2025 ಏಪ್ರಿಲ್ 8ರ ಮಂಗಳವಾರದ ದಿನ ಗ್ರಹಗಳ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ಎಂಬುದನ್ನು ತಿಳಿಯಿರಿ. ಇಂದು ಮಂಗಳ ಗ್ರಹವು ಕರ್ಕ ರಾಶಿಗೆ ಸಾಗುವಾಗ, ಚಂದ್ರನು ಸಿಂಹ ರಾಶಿಯ ಆಶ್ಲೇಷ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಜೊತೆಗೆ ಸರ್ವಾರ್ಥ ಸಿದ್ಧಿ ಯೋಗವೂ ಇರುವುದರಿಂದ, ಇಂದಿನ ದಿನವು ವಿಶೇಷವಾಗಿದೆ. ಮೇಷದಿಂದ ಮೀನ ರಾಶಿವರೆಗೆ ಯಾವ ರಾಶಿಯವರಿಗೆ ಶುಭ ಫಲ ಸಿಗಲಿದೆ ಮತ್ತು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಿಳಿಯಿರಿ.
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಹಣ ಸಂಪಾದನೆಗೆ ಹಲವು ಅವಕಾಶಗಳು ದೊರೆಯಲಿವೆ. ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಗತಿ ಸಾಧ್ಯ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ, ಸೃಜನಶೀಲ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಚಿತ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಲಾಭ ದೊರೆಯಲಿದೆ. ಕುಟುಂಬ ಜೀವನದಲ್ಲಿ ಸಂತೋಷ, ಪ್ರಣಯ ಜೀವನದಲ್ಲಿ ಬಲವಾದ ಬಂಧ. ಆದರೆ ಕೆಲಸದಲ್ಲಿ ಸ್ವಲ್ಪ ವಿಳಂಬ ಸಾಧ್ಯ. ಒಂಟಿಯಾಗಿರುವವರಿಗೆ ಹೊಸ ಪ್ರೇಮ ಸಂಬಂಧ ಆರಂಭವಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು, ಆದರೆ ಕಚೇರಿ ರಾಜಕೀಯದಿಂದ ದೂರವಿರಿ.
ಸಿಂಹ ರಾಶಿ
ವ್ಯಾಪಾರಸ್ಥರು ಗ್ರಾಹಕರ ಜೊತೆಗೆ ಸಮಾಧಾನದಿಂದ ಮಾತನಾಡಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಎಂದೋ ಉಳಿಸಿಟ್ಟ ಕಾಸು ಇಂದು ತುರ್ತಿಮನ ಕಾಲಕ್ಕೆ ಬಳಕೆಗೆ ಬರುತ್ತದೆ. ಇಂದು ನಿಮ್ಮ ಮನಸ್ಸಿಗೆ ಹಿತವಾದ ಯಾವುದಾರೂ ಒಂದು ಕೆಲಸವನ್ನು ಮಾಡಿ.
ಕಟಕ ರಾಶಿ
ಕಟಕ ರಾಶಿಯವರಿಗೆ ಹಣಕಾಸಿನ ಲಾಭ ದೊರೆಯಲಿದೆ. ಹೊಸ ಉದ್ಯೋಗದ ಅವಕಾಶಗಳು ಸಿಗಬಹುದು. ಆದರೆ ಚರ್ಮದ ಅಲರ್ಜಿಗೆ ಎಚ್ಚರಿಕೆ ಅಗತ್ಯ. ಕೆಲಸಕ್ಕಾಗಿ ಪ್ರಯಾಣ ಸಾಧ್ಯತೆ ಇದೆ.
ಕನ್ಯಾ ರಾಶಿ
ಆರೋಗ್ಯ ಉತ್ತಮ, ವ್ಯವಹಾರದಲ್ಲಿ ಲಾಭ.ನೀವು ನೀಡುವ ಅಭಿಪ್ರಾಯಗಳು ಬಾಲಿಶ ಎಂದು ಮನೆಯವರಿಗೆ ಅನ್ನಿಸಬಹುದು. ಹೂಡಕೆ ಮಾಡಿದರೂ ಅದರ ಪ್ರಮಾಣ ಕಡಿಮೆ ಇರಲಿ.
ತುಲಾ ರಾಶಿ
ಹಳೆಯ ಹೂಡಿಕೆಗಳಿಂದ ಲಾಭ, ಶೈಕ್ಷಣಿಕ ಯಶಸ್ಸು.ವಾಹನ ಸೌಕರ್ಯವನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸುವಿರಿ. ನಿಮ್ಮ ನೆಚ್ಚಿನ ಕೆಲಸಗಳು ತೃಪ್ತಿಕರ ರೀತಿಯಲ್ಲಿ ಪೂರ್ಣಗೊಳ್ಳುವುದು.
ವೃಶ್ಚಿಕ ರಾಶಿ
ಹಣಕಾಸಿನಲ್ಲಿ ಜಾಗರೂಕತೆ, ಆರೋಗ್ಯದ ಗಮನ ಅಗತ್ಯ.ನಿಮ್ಮ ಜೀವನದ ದಿಕ್ಕಿಗೆ ಹೊಸ ಮಾರ್ಗವೂ ಸೇರ್ಪಡೆಯಾಗುವುದು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಿ. ಮನೆಯಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಮಾಡಿಸುವಿರಿ.
ಧನು ರಾಶಿ
ವ್ಯವಹಾರದಲ್ಲಿ ಲಾಭ, ಕುಟುಂಬದಲ್ಲಿ ಶಾಂತಿ.ಅನೇಕ ಬದಲಾವಣೆಗಳು ನಿಮ್ಮ ಜೀವನಕ್ಕೆ ಅಗತ್ಯವಿದೆ. ಎಲ್ಲವನ್ನೂ ಸರಿ ಮಾಡಬಲ್ಲೆನೆಂಬ ಮನಃಸ್ಥಿತಿಯಿಂದ ಹೊರಗುಳಿದು ಯೋಚಿಸಿ.
ಮಕರ ರಾಶಿ
ಖರ್ಚು ನಿಯಂತ್ರಣ, ವೃತ್ತಿಜೀವನದಲ್ಲಿ ಸಾಧನೆ.ನೀವು ಸಂಬಂಧಗಳನ್ನು ಬಳಸದೇ ಸಡಿಲಾಗಬಹುದು. ವಿದ್ಯಾರ್ಥಿಗಳು ಅಧ್ಯಯನ ಮಾಡುವುದರ ಕಡೆ ಇರುವುದು. ಕಛೇರಿಯಲ್ಲಿ ನೀವು ಬಹಳ ಚಿಂತನಶೀಲವಾಗಿ ಕೆಲಸ ಮಾಡುವಿರಿ.
ಕುಂಭ ರಾಶಿ
ಹಣ ಉಳಿತಾಯ, ಕುಟುಂಬದಲ್ಲಿ ಸಂತೋಷ.ಸಂಗಾತಿಯ ಜೊತೆ ಕಾಲದ ಮಿತಿಯಿಲ್ಲದೇ ಹರಟೆಯನ್ನು ಹೊಡೆಯುವಿರಿ. ವಾಹನ ಅಪಘಾತದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.
ಮೀನ ರಾಶಿ
ಹಣಕಾಸಿನ ಅದೃಷ್ಟ, ಆರೋಗ್ಯದಲ್ಲಿ ಏರುಪೇರು.ನಿಮ್ಮ ವಿಶೇಷ ಪ್ರತಿಭೆಯು ಜನರಗೆ ಗೊತ್ತಾದೀತು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಎಚ್ಚರಿಕೆಯಿಂದ ಯೋಚಿಸಿ ಮುಂದುವರಿಯಿರಿ.
ಏಪ್ರಿಲ್ 8, 2025 ರ ಈ ದಿನವು ಗ್ರಹಗಳ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಶುಭವಿದೆ ಮತ್ತು ಯಾರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಿಳಿಸಲಾಗಿದೆ. ನಿಮ್ಮ ರಾಶಿಯ ಭವಿಷ್ಯವನ್ನು ತಿಳಿದು ದಿನವನ್ನು ಯೋಜಿಸಿ.