ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಚಾಂದ್ರ ಮಾಸ, ಸಿಂಹ ಸೌರ ಮಾಸ, ಮಘಾ ಮಹಾನಕ್ಷತ್ರ, ಸೋಮವಾರ, ಕೃಷ್ಣ ಪಕ್ಷ, ದ್ವಿತೀಯಾ ತಿಥಿ, ಉತ್ತರಾಫಲ್ಗುಣೀ ನಿತ್ಯನಕ್ಷತ್ರ, ವರಿಯಾನ್ ಯೋಗ, ಬಾಲವ ಕರಣ.
-
ಸೂರ್ಯೋದಯ: 06:21 AM
ADVERTISEMENTADVERTISEMENT -
ಸೂರ್ಯಾಸ್ತ: 06:48 PM
-
ಶುಭಾಶುಭ ಕಾಲ:
-
ರಾಹುಕಾಲ: 07:55 AM – 09:28 AM
-
ಗುಳಿಕ ಕಾಲ: 02:08 PM – 03:41 PM
-
ಯಮಗಂಡ ಕಾಲ: 11:09 AM – 12:25 PM
-
ರಾಶಿಫಲ ವಿವರ
ಮೇಷ ರಾಶಿ
ನಿಮ್ಮ ಪ್ರಾಮಾಣಿಕತೆ ಸಂಕಷ್ಟಗಳಿಗೆ ಪರಿಹಾರವನ್ನು ತಂದೀತು. ಗೊತ್ತಿಲ್ಲದೆಯೇ ಪುಣ್ಯ ಕಾರ್ಯಕ್ಕೆ ಒಡ್ಡಿಕೊಳ್ಳುವಿರಿ. ಪ್ರಶಂಸೆಯಿಂದ ಮುಜುಗರವಾಗಬಹುದು, ಆದರೆ ವ್ಯಾಪಾರದಲ್ಲಿ ಸೋಲು ಕಾಣಬಹುದು. ಜವಾಬ್ದಾರಿಗಳನ್ನು ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳೊಂದಿಗೆ ಸೌಹಾರ್ದತೆ ಹೆಚ್ಚಾಗಲಿದೆ. ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ, ಆದ್ದರಿಂದ ಎಚ್ಚರಿಕೆಯಿಂದಿರಿ.
ವೃಷಭ ರಾಶಿ
ನಿಯತ್ತಿನಿಂದ ದೂರವಿರುವಂತೆ ವ್ಯವಹರಿಸಬಹುದು, ಆದರೆ ಮನಸ್ಸಿನ ನಿಯಂತ್ರಣದಿಂದ ಒತ್ತಡವನ್ನು ಎದುರಿಸುವಿರಿ. ಒಳ್ಳೆಯ ಸುದ್ದಿಯಿಂದ ದಿನ ಶುಭವಾಗಲಿದೆ. ವೈಯಕ್ತಿಕ ಯೋಜನೆಗಳಿಗೆ ಯಾವುದೇ ಅಡೆತಡೆ ಇಲ್ಲ. ಲಾಭದಾಯಕ ಮಾರ್ಗಗಳು ಗೊತ್ತಾಗಬಹುದು, ಆದರೆ ಆಮಿಷಕ್ಕೆ ಒಳಗಾಗಿ ತಪ್ಪು ಮಾಡುವ ಸಾಧ್ಯತೆ ಇದೆ.
ಮಿಥುನ ರಾಶಿ
ಅಪರಿಚಿತರಿಂದ ವಂಚನೆಯ ಭಯವಿದೆ, ಆದ್ದರಿಂದ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಕಲಿಕೆಯಲ್ಲಿ ಯಶಸ್ಸು. ಕುಟುಂಬದ ಸಂಬಂಧಗಳು ಬಲಗೊಳ್ಳಲಿದೆ. ಒಂದೇ ವಿಷಯವನ್ನು ಪದೇಪದೇ ಹೇಳಿ ಇತರರಿಂದ ದೂರವಾಗಬಹುದು. ಹೂಡಿಕೆಯಿಂದ ಆರ್ಥಿಕ ಲಾಭ ಸಾಧ್ಯ.
ಕರ್ಕಾಟಕ ರಾಶಿ
ವಿದೇಶದಲ್ಲಿ ಅನಿರೀಕ್ಷಿತ ಸನ್ನಿವೇಶದಿಂದ ಬೇಸರವಾಗಬಹುದು. ಸಂಗಾತಿಯೊಂದಿಗೆ ದೂರದ ಪ್ರಯಾಣ ಸಾಧ್ಯ. ಹಣದ ಅವಶ್ಯಕತೆಗಾಗಿ ಗಳಿಕೆಯ ಮಾರ್ಗ ಯೋಚಿಸುವಿರಿ. ಕುಟುಂಬದಿಂದ ಗೌರವ ಸಿಗಲಿದೆ, ಆದರೆ ಮಾತಿನಲ್ಲಿ ಮಿತವಾಗಿರಿ.
ಸಿಂಹ ರಾಶಿ
ಅತಿಯಾದ ವಿಶ್ವಾಸದಿಂದ ಹಿನ್ನಡೆ ಸಾಧ್ಯ. ಸಿಕ್ಕಿದ್ದರಿಂದ ಸಂತೃಪ್ತಿಯಿಂದಿರಿ. ಸಾಲದ ಹಣವನ್ನು ಮರಳಿ ಪಡೆಯಬಹುದು. ಸ್ನೇಹಿತರ ಜೊತೆ ಮೋಜಿನ ಸಮಯ. ಆರೋಗ್ಯಕ್ಕೆ ಗಮನ ಕೊಡಿ, ಸಂಗಾತಿಯ ಜೊತೆ ವಾಗ್ವಾದ ಸಾಧ್ಯ.
ಕನ್ಯಾ ರಾಶಿ
ಹಣದ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಹಿರಿಯರಿಂದ ಪ್ರಶಂಸೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ವ್ಯವಹಾರದಲ್ಲಿ ಬದಲಾವಣೆಯ ಯೋಚನೆ. ಸಾಹಿತ್ಯ ಕ್ಷೇತ್ರದವರಿಗೆ ಯಶಸ್ಸಿನ ಮಾರ್ಗ ತೆರೆಯಲಿದೆ.
ತುಲಾ ರಾಶಿ
ಸಮಯಪಾಲನೆ ಮತ್ತು ಕಾರ್ಯದ ನಿಷ್ಠೆಯಿಂದ ಭಯ ದೂರವಾಗಲಿದೆ. ಮಾತುಗಳು ಕೆಲವರಿಗೆ ವಿರೋಧವಾಗಿ ಕಾಣಬಹುದು. ಆಸ್ತಿಯ ವಿಷಯದಲ್ಲಿ ಕಲಹ ಸಾಧ್ಯ. ತಾಳ್ಮೆಯಿಂದ ವ್ಯವಹರಿಸಿ.
ವೃಶ್ಚಿಕ ರಾಶಿ
ಮಕ್ಕಳ ಪ್ರೀತಿಯಲ್ಲಿ ಕಳೆದುಹೋಗುವಿರಿ. ಸಾಮಾಜಿಕ ಕೆಲಸದಲ್ಲಿ ಆಸಕ್ತಿ. ಹಣಕಾಸಿನ ಕೊರತೆಯಿಂದ ಒತ್ತಡ. ಸಮಯದ ಬೆಲೆಯನ್ನು ಅರಿತು ವ್ಯವಹರಿಸಿ.
ಧನು ರಾಶಿ
ಕಛೇರಿಯಲ್ಲಿ ನಿಮ್ಮ ಮಾತಿಗೆ ಬೆಂಬಲ. ಆರ್ಥಿಕವಾಗಿ ಸಬಲರಾಗಲು ಆಲಸ್ಯವನ್ನು ಬಿಡಿ. ಸಾಲವನ್ನು ತೀರಿಸುವಿರಿ. ಕಾನೂನು ವಿರೋಧಿ ಕಾರ್ಯಗಳಿಂದ ದೂರವಿರಿ.
ಮಕರ ರಾಶಿ
ಸೇವೆಯಲ್ಲಿ ಸಂತೋಷ. ಆತ್ಮೀಯರ ಹಣಕಾಸಿನ ವಿಷಯದಿಂದ ದೂರವಿರಿ. ಕೋಪವನ್ನು ನಿಯಂತ್ರಿಸಿ, ಆಕಸ್ಮಿಕ ವಾರ್ತೆಯಿಂದ ದುಃಖ ಸಾಧ್ಯ.
ಕುಂಭ ರಾಶಿ
ವಿವಾಹದ ಮಾತುಕತೆಯಿಂದ ಗೊಂದಲ. ಸಾಲದಿಂದ ಆತ್ಮೀಯತೆಗೆ ಧಕ್ಕೆ. ಕೋಪವನ್ನು ನಿಯಂತ್ರಿಸಿ, ಶ್ರದ್ಧೆಯಿಂದ ಕುಲದೇವರನ್ನು ಆರಾಧಿಸಿ.
ಮೀನ ರಾಶಿ
ಕುಟುಂಬಕ್ಕಾಗಿ ದುಡಿಯುವುದು ಅಭ್ಯಾಸವಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಆದಾಯ. ಹಿರಿಯರ ಬೇಸರದಿಂದ ಎಚ್ಚರಿಕೆ. ಸಾಮರ್ಥ್ಯವನ್ನು ತೋರಿಸಲು ಶುಭ ದಿನ.





