ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆ ಪ್ರಕಾರ ಇಂದಿನ ದಿನ ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ?

Untitled design 2025 11 01t072519.471

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ತಾರೀಕು ದಿನದ ಭವಿಷ್ಯವನ್ನು ನಿರ್ಧರಿಸುತ್ತದೆ. ಜನ್ಮಸಂಖ್ಯೆಯನ್ನು ಹೇಗೆ ಕಂಡುಹಿಡಿಯುವುದು? ನಿಮ್ಮ ಜನ್ಮ ತಾರೀಕನ್ನು ಒಂದೇ ಅಂಕಿಯಾಗಿ ಕೂಡಿ ನೋಡಿ. ಉದಾಹರಣೆಗೆ, 15ರಂದು ಹುಟ್ಟಿದ್ದರೆ 1+5=6. ಇದು ನಿಮ್ಮ ಮೂಲ ಸಂಖ್ಯೆ! ಇಂದು ಮಂಗಳವಾರ, ಸಂಖ್ಯೆಗಳು ನಿಮಗೆ ಏನು ಸಂದೇಶ ಕೊಡುತ್ತವೆ? ಬನ್ನಿ, ವಿವರವಾಗಿ ನೋಡೋಣ.

ಜನ್ಮಸಂಖ್ಯೆ 1 (1, 10, 19, 28 ತಾರೀಕು): ಆಪ್ತರೊಂದಿಗಿನ ಸಿಟ್ಟು ಮೆತ್ತಗಾಗುತ್ತವೆ. ಸಣ್ಣ ಬೇಸರಗಳನ್ನು ಮರೆತು ಮುನ್ನಡೆಯಿರಿ. ಕೋರ್ಟ್ ಕೇಸುಗಳು ರಾಜೀನಾಮೆಯಲ್ಲಿ ಬಗೆಹರಿಯುವ ಯೋಗ. ರಾತ್ರಿ ಪ್ರಯಾಣದಲ್ಲಿ ಎಚ್ಚರಿಕೆ, ವಾಹನ ಚಾಲನೆ ತಪ್ಪಿಸಿ. ಆಸ್ತಿ ಕಾಗದಪತ್ರಗಳಲ್ಲಿ ತಡೆಯಾದರೂ ಧೈರ್ಯ ಕಳೆದುಕೊಳ್ಳಬೇಡಿ. ಗುಣಮಟ್ಟಕ್ಕಿಂತ ವೇಗಕ್ಕೆ ಆದ್ಯತೆ ನೀಡದಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 2 (2, 11, 20, 29 ತಾರೀಕು): ಮುಜುಗರ ತರಿಸುವವರಿಗೆ ಮುಖಕ್ಕೆ ಹೊಡೆದಂತೆ ಮಾತನಾಡಬಹುದು. ಚರ್ಮ ಸಮಸ್ಯೆಗಳು ಕಾಡುವ ಸಾಧ್ಯತೆ. ಎಣ್ಣೆ, ಹಾಲು ತಪ್ಪಿಸಿ. ಹೊರಗಿನ ಆಹಾರ ಬಿಟ್ಟು ಮನೆಯ ಊಟಕ್ಕೆ ಒತ್ತು ನೀಡಿ.. ಆರೋಗ್ಯ ಮತ್ತು ಧೈರ್ಯಕ್ಕೆ ಗಮನ ಕೊಡಿ.

ಜನ್ಮಸಂಖ್ಯೆ 3 (3, 12, 21, 30 ತಾರೀಕು): ಇತರರ ಲಾಭಕ್ಕಾಗಿ ನಿಮ್ಮ ಶ್ರಮ-ಹಣ ತೊಡಗಿಸಬೇಡಿ. ಬ್ಯಾಂಕ್ ಉದ್ಯೋಗಿಗಳು ಹಣದ ರಿಸ್ಕ್ ತಪ್ಪಿಸಿ. ಶಿಕ್ಷಣ ಕ್ಷೇತ್ರದಲ್ಲಿ ಬಡ್ತಿ ಯೋಗ. ದೂರ ಪ್ರಯಾಣದಲ್ಲಿ ಲಗೇಜ್ ಎಚ್ಚರಿಕೆ. ಸ್ವಂತ ಕರ್ತವ್ಯವನ್ನೇ ಪೂರ್ಣಗೊಳಿಸಿ. ನಂಬಿಕೆಯಲ್ಲಿ ವಂಚನೆ ಬೇಡ!

ಜನ್ಮಸಂಖ್ಯೆ 4 (4, 13, 22, 31 ತಾರೀಕು): ತಾಯಿಯೊಂದಿಗೆ ಸುಂದರ ಸಮಯ. ಸೀರೆ-ಒಡವೆ ಉಡುಗೊರೆ ಖರೀದಿ. ಸೋದರಿ-ಸೋದರ ವಿವಾಹಕ್ಕೆ ಸಂಬಂಧ ಬರುವ ಯೋಗ. ಮನೆ-ಸೈಟ್ ಹುಡುಕಾಟದಲ್ಲಿ ಯಶಸ್ಸು. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಸಾಧ್ಯ. ಕುಟುಂಬ ಆನಂದದ ದಿನ.

ಜನ್ಮಸಂಖ್ಯೆ 5 (5, 14, 23 ತಾರೀಕು): ಮಾತು ಕೇಳದವರ ಬಗ್ಗೆ ಬೇಸರ. ಕೆಲಸದಲ್ಲಿ ಒತ್ತಡ ಹಾಕಿ ಪೂರ್ಣಗೊಳಿಸಿ. ಕೃಷಿ ವ್ಯಾಪಾರಿಗಳಿಗೆ ಹೊಸ ಆದಾಯ ಮಾರ್ಗ. ಖರ್ಚು ಹೆಚ್ಚಾದರೂ ಸಂತೋಷಕ್ಕಾಗಿ ಮಾಡಿ. ಶ್ರಮದ ಫಲ ಸಿಗುವ ಸಮಯ.

ಜನ್ಮಸಂಖ್ಯೆ 6 (6, 15, 24 ತಾರೀಕು): ಕೆಲಸದಲ್ಲಿ ಅನಿರೀಕ್ಷಿತ ಯಶಸ್ಸು. ಬಡ್ತಿ-ವೇತನ ಹೆಚ್ಚಳ ಸುಳಿವು. ವಿದೇಶಿ ಅವಕಾಶಗಳು ತೆರೆಯುತ್ತವೆ. ಚಿನ್ನ ಮಾರಾಟದಿಂದ ಹೊಸ ಹೂಡಿಕೆ. ಪಾರ್ಟನರ್‌ಶಿಪ್‌ನಲ್ಲಿ ದೊಡ್ಡ ಲಾಭ.

ಜನ್ಮಸಂಖ್ಯೆ 7 (7, 16, 25 ತಾರೀಕು): ಉದ್ಯೋಗ ಹುಡುಕುವವರಿಗೆ ಪ್ರತಿಷ್ಠಿತ ಸಂಸ್ಥೆಯಿಂದ ನಿಮ್ಮ dream job offer ಬರಬಹುದು. ಧಾರ್ಮಿಕ ಕಾರ್ಯಗಳತ್ತ ಒಲವು ಹೆಚ್ಚು. ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಗಳಿಂದ ಸನ್ಮಾನ ಸಿಗಬಹುದು.

ಜನ್ಮಸಂಖ್ಯೆ 8 (8, 17, 26 ತಾರೀಕು): ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆ ಉಂಟಾಗಬಹುದು. ಆಸ್ತಿ ಪತ್ರಗಳ ವಿಚಾರದಲ್ಲಿ ಗೊಂದಲಮಯ ಪರಿಸ್ಥಿತಿ ಎದುರಾಗಬಹುದು. ಯಾರೋ ನಿಮ್ಮ ವಿಷಯದಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ಬಹಿರಂಗವಾಗಲಿದೆ. ಒಂದು ಕೆಲಸವನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಸಂದರ್ಭ ಒದಗಬಹುದು.

ಜನ್ಮಸಂಖ್ಯೆ 9 (9, 18, 27 ತಾರೀಕು): ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಸುದ್ದಿ ಕೇಳಿಬರಬಹುದು. ಆಪ್ತರ ಆರ್ಥಿಕ ಒತ್ತಡ ನಿಮ್ಮ ಮೇಲೂ ಪರಿಣಾಮ ಬೀರಬಹುದು. ಮನೆ ನಿರ್ಮಾಣ ಅಥವಾ ಜಮೀನು ವ್ಯವಹಾರಗಳಿಗೆ ಸಾಲದ ಅಗತ್ಯ ಉಂಟಾಗಬಹುದು. ಗೊಂದಲದ ಸಮಯದಲ್ಲಿ ಅನುಭವಿಗಳ ಸಲಹೆ ಪಡೆಯುವುದು ಲಾಭದಾಯಕ.

Exit mobile version