ಮೇಷ ರಾಶಿ: ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಮಧುರ ಕ್ಷಣಗಳು ಮರುಕಳಿಸಲಿವೆ. ಸಂಗಾತಿಯೊಂದಿಗೆ ಆಪ್ತವಾಗಿ ಕಾಲ ಕಳೆಯುವಿರಿ. ಆದರೆ, ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಅಚಾತುರ್ಯದ ಮಾತುಗಳು ಪಶ್ಚಾತ್ತಾಪಕ್ಕೆ ದಾರಿ ಮಾಡಿಕೊಡಬಹುದು.
ವೃಷಭ ರಾಶಿ: ಉದ್ಯೋಗಾಕಾಂಕ್ಷಿಗಳಿಗೆ ಇಂದು ಶುಭ ದಿನ. ವಿದೇಶಕ್ಕೆ ಹೋಗುವ ಹಳೆಯ ಕನಸು ಮತ್ತೆ ಚಿಗುರೊಡೆಯಲಿದೆ. ಕೆಲಸದಲ್ಲಿ ನಿಮ್ಮ ನೈಪುಣ್ಯತೆಗೆ ಮೆಚ್ಚುಗೆ ಸಿಕ್ಕರೂ, ಸುತ್ತಮುತ್ತಲಿನ ಅಶಿಸ್ತು ನಿಮಗೆ ಸಿಟ್ಟು ತರಿಸಬಹುದು.
ಮಿಥುನ ರಾಶಿ: ಇಂದು ನಿಮ್ಮ ನಡವಳಿಕೆಯಲ್ಲಿ ಅನಿರೀಕ್ಷಿತ ಬದಲಾವಣೆಗಳಿರಲಿವೆ. ಮನೆಯಲ್ಲಿ ಶಾಂತಿಯ ವಾತಾವರಣ ನೆಲೆಸಲಿದೆ. ಅಧಿಕಾರಿಗಳಿಂದ ಪ್ರಶಂಸೆ ದೊರೆತರೂ, ದಾಯಾದಿಗಳ ಅಸೂಯೆ ನಿಮ್ಮನ್ನು ಕಾಡಬಹುದು. ಯಾರ ಮೇಲೂ ಅತಿಯಾದ ನಂಬಿಕೆ ಬೇಡ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
ಕರ್ಕಾಟಕ ರಾಶಿ: ಇಲ್ಲಿಯ ವರೆಗೆ ನಿಲ್ಲಿಸಿದ್ದ ಮತ್ತೆ ಆರಂಭವಾಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಮುಖಂಡರ ಜೊತೆ ಚರ್ಚಿಸುವ ಅವಕಾಶ ಸಿಗಲಿದೆ. ಆದರೆ ಶತ್ರುಗಳ ಬಗ್ಗೆ ಎಚ್ಚರವಿರಲಿ. ಪ್ರೇಮ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಆರ್ಥಿಕವಾಗಿ ಸ್ವಲ್ಪ ವ್ಯಯವಾದರೂ ದೊಡ್ಡ ತೊಂದರೆಯಿಲ್ಲ.
ಸಿಂಹ ರಾಶಿ: ಇಂದು ನಿಮಗೆ ವ್ಯಕ್ತಿಗಳಿಗಿಂತ ಕೆಲಸವೇ ಆದ್ಯತೆಯಾಗಲಿದೆ. ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ಆದಾಯವನ್ನು ಜಾಣ್ಮೆಯಿಂದ ಹೂಡಿಕೆ ಮಾಡಿ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ತಾಳ್ಮೆಯಿಂದ ವರ್ತಿಸಿ.
ಕನ್ಯಾ ರಾಶಿ: ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರ ನಿಮಗಿರಲಿದೆ. ವ್ಯಾಪಾರದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ. ಹಳೆಯ ಸಾಮಾಜಿಕ ಕೆಲಸಗಳಿಗೆ ಇಂದು ಗೌರವ ಲಭಿಸುವ ಸಂಭವವಿದೆ.
ತುಲಾ ರಾಶಿ: ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಬಂಧುಗಳು ಸಹಾಯಕ್ಕಾಗಿ ನಿಮ್ಮನ್ನು ಹುಡುಕಿ ಬರಬಹುದು. ಆಸ್ತಿ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲು ಇದು ಸಕಾಲ. ಬೆನ್ನು ನೋವಿನಂತಹ ಆರೋಗ್ಯ ಸಮಸ್ಯೆ ಕಾಡಬಹುದು, ವಿಶ್ರಾಂತಿ ಅಗತ್ಯ.
ವೃಶ್ಚಿಕ ರಾಶಿ: ಪ್ರೇಮಿಗಳು ಇಂದು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಆರ್ಥಿಕ ಸ್ಥಿತಿ ಸಾಧಾರಣವಾಗಿರುವುದರಿಂದ ಉಳಿತಾಯದ ಕಡೆ ಗಮನಹರಿಸಿ. ಭೂ ವ್ಯವಹಾರ ಮಾಡುವಾಗ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಭವಿಷ್ಯದ ಬಗ್ಗೆ ಅತಿಯಾದ ಆತಂಕ ಬೇಡ.
ಧನು ರಾಶಿ: ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಬೇಡಿ, ಅದು ನಿಮಗೆ ಮುಳುವಾಗಬಹುದು. ಬರಬೇಕಿದ್ದ ಬಾಕಿ ಹಣ ಕೈ ಸೇರುವ ಸಾಧ್ಯತೆ ಇದೆ. ಸಮಾರಂಭಗಳಲ್ಲಿ ಭಾಗವಹಿಸುವಿರಿ. ಆದರೆ, ಯೋಜಿತ ಕೆಲಸಗಳಲ್ಲಿ ಸಣ್ಣಪುಟ್ಟ ತಪ್ಪುಗಳು ಕಾಣಿಸಿಕೊಳ್ಳಬಹುದು.
ಮಕರ ರಾಶಿ: ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕರಾಗಿರಿ. ಅತಿಯಾದ ನಿರೀಕ್ಷೆ ನಿರಾಸೆಗೆ ಕಾರಣವಾಗಬಹುದು. ಆರೋಗ್ಯದ ಮೇಲೆ ಮಾನಸಿಕ ಒತ್ತಡ ಪ್ರಭಾವ ಬೀರಬಹುದು. ನೇರ ಮಾತು ಎಲ್ಲರಿಗೂ ಇಷ್ಟವಾಗದಿರಬಹುದು, ಮೃದುವಾಗಿ ಮಾತನಾಡಿ.
ಕುಂಭ ರಾಶಿ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೂ ಖರ್ಚು ಅಧಿಕವಾಗಲಿದೆ. ಅನಾವಶ್ಯಕ ಚಿಂತೆಗಳಿಂದ ದೂರವಿದ್ದರೆ ಮಾತ್ರ ಆರೋಗ್ಯ ಸುಧಾರಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೆಲಸಗಳನ್ನು ಇತರರೊಂದಿಗೆ ಹಂಚಿಕೊಂಡು ಮಾಡುವುದು ಉತ್ತಮ.
ಮೀನ ರಾಶಿ: ವ್ಯವಹಾರದ ದಾಖಲೆಗಳ ಸಮಸ್ಯೆ ಇಂದು ಬಗೆಹರಿಯಲಿದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಕಾನೂನು ಬಾಹಿರ ಕೆಲಸಗಳಿಂದ ದೂರವಿರಿ. ಶ್ರದ್ಧೆಯಿಂದ ಕೆಲಸ ಮಾಡಿ, ಬಂಧುಗಳ ಜೊತೆಗಿನ ವಾದ-ವಿವಾದಗಳನ್ನು ತಪ್ಪಿಸಿ.
