೆ. ವಿಲ್ಲಾ/ಗೇಟೆಡ್ ಕಮ್ಯುನಿಟಿಯಲ್ಲಿ ಸೈಟ್ ಖರೀದಿಗೆ ಒಳ್ಳೆಯ ಅವಕಾಶ ಸಿಗಲಿದೆ. ಇತರರ ಕೆಲಸಕ್ಕೆ ತೆರಳಿದಾಗ ನಿಮ್ಮ ಕೆಲಸವೂ ಮುಗಿಯಲಿದೆ. ಸಾಕು ಪ್ರಾಣಿಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಬಹುದು. ಮಕ್ಕಳ ಶಿಕ್ಷಣಕ್ಕಾಗಿ ಹೂಡಿದ ಹಣವನ್ನು ತುರ್ತು ಖರ್ಚಿಗೆ ವಾಪಸ್ ಪಡೆಯಬಹುದು.