ಶನಿವಾರದ ಭವಿಷ್ಯ: ಈ ರಾಶಿಯವರಿಗೆ ಹಿರಿಯರಿಂದ ಗೌರವ ಸಿಗಲಿದೆ!

Rashi bavishya

ಶಾಲಿವಾಹನ ಶಕವರ್ಷ 1948, ದಕ್ಷಿಣಾಯನ, ಭಾದ್ರಪದ ಮಾಸ, ಕೃಷ್ಣ ಪಕ್ಷ, ಸಪ್ತಮೀ ತಿಥಿ, ಶನಿವಾರ. ಇಂದಿನ ದಿನವು ಕಡೆಗಣನೆಗೆ ಕೋಪ, ಅಧ್ಯಾತ್ಮ ಬೋಧನೆ, ಬಾಂಧವ್ಯದ ಅಸಮತೋಲನ, ಮತ್ತು ವ್ಯಾಪಾರದಲ್ಲಿ ರೂಪಾಂತರದ ವಿಶೇಷತೆಯನ್ನು ಹೊಂದಿದೆ. ಇಂದಿನ ಶುಭಾಶುಭ ಕಾಲ: ರಾಹು ಕಾಲ 09:27 – 12:00, ಗುಳಿಕ ಕಾಲ 06:22 – 07:55, ಯಮಗಂಡ ಕಾಲ 14:06 – 15:39.

ಮೇಷ ರಾಶಿ

ವಿದ್ಯಾರ್ಥಿಗಳಿಗೆ ಇಂದು ಸಂತೋಷದಾಯಕ ದಿನ. ಕೆಲವು ವಿಷಯಗಳ ಬಗ್ಗೆ ಅಜ್ಞಾನಿಯಂತೆ ಇರುವುದು ಒಳಿತು. ಅಸೂಯೆಯಿಂದ ಸೃಜನಾತ್ಮಕತೆಗೆ ತೊಂದರೆಯಾಗಬಹುದು. ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ ಒಳಗಾಗಬಹುದು. ಹೆಚ್ಚಿನ ವಿದ್ಯಾಭ್ಯಾಸದ ಅವಶ್ಯಕತೆ ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಆಲಸ್ಯವಿರಲಿದ್ದು, ಕೆಲಸಗಳು ಮುಂದೂಡಲ್ಪಡಬಹುದು. ಸಂಗಾತಿಯಿಂದ ಸಾಂತ್ವನದ ಅಗತ್ಯವಿದೆ. ಲಾಭ ಕೈತಪ್ಪುವ ಸಾಧ್ಯತೆಯಿದೆ.

ವೃಷಭ ರಾಶಿ

ಆರ್ಥಿಕ ಸ್ವಾವಲಂಬನೆಯಿಂದ ಅಹಂಕಾರ ಉಂಟಾಗಬಹುದು. ಸತ್ಯವನ್ನು ನಂಬುವ ನಿಮ್ಮ ಧೋರಣೆಯನ್ನು ಸುಳ್ಳಾಗಿಸಬಹುದು. ಯಾರೊಬ್ಬರಿಂದಲೋ ಅಪಾಯದ ಸೂಚನೆ ಬರಬಹುದು. ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದಿರಬಹುದು. ನಿರ್ಮಾಣ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಆರೋಗ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕಾಗುವುದು.

ಮಿಥುನ ರಾಶಿ

ಪ್ರಯಾಣದ ವೆಚ್ಚವು ಹೆಚ್ಚಾಗಬಹುದು. ಮಕ್ಕಳ ವಿಚಾರದಲ್ಲಿ ಬೇಸರ ಉಂಟಾಗಬಹುದು. ಪಾಲುದಾರಿಕೆಯಿಂದ ನಿಶ್ಚಿಂತೆ ಭಾವನೆ ಬರಬಹುದು. ಸ್ನೇಹಿತರಿಗೆ ಧನಸಹಾಯ ಮಾಡುವಿರಿ. ಪೂರ್ವಪುಣ್ಯದಿಂದ ದೊಡ್ಡ ಅಪಾಯ ತಪ್ಪಬಹುದು. ಕೃಷಿಯಲ್ಲಿ ಆಸಕ್ತಿ ಹೆಚ್ಚಾಗುವುದು. ಸ್ಪರ್ಧಾಮನೋಭಾವವು ಎಚ್ಚರಗೊಳಿಸುವುದು.

ಕರ್ಕಾಟಕ ರಾಶಿ

ಕೋಪವಿದ್ದರೂ ಅದನ್ನು ತೋರಿಕೆಯಿಂದ ತಡೆಯಿರಿ. ಅನಾರೋಗ್ಯದಿಂದ ಕಾರ್ಯದಲ್ಲಿ ಲವಲವಿಕೆ ಕಡಿಮೆಯಾಗಬಹುದು. ಪಾಲುದಾರಿಕೆಯು ಕಲಹದಲ್ಲಿ ಕೊನೆಗೊಳ್ಳಬಹುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಹರಕೆ ಒಪ್ಪಿಸಬಹುದು. ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲು ಕಷ್ಟವಾಗಬಹುದು. ವೈಫಲ್ಯಕ್ಕೆ ಇತರರನ್ನು ದೂಷಿಸುವ ಸಾಧ್ಯತೆ ಇದೆ.

ಸಿಂಹ ರಾಶಿ

ಅಧ್ಯಾತ್ಮಿಕ ವ್ಯಕ್ತಿಗಳ ಸಹವಾಸ ಲಭಿಸಬಹುದು. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಬಹುದು. ಆಲಸ್ಯದಿಂದ ಕಛೇರಿಗೆ ವಿಳಂಬವಾಗಬಹುದು. ವಿವಾಹಕ್ಕೆ ಆತುರ ಬೇಡ, ತಾಳ್ಮೆಯಿಂದ ಕಾಯಿರಿ. ಯೋಗ್ಯವಾದ ಮಾತುಗಳಿಂದ ಕಾರ್ಯದಲ್ಲಿ ಯಶಸ್ಸು ಲಭಿಸಬಹುದು. ವ್ಯಾಪಾರದ ಆದಾಯ ಕಡಿಮೆಯಾಗಬಹುದು.

ಕನ್ಯಾ ರಾಶಿ

ಬಾಂಧವ್ಯದಲ್ಲಿ ಅಸಮತೋಲನವಾಗದಂತೆ ಎಚ್ಚರಿಕೆ ವಹಿಸಿ. ಕಳ್ಳತನದ ಆರೋಪ ಕೇಳಿಬರಬಹುದು. ಸಂಗಾತಿಯಿಂದ ಉಡುಗೊರೆ ಲಭಿಸಬಹುದು. ವಿವಾಹದ ವಿಚಾರವನ್ನು ತಂದೆ ಚರ್ಚಿಸಬಹುದು. ಭೂಮಿಯ ದಾಖಲೆಗಳ ತಯಾರಿಯಲ್ಲಿ ಕಷ್ಟವಾಗಬಹುದು. ಆರೋಗ್ಯದಲ್ಲಿ ಏರಿಳಿತವಿರಬಹುದು.

ತುಲಾ ರಾಶಿ

ವ್ಯಾಪಾರದ ರೂಪಾಂತರದಿಂದ ಲಾಭವಾಗಬಹುದು. ನಕಾರಾತ್ಮಕ ಆಲೋಚನೆಗಳಿಂದ ಮನಸ್ಸು ಕುಗ್ಗಬಹುದು. ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಕೂಡಿಟ್ಟ ಹಣವು ಲಭಿಸಬಹುದು. ಆತ್ಮೀಯರ ಆಗಮನದಿಂದ ಕಷ್ಟವಾಗಬಹುದು. ಸಮಾಜದ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ.

ವೃಶ್ಚಿಕ ರಾಶಿ

ಇಂದು ಸ್ವಾವಲಂಬಿಯಾಗಲು ಎಲ್ಲ ಪ್ರಯತ್ನಗಳನ್ನು ಮಾಡುವಿರಿ. ವಿದ್ಯಾರ್ಥಿಗಳು ಕಾರ್ಯದಲ್ಲಿ ತೊಡಗುವರು. ಹಿರಿಯರ ಆಚರಣೆಗಳನ್ನು ಗೌರವಿಸುವಿರಿ. ಕನಸುಗಳು ನನಸಾಗದ ದುಃಖವಿರಬಹುದು. ಉದ್ಯೋಗದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಲಭಿಸಬಹುದು.

ಧನು ರಾಶಿ

ಅಪರಿಚಿತರ ಮಾತಿನಿಂದ ಉದ್ಯಮಕ್ಕೆ ಹೊಸ ದಿಕ್ಕು ಸಿಗಬಹುದು. ಮನೆಯನ್ನು ಸುಂದರವಾಗಿಡಲು ಶ್ರಮಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗ ಬದಲಾವಣೆಯ ಯೋಚನೆಯಿರಬಹುದು. ಬಿಡುವಿನ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ.

ಮಕರ ರಾಶಿ

ಮಾನಸಿಕ ಹಿಂಸೆಯಿಂದ ಕಷ್ಟವಾಗಬಹುದು. ಒತ್ತಡವನ್ನು ತಗ್ಗಿಸಲು ಪ್ರಯಾಣ ಮಾಡಬಹುದು. ಭೂಮಿಯ ವ್ಯವಹಾರದಿಂದ ಲಾಭವಾಗಬಹುದು. ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುವಿರಿ. ಉನ್ನತ ಸ್ಥಾನಕ್ಕೆ ಏರಬಹುದು. ಸಾಮರಸ್ಯದಿಂದ ಬದುಕಲು ಇಷ್ಟಪಡುವಿರಿ.

ಕುಂಭ ರಾಶಿ

ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗಿರಿ. ಉದ್ಯೋಗದಲ್ಲಿ ತೊಂದರೆಯಾಗಬಹುದು. ಆಧ್ಯಾತ್ಮಿಕ ಚಟುವಟಿಕೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು. ಹಣಕಾಸಿನ ಸುಧಾರಣೆಗೆ ಮಾರ್ಗಗಳನ್ನು ಹುಡುಕುವಿರಿ.

ಮೀನ ರಾಶಿ

ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವಿರಲಿದೆ. ಸಮಯಕ್ಕೆ ಸಿಕ್ಕ ಸ್ಫೂರ್ತಿಯಿಂದ ಕೆಲಸ ಉತ್ತಮವಾಗುವುದು. ಹೂಡಿಕೆಯಿಂದ ಭವಿಷ್ಯದಲ್ಲಿ ಲಾಭವಾಗಬಹುದು. ಸಹೋದರರ ಜೊತೆ ಸಂಬಂಧವನ್ನು ಕಾಪಾಡಿಕೊಳ್ಳಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಬಯಸುವಿರಿ.

Exit mobile version