ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರ ಜನ್ಮಸಂಖ್ಯೆ ಅವರ ದಿನನಿತ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಮಾರ್ಚ್ 23ರ ದಿನವು 1ರಿಂದ 9ರವರೆಗೆ ಜನ್ಮಸಂಖ್ಯೆಯವರಿಗಾಗಿ ವಿವಿಧ ಅವಕಾಶಗಳು, ಸವಾಲುಗಳು ಮತ್ತು ಸೂಚನೆಗಳನ್ನು ನೀಡುತ್ತಿದೆ. ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಈ ದಿನದ ಫಲಿತಾಂಶ ಹೇಗಿರಲಿದೆ ಎಂಬುದನ್ನು ಇಲ್ಲಿದೆ ವಿವರವಾಗಿ ನೋಡೋಣ.
ಜನ್ಮಸಂಖ್ಯೆ 1 (1, 10, 19, 28ರಂದು ಹುಟ್ಟಿದವರು)
ಈ ದಿನ ನಿಮ್ಮ ಪ್ರತಿಭೆಗೆ ಮೆಚ್ಚುಗೆ ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಸಾಮರ್ಥ್ಯವನ್ನು ಗುರುತಿಸಲಿದ್ದಾರೆ. ಮನೆ ಅಥವಾ ಆಸ್ತಿ ಖರೀದಿ ಮಾಡಲು ಯೋಚಿಸುತ್ತಿದ್ದರೆ ಉತ್ತಮ ಅವಕಾಶಗಳು ದೊರೆಯಬಹುದು. ಮನೆಯಿಂದ ಹೊರಗೆ ಹೋಗುವ ಮೊದಲು ದೇವರ ಸ್ಮರಣೆ ಮಾಡುವುದು ಉತ್ತಮ ಫಲ ನೀಡಲಿದೆ.
ಜನ್ಮಸಂಖ್ಯೆ 2 (2, 11, 20, 29ರಂದು ಹುಟ್ಟಿದವರು)
ಆರ್ಥಿಕ ನಿಯಂತ್ರಣ ನಿಮ್ಮ ಪ್ರಮುಖ ಆದ್ಯತೆ ಆಗಿರುತ್ತದೆ. ಕುಟುಂಬದ ಅಗತ್ಯಗಳಿಗೆ ಖರ್ಚು ಮಾಡುವ ನಿರ್ಧಾರ ತೆಗೆದುಕೊಳ್ಳುತ್ತೀರಿ. ಹೊಸ ವಾಹನ ಖರೀದಿಯ ಯೋಗವಿದೆ. ಕೆಲವರಿಗೆ ಸೆಕೆಂಡ್ ಹ್ಯಾಂಡ್ ವಾಹನದ ಅವಕಾಶವೂ ದೊರೆಯಬಹುದು.
ಜನ್ಮಸಂಖ್ಯೆ 3 (3, 12, 21, 30ರಂದು ಹುಟ್ಟಿದವರು)
ಸಾಮಾಜಿಕ ಸ್ಥಾನಮಾನ ಹೆಚ್ಚಾಗುವ ಸೂಚನೆ ಇದೆ. ವಿದ್ಯಾರ್ಥಿಗಳಿಗೆ ಮನೆಬಿಟ್ಟು ದೂರದಲ್ಲೇ ವಿದ್ಯಾಭ್ಯಾಸ ಮಾಡುವ ಅವಕಾಶ ಬರಬಹುದು. ಇದು ನಿಮ್ಮ ಬೆಳವಣಿಗೆಗೆ ಸಹಾಯಕವಾಗುತ್ತದೆ. ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಖರೀದಿ ಮಾಡುವ ಯೋಗವಿದೆ.
ಜನ್ಮಸಂಖ್ಯೆ 4(4, 13, 22, 31ರಂದು ಹುಟ್ಟಿದವರು)
ಮನೆಯಲ್ಲಿ ಸಣ್ಣ ಕಾರ್ಯಕ್ರಮಗಳು ನಡೆಯಬಹುದು. ತಂದೆ ಅಥವಾ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆ ಇರಬಹುದು. ಒಂದು ವಿಷಯ ನಿಮ್ಮ ಮನಸ್ಸನ್ನು ಹೆಚ್ಚು ಕಾಡುವ ಸಾಧ್ಯತೆ ಇದೆ, ಆದ್ದರಿಂದ ಶಾಂತವಾಗಿರಿ.
ಜನ್ಮಸಂಖ್ಯೆ 5 (5, 14, 23ರಂದು ಹುಟ್ಟಿದವರು)
ಆಸ್ತಿ ಅಥವಾ ವಾಹನ ಮಾರಾಟದ ಬಗ್ಗೆ ಇಂದು ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ. ನಿಮ್ಮ ಬಜೆಟ್‌ಗೆ ತಕ್ಕಂತೆ ಹೊಸ ಅವಕಾಶಗಳು ಬರಬಹುದು. ಪ್ರಾಜೆಕ್ಟ್ ಅಥವಾ ಹೂಡಿಕೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಜನ್ಮಸಂಖ್ಯೆ 6 (6, 15, 24ರಂದು ಹುಟ್ಟಿದವರು)
ನಿಮ್ಮ ಮಾತು ಇತರರನ್ನು ಪ್ರಭಾವಿಸುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸು ತರುತ್ತವೆ. ಇತರರು ಅರ್ಧಕ್ಕೆ ಬಿಟ್ಟ ಕೆಲಸವನ್ನು ನೀವು ಪೂರ್ಣಗೊಳಿಸುವ ಹೊಣೆಗಾರಿಕೆ ಬರುತ್ತದೆ. ನಿಮ್ಮ ಸಲಹೆ ಇತರರಿಗೆ ಲಾಭದಾಯಕವಾಗಲಿದೆ.
ಜನ್ಮಸಂಖ್ಯೆ 7 (7, 16, 25ರಂದು ಹುಟ್ಟಿದವರು)
(7, 16, 25ರಂದು ಹುಟ್ಟಿದವರು)
ಉದ್ಯೋಗ ಸಂಬಂಧಿತ ಪರೀಕ್ಷೆ ಬರೆದವರಿಗೆ ಶುಭ ಸುದ್ದಿ ಸಿಗಬಹುದು. ಮದುವೆ ಯೋಚನೆ ಇರುವವರಿಗೆ ಉತ್ತಮ ಪರಿಚಯಗಳು ಬರಬಹುದು. ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 8 (8, 17, 26ರಂದು ಹುಟ್ಟಿದವರು)
ಪ್ರೀತಿ ವಿಷಯದಲ್ಲಿ ಅಪ್ರತೀಕ್ಷಿತ ಬೆಳವಣಿಗೆಗಳು ಸಂಭವಿಸಬಹುದು. ಟೀಕೆ ಮತ್ತು ಆಕ್ಷೇಪಗಳಿಂದ ಮನಸ್ಸು ಅಶಾಂತವಾಗಬಹುದು. ಇತರರ ಸಲಹೆಯನ್ನು ಸಮಾಧಾನದಿಂದ ಸ್ವೀಕರಿಸಿ, ಅಗತ್ಯವಿದ್ದರೆ ತಿದ್ದುಪಡಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 9 (9, 18, 27ರಂದು ಹುಟ್ಟಿದವರು)
ತಾಯಿ-ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಹಿರಿಯರ ಸಹಕಾರದಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಹಳೆಯ ಕೆಲಸಗಳಿಗೆ ಈಗ ಮೆಚ್ಚುಗೆ ದೊರೆಯಬಹುದು. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು.
