ಇಂದು ಶನಿವಾರ, ಫೆಬ್ರವರಿ 21, 2026 ಶಿಶಿರ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷ ಚತುರ್ಥಿ ತಿಥಿ. ಇಂದಿನ ದಿನದ ವಿಶೇಷತೆಗಳು: ತಂತ್ರಗಾರಿಕೆ, ನಿರ್ಮಾಣ ಕಾರ್ಯಗಳು, ಸ್ಪರ್ಧೆ, ಆಲಸ್ಯ, ಸ್ವಾರ್ಥ, ವ್ಯಾಮೋಹ, ಕಲಹ ಮತ್ತು ಹೊಸ ಅವಕಾಶಗಳ ಮಿಶ್ರಣ. ಚಂದ್ರನ ಸಂಚಾರ ಮತ್ತು ಗ್ರಹ ಸ್ಥಿತಿಗಳಿಂದಾಗಿ ಕೆಲವು ರಾಶಿಗಳಿಗೆ ಧನ ಲಾಭ, ಕೆಲವರಿಗೆ ಗೊಂದಲ ಮತ್ತು ಎಚ್ಚರಿಕೆಯ ದಿನವಾಗಿದೆ. ನಿಮ್ಮ ರಾಶಿಯ ಭವಿಷ್ಯ ಇಲ್ಲಿದೆ:
ಮೇಷ ರಾಶಿ :
ಅಕಾರಣ ಕೋಪವನ್ನು ನಿಯಂತ್ರಿಸಿ. ನಿಜವಾದ ಮಿತ್ರರ ಬಗ್ಗೆ ತಿಳಿಯುವಿರಿ. ಸ್ವಯಂ ನಿಯಂತ್ರಣದಿಂದ ಏರಿಳಿತಗಳನ್ನು ತಡೆಯಬಹುದು. ಸಂಗಾತಿಯೊಂದಿಗೆ ದೂರವಾಗಿ ಸಂಕಟಪಡಬಹುದು. ಆದಾಯ ಹೆಚ್ಚಿಸುವ ಆಕಾಂಕ್ಷೆ ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ಕಡಿಮೆ. ಮಕ್ಕಳ ಪ್ರೀತಿ ಪಡೆಯುವಿರಿ.
ವೃಷಭ ರಾಶಿ :
ಲೆಕ್ಕಕ್ಕೆ ಸಿಗದ ಹಣ ಕಳೆದುಕೊಳ್ಳುವ ಸಾಧ್ಯತೆ. ಹುಡುಗಾಟಿಕೆ ಬಿಡಲು ಕಷ್ಟವಾಗಬಹುದು. ಅತಿ ಸಂತೋಷದ ಕ್ಷಣಗಳು ಬರಲಿವೆ. ದೀರ್ಘಕಾಲದ ಸ್ನೇಹ ಹೊಸದಾಗಿ ಆರಂಭ. ಸೌಂದರ್ಯ ವರ್ಧನೆಗೆ ಸಮಯ ಕೊಡಿ. ವ್ಯವಹಾರದಲ್ಲಿ ಗೊಂದಲ ಬೇಡ. ಸೋಲನ್ನು ಒಪ್ಪದೇ ವಾದಿಸಬಹುದು. ಪರೀಕ್ಷೆಯ ಫಲಿತಾಂಶ ನಿಮ್ಮ ವರ್ತನೆಯ ಮೇಲೆ ಅವಲಂಬಿತ.
ಮಿಥುನ ರಾಶಿ :
ಆದಾಯದಲ್ಲಿ ಹಿನ್ನಡೆ, ತಂತ್ರ ಫಲಿಸದು. ಹೂಡಿಕೆ ನಿಲ್ಲಿಸುವ ಮನಸ್ಸು. ಆಗದವರಿಗೆ ಸಲ್ಲದ ದೂರು ಕೊಡಬಹುದು. ತೀರ್ಥಯಾತ್ರೆಗೆ ಮನಸ್ಸು. ನೀರಿನ ವಿಷಯದಲ್ಲಿ ಜಾಗ್ರತೆ. ತಂತ್ರಕ್ಕೆ ಸಿಲುಕಿ ಒದ್ದಾಡಬೇಕಾಗಬಹುದು. ನಟರಿಗೆ ಅವಕಾಶ ಸಿಕ್ಕೂ ಸಿಗದಂತೆ. ಒಂದೇ ಪರಿಹಾರ ಎಲ್ಲಕ್ಕೂ ಇಲ್ಲ. ಅತಿಯಾದ ಯೋಚನೆಯಿಂದ ಮನಸ್ಸು ದುರ್ಬಲ.
ಕರ್ಕಾಟಕ ರಾಶಿ :
ಕುಟುಂಬದೊಂದಿಗೆ ಧಾರ್ಮಿಕ ಸ್ಥಳ ಪ್ರವಾಸ. ಉದ್ಯೋಗಕ್ಕೆ ಹೂಡಿಕೆ ಪ್ರಯತ್ನ. ಪ್ರಭಾವೀ ವ್ಯಕ್ತಿಗಳಿಂದ ವಂಚನೆ ಭಾಸವಾಗಬಹುದು. ರಸ್ತೆ ಸಂಚಾರದಲ್ಲಿ ಎಚ್ಚರ. ನಿಯಮಿತ ಚೌಕಟ್ಟು ಬಿಡಬೇಡಿ. ನಡತೆಯಿಂದ ಕುಲಕ್ಕೆ ಅವಮಾನ ಸಾಧ್ಯ. ನಿದ್ರೆ ಹೆಚ್ಚು. ಜವಾಬ್ದಾರಿಯೊಂದಿಗೆ ಹಿತಶತ್ರುಗಳು ಹೆಚ್ಚಬಹುದು.
ಸಿಂಹ ರಾಶಿ :
ಮನೆಯಲ್ಲಿ ಹಬ್ಬದ ವಾತಾವರಣ, ದೀರ್ಘಕಾಲದ ಸಂತೋಷ. ಕಛೇರಿ ಕೆಲಸ ಮನೆಯಲ್ಲೇ. ವ್ಯಾಪಾರ ಮನಸ್ಸಿಲ್ಲದಿದ್ದರೂ ಬೇಸರ. ಎಲ್ಲೆಡೆ ವ್ಯವಸ್ಥೆ ಮಾಡಿಕೊಳ್ಳುವಿರಿ. ಸಾಮಾಜಿಕ ತಾಣದಲ್ಲಿ ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆ ಇಷ್ಟವಾಗದು. ದ್ವಿಚಕ್ರ ವಾಹನ ಓಡಿಸುವಾಗ ಎಚ್ಚರ. ಸಂಗಾತಿಯ ಮನಃಸ್ಥಿತಿಗೆ ಪೂರಕ ಆಲೋಚನೆ.
ಕನ್ಯಾ ರಾಶಿ :
ಶುಭ ಸೂಚನೆಗಳು ತಿಳಿಯಲಿವೆ, ನಿರೀಕ್ಷೆ ಹೆಚ್ಚು. ಮಾತುಗಾರರು ವಾಚಾಳಿತನ ಕಡಿಮೆ ಮಾಡುವರು. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯಿರಿ. ಮನೆ ಕಾರ್ಯದಲ್ಲಿ ಸಮಯ ಕಳೆಯುವುದು. ಅಜ್ಞಾತ ಕೆಲಸ ಮಾಡಬೇಕಾಗಬಹುದು. ವಿಧಿಯನ್ನು ಹೀಗಳೆಯದೇ ಪ್ರಯತ್ನ ಮುಂದುವರಿಸಿ. ಮನಶ್ಚಾಂಚಲ್ಯದಿಂದ ಕಛೇರಿ ಕೆಲಸ ಸರಿಯಾಗದು.
ತುಲಾ ರಾಶಿ :
ವಾಗ್ಮಿಗಳು ಅವಕಾಶ ಸದುಪಯೋಗಿಸುವರು. ಸಂಪ್ರದಾಯಕ್ಕೆ ಆಸಕ್ತಿ ಹೆಚ್ಚು. ಉಪಕಾರಕ್ಕೆ ಪ್ರತ್ಯುಪಕಾರ ಸಿಗದೇ ಇರಬಹುದು. ಅತಿಥಿಗಳ ಆಗಮನ, ಕಾರ್ಯ ಬದಲಾಗಬಹುದು. ಕರ್ತವ್ಯಕ್ಕೆ ಹಿಂದೇಟು. ಲೆಕ್ಕಪತ್ರದಲ್ಲಿ ನಿಷ್ಠುರ ಮನೋಭಾವ. ಮನಸ್ಸಿಗೆ ಹಿಡಿಯದವರಿಂದ ದೂರ.
ವೃಶ್ಚಿಕ ರಾಶಿ :
ಔದಾಸೀನ್ಯದಿಂದ ವ್ಯಾಪಾರ ನಷ್ಟ. ಪ್ರಯಾಣದಿಂದ ಹಿಂಸೆ ಸಾಧ್ಯ. ಮಿತ್ರರ ಹಣಕ್ಕೆ ಕತ್ತರಿ. ನಿರೀಕ್ಷಿತ ಫಲ ಲಭಿಸದು. ದೇವರ ಶ್ರದ್ಧೆ ಕಡಿಮೆ. ಆಸ್ತಿ ಖರೀದಿಗೆ ಸರಿಯಾದ ಮಾಹಿತಿ ಪಡೆಯಿರಿ. ಸಹೋದ್ಯೋಗಿಗಳ ಮೇಲೆ ಅಸೂಯೆ. ಇಚ್ಛಾಶಕ್ತಿಯಿಂದ ಕೆಲಸ ಪೂರ್ಣಗೊಳಿಸಿ.
ಧನು ರಾಶಿ :
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿ ಬೇಸರ. ಉದ್ಯಮ ಸ್ಥಳದಿಂದ ದೂರ. ಸುಳ್ಳು ಹೇಳಿ ಕೆಲಸ ಮಾಡಿಸಿಕೊಳ್ಳುವಿರಿ. ಅಚಾತುರ್ಯದಿಂದ ಹಣ ನಷ್ಟ. ಬೇಡದ ಕಾರ್ಯಕ್ಕೆ ಪ್ರಚೋದನೆ. ನಿಶ್ಚಿತ ವಿವಾಹ ತಪ್ಪಿಹೋಗಬಹುದು. ವಿಘ್ನಗಳಿಗೆ ದೈವಜ್ಞರ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ನಿಮ್ಮ ಬಗ್ಗೆ ಗುಪ್ತ ಮಾಹಿತಿ ತಿಳಿಯುವುದು.
ಮಕರ ರಾಶಿ :
ಕೋಪದಲ್ಲಿ ಸಮಾಧಾನ ತಂದುಕೊಳ್ಳಿ. ಸಂವಹನದಲ್ಲಿ ತಾಳ್ಮೆ. ಸರ್ಕಾರಿ ಕೆಲಸ ಪೂರ್ಣವಾಗುವುದು. ಅನುಮಾನ ದುರಭ್ಯಾಸ ಬೆಳೆಯಬಹುದು. ಮನೆ ಸಮೀಪ ಉದ್ಯೋಗ. ಮನೆಯಲ್ಲಿ ತಾಳ್ಮೆ. ವಾಹನಕ್ಕೆ ಖರ್ಚು.
ಕುಂಭ ರಾಶಿ :
ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ. ನ್ಯಾಯಾಲಯ ಓಡಾಟ ಅಧಿಕ. ಸ್ನೇಹಿತರು ಸುಳ್ಳು ಹೇಳಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಕಾಳಜಿ. ದಿನದ ಕೆಲಸ ಹೆಚ್ಚು, ಇನ್ನೊಬ್ಬರ ಕೆಲಸಕ್ಕೆ ತಾಳ್ಮೆ ಇಲ್ಲ. ಹೂಡಿಕೆಗೆ ಪ್ರೇರಣೆ. ಉತ್ಸಾಹ ಅತ್ಯಧಿಕ.
ಮೀನ ರಾಶಿ :
ವಿವಾಹ ಕಾರ್ಯಕ್ಕೆ ಓಡಾಟ. ಆಯಾಸ ಬಿಟ್ಟರೆ ಇನ್ನೇನೂ ಆಗದು. ಇನ್ನೊಬ್ಬರ ಬಗ್ಗೆ ಕುತೂಹಲ. ಸಜ್ಜನರೊಂದಿಗೆ ಸಮಯ. ಸಂಗಾತಿಯೊಂದಿಗೆ ಭಿನ್ನಮತ. ಹಿರಿಯರ ಅನಾರೋಗ್ಯದಿಂದ ಸ್ವಂತ ಕಾರ್ಯ ತಡೆ. ಆಭರಣ ಖರೀದಿಗೆ ಉತ್ತಮ ದಿನ. ವೃದ್ಧರ ಸೇವೆ.
