ಜನ್ಮಸಂಖ್ಯೆ1,(10,19,28): ಒಬ್ಬರಿಂದ ಸಹಿಸಿಕೊಂಡು ಬಂದ ವಿಷಯಗಳ ಬಗ್ಗೆ ದೂರು ಸಲ್ಲಿಸುವ ತೀರ್ಮಾನ. ಬಜೆಟ್‌ನಲ್ಲಿ ಕೈಗೊಂಡ ಕೆಲಸಕ್ಕೆ ಉದ್ಯೋಗದಲ್ಲಿ ಮೆಚ್ಚುಗೆ, ಪ್ರೋತ್ಸಾಹ. ಲೇಖಕರು, ಮುದ್ರಕರು, ಸ್ಟೇಷನರಿ ವ್ಯಾಪಾರಿಗಳಿಗೆ ಆದಾಯ ಏರಿಕೆ; ದೊಡ್ಡ ಆರ್ಡರ್ ಸುಳಿವು. ಹಳೆಯ ಗೆಳೆಯರೊಂದಿಗೆ ಮುಕ್ತ ಮಾತುಕತೆಯಿಂದ ಸಮಸ್ಯೆ ತಿಳಿಗೊಳ್ಳುವ ಅವಕಾಶ.
ಜನ್ಮಸಂಖ್ಯೆ 2,(11,20,29): ತಂದೆ/ತಂದೆ ಸಮಾನರೊಂದಿಗೆ ಅಭಿಪ್ರಾಯ ಭೇದ; ಕಾರಣ ತಿಳಿಸಿ. ಬಡ್ತಿ ನಿರೀಕ್ಷೆಯಲ್ಲಿ ಕಠಿಣ ಜವಾಬ್ದಾರಿ, ಸ್ವಲ್ಪ ಹಿನ್ನಡೆ ಸಾಧ್ಯ. ತೂಕ ನಿರ್ವಹಣೆಗೆ ವೈದ್ಯ ಸೂಚನೆ ಪಾಲಿಸಿ; ಮಾಂಸಾಹಾರಿಗಳು ಎಚ್ಚರ. ಫಿಸಿಯೋ ಥೆರಪಿ ಮುಂದುವರಿಸಿ.
ಜನ್ಮಸಂಖ್ಯೆ 2,(12,21,30): ಬ್ಯಾಂಕ್/ಹಣಕಾಸು ಸಂಸ್ಥೆಗಳಲ್ಲಿ ಹಿಂದಿನ ನಿರ್ಧಾರದ ಫಲ ಕಾಣುತ್ತದೆ. ಪ್ರಭಾವಿಯ ಒತ್ತಡಕ್ಕೆ “ಇಲ್ಲ” ಎಂದು ಸಮಸ್ಯೆ ತಡೆಯಿರಿ. ಕೃಷಿ ಹೂಡಿಕೆಯಲ್ಲಿ ಹೆಮ್ಮೆ; ತರಕಾರಿ ರೈತರಿಗೆ ದೊಡ್ಡ ಆರ್ಡರ್.
ಜನ್ಮಸಂಖ್ಯೆ4,(13,22,31): ಅನಪೇಕ್ಷಿತ ಅವಕಾಶಗಳು ಬರುತ್ತವೆ. ವಿವಾಹ ಪ್ರಸ್ತಾವಕ್ಕೆ ಒಪ್ಪಿಗೆ ಸಾಧ್ಯ. ಮನೆ ನವೀಕರಣಕ್ಕೆ ಹಣದ ಹೊಂದಾಣಿಕೆ. ಕ್ರೀಡಾಪಟುಗಳಿಗೆ ಪ್ರಾಯೋಜಕರು; ಶಿಕ್ಷಣ ಸಂಸ್ಥೆಗಳಲ್ಲಿ ಬಡ್ತಿ, ವೇತನ ಏರಿಕೆ. ಬಟ್ಟೆ, ವಾಚ್, ಪರ್ಫ್ಯೂಮ್ ಖರೀದಿ.
ಜನ್ಮಸಂಖ್ಯೆ 5,(14,23): ಸಾಮಾಜಿಕ ಸ್ಥಾನಮಾನ ಬದಲಾವಣೆಗೆ ಪ್ರಯತ್ನ. ಸಾಲದಿಂದ ಗೃಹಾಲಂಕಾರ ವಸ್ತು ಖರೀದಿ. ಗುಟ್ಟು ಸ್ನೇಹಿತರಿಗೆ ಹೇಳಿದರೆ ಸಮಸ್ಯೆ. ಕಮಿಷನ್ ವ್ಯಾಪಾರಿಗಳು ವಿಧಾನ ಬದಲಾಯಿಸಿ. ವಿದ್ಯಾರ್ಥಿಗಳಿಗೆ ಜನಪ್ರಿಯತೆ, ಪಠ್ಯೇತರ ಸಾಧನೆ.
ಜನ್ಮಸಂಖ್ಯೆ 6,(15,24): ಕುಟುಂಬ ಸಮಾರಂಭಕ್ಕೆ ಹಣದ ಹೊಂದಾಣಿಕೆ. ಸಂಘ ಚುನಾವಣೆಯಲ್ಲಿ ಕೊನೆ ಕ್ಷಣದ ಗೊಂದಲ. ಸುಮಧುರ ಸಂಬಂಧಿಗಳ ನಿಲುವು ಬದಲಾವಣೆಯಿಂದ ಸಿಟ್ಟು. ಪ್ರೇಮಿಗಳಿಗೆ ಫೋನ್/ಮೆಸೇಜ್ ರಿಪ್ಲೈ ಇಲ್ಲದ ಬೇಸರ. ಮಾಸ್ಟರ್ ಚೆಕ್-ಅಪ್, ಹಲ್ಲು ನೋವಿಗೆ ವೈದ್ಯ ಭೇಟಿ.
ಜನ್ಮಸಂಖ್ಯೆ 7,(16,25): ಮಕ್ಕಳ ಶಿಕ್ಷಣ/ನಡವಳಿಕೆ, ಮನೆ ಬದಲಾವಣೆ ಚಿಂತೆ. ಖರೀದಿಸಿದ ವಸ್ತು ಕಳವು ಬೇಸರ. ಹೂಡಿಕೆ ಸಲಹೆ ಗಂಭೀರವಾಗಿ ಪರಿಗಣಿಸಿ. ಮಹತ್ವಾಕಾಂಕ್ಷೆ ಪ್ರಾಜೆಕ್ಟ್‌ನಿಂದ ಹೊರಗಿಡುವ ಸುಳಿವು. ಹೊಟ್ಟೆ ಸಮಸ್ಯೆಗೆ ಪಥ್ಯ ಕಟ್ಟುನಿಟ್ಟು; ಸಮಾರಂಭದಲ್ಲಿ ಆಹಾರ ಎಚ್ಚರ.
ಜನ್ಮಸಂಖ್ಯೆ 8,(17,26): ಪ್ರಭಾವಿಗಳ ಸಂಪರ್ಕ, ಬೆಂಬಲ ಭರವಸೆ. ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ತೀರ್ಮಾನ. ತಾಯಿ-ತಂದೆ ಇಚ್ಛೆಗೆ ವಿರುದ್ಧ ಹೂಡಿಕೆ. ಬಾಕಿ ಹಣ ವಸೂಲಿ. ಯಂತ್ರೋಪಕರಣ ಖರೀದಿ ಅನುಕೂಲ.
ಜನ್ಮಸಂಖ್ಯೆ 9,(18,27): ಬಯಸದ್ದು ಪ್ರಯತ್ನವಿಲ್ಲದೇ ಸಿಗುತ್ತದೆ. ಆಲೋಚನೆ ಗೊಂದಲ. ಉತ್ಸಾಹ ಕಡಿಮೆ. ವಿವಾಹಕ್ಕೆ ಸೂಕ್ತ ಸಂಬಂಧ, ಮನೆಯಲ್ಲಿ ಪ್ರಸ್ತಾವಕ್ಕೆ ಒಪ್ಪಿಗೆ; ಪಾರದರ್ಶಕತೆ ಕಾಯ್ದುಕೊಳ್ಳಿ. ಮಾಧ್ಯಮಕ್ಕೆ ಬಡ್ತಿ.
