ಜನ್ಮಸಂಖ್ಯೆ 1, 10, 19, 28
ಇಂದು ನೀವು ಗೃಹಾಲಂಕಾರ ಅಥವಾ ಹಳೆಯ ಮನೆಯ ದುರಸ್ತಿಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರೊಂದಿಗೆ ಸುದೀರ್ಘ ಚರ್ಚೆ ನಡೆಯಬಹುದು. ದಿನಸಿ ಹಾಗೂ ಮನೆ ಬಳಕೆಯ ವಸ್ತುಗಳ ಖರೀದಿಗಾಗಿ ಜೇಬಿನಿಂದ ಹೆಚ್ಚಿನ ಹಣ ಖರ್ಚಾಗಲಿದೆ. ವಿಶೇಷವಾಗಿ ಸಾವಯವ ಉತ್ಪನ್ನಗಳು ಅಥವಾ ಒಣಹಣ್ಣುಗಳಿಗಾಗಿ ಹೆಚ್ಚು ವ್ಯಯಿಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಉತ್ತಮ ಬೆಂಬಲ ಸಿಗಲಿದೆ. ಆದರೆ, ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ, ಅತಿಯಾದ ಭಾವುಕತೆ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.
ಜನ್ಮಸಂಖ್ಯೆ 2, 11, 20, 29
ಈ ರಾಶಿಯವರಿಗೆ ಇಂದು ಅತ್ಯಂತ ಚಟುವಟಿಕೆಯಿಂದ ಕೂಡಿದ ದಿನ. ಫೋನ್ ಕರೆಗಳು, ಇಮೇಲ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲೇ ನಿಮ್ಮ ಅರ್ಧ ಸಮಯ ಕಳೆದುಹೋಗಬಹುದು. ಉದ್ಯೋಗದ ವಿಷಯದಲ್ಲಿ ಹೊಸ ಆಫರ್ ಬರಬಹುದು, ಆದರೆ ಆತುರದಲ್ಲಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕಬೇಡಿ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಆದಾಯ ಬಂದಷ್ಟೇ ವೇಗವಾಗಿ ಖರ್ಚು ಕೂಡ ಆಗುವ ಸಾಧ್ಯತೆ ಇರುವುದರಿಂದ, ಪ್ರಯಾಣದ ಸಮಯದಲ್ಲಿ ಹಣದ ಮೇಲೆ ಹಿಡಿತವಿರಲಿ.
ಜನ್ಮಸಂಖ್ಯೆ 3, 12, 21, 30
ಕಚೇರಿಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಸಿಟ್ಟು ಬರುವ ಸಾಧ್ಯತೆ ಇದೆ, ಅದನ್ನು ನಿಯಂತ್ರಿಸಿಕೊಳ್ಳುವುದು ಬಹಳ ಮುಖ್ಯ. ಬ್ಯಾಂಕ್ ಕೆಲಸಗಳು ಅಥವಾ ಸರ್ಕಾರಿ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ವಿಳಂಬ ಉಂಟಾಗಿ ಕಿರಿಕಿರಿ ಉಂಟಾಗಬಹುದು. ನಿಮಗೆ ಲಾಭವಾಗುವ ವಿಷಯಗಳನ್ನು ರಹಸ್ಯವಾಗಿಡುವುದು ಒಳ್ಳೆಯದು.
ಜನ್ಮಸಂಖ್ಯೆ 4, 13, 22, 31
ನಿಮಗೆ ಇಂದು ಖರ್ಚಿನ ವಿಚಾರವೇ ಅತಿ ದೊಡ್ಡ ತಲೆನೋವಾಗಲಿದೆ. ಎಷ್ಟೇ ಪ್ರಯತ್ನಿಸಿದರೂ ಕೆಲವು ಅನಿವಾರ್ಯ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಮೀರಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಸಲಹೆಗಳಿಗೆ ಮನ್ನಣೆ ಸಿಗಲಿದೆ, ಆದರೆ ಅದರ ಪೂರ್ಣ ಫಲಿತಾಂಶ ಬರಲು ಸ್ವಲ್ಪ ಸಮಯ ಹಿಡಿಯಲಿದೆ.
ಜನ್ಮಸಂಖ್ಯೆ 5, 14, 23
ನಿಮ್ಮ ಇಂದಿನ ಕಾರ್ಯಕ್ಷಮತೆ ನಿಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಮನಸ್ಸಿಗೆ ಇಷ್ಟವಿಲ್ಲದಿದ್ದರೂ ಕೆಲವು ಜವಾಬ್ದಾರಿಗಳನ್ನು ಅನಿವಾರ್ಯವಾಗಿ ಹೊರಬೇಕಾಗಬಹುದು. ವ್ಯಾಪಾರದಲ್ಲಿ ಬಹಳ ದಿನಗಳಿಂದ ಬರಬೇಕಿದ್ದ ಬಾಕಿ ಹಣ ವಸೂಲಿಯಾಗುವ ಲಕ್ಷಣಗಳಿವೆ.
ಜನ್ಮಸಂಖ್ಯೆ 6, 15, 24
ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ಮುಂದೂಡುತ್ತಾ ಬಂದಿದ್ದ ಕೆಲಸಗಳನ್ನು ಇಂದೇ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಉದ್ಯೋಗದಲ್ಲಿ ಗಡುವಿನೊಳಗೆ ಕೆಲಸ ಮುಗಿಸಲು ಆದ್ಯತೆ ನೀಡಿ. ಹಣಕಾಸಿನ ವಿಚಾರದಲ್ಲಿ ಹೊಸ ಸಾಲ ಮಾಡುವುದಾಗಲಿ ಅಥವಾ ದೊಡ್ಡ ಹೂಡಿಕೆ ಮಾಡುವುದಾಗಲಿ ಇಂದು ಬೇಡ.
ಜನ್ಮಸಂಖ್ಯೆ 7, 16, 25
ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ನೀವು ಯಾರಿಗಾದರೂ ಸಾಲ ನೀಡಿದ್ದರೆ ಆ ಹಣ ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಆದರೆ ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಇರಲಿ.
ಜನ್ಮಸಂಖ್ಯೆ 8, 17, 26
ಮನೆ ಮತ್ತು ಕಚೇರಿ ಎರಡೂ ಕಡೆ ಜವಾಬ್ದಾರಿಗಳು ಹೆಚ್ಚಾಗಿ ಮನಸ್ಸಿಗೆ ಬೇಸರ ತರಿಸಬಹುದು. ತೆರಿಗೆ ಅಥವಾ ಇಎಂಐ ಪಾವತಿಯ ಬಗ್ಗೆ ವಿಶೇಷ ಗಮನ ಕೊಡಿ. ಉದ್ಯೋಗದಲ್ಲಿ ಪ್ರಗತಿ ನಿಧಾನಗತಿಯಲ್ಲಿರಲಿದೆ. ಕುಟುಂಬ ಸದಸ್ಯರಿಗೆ ಸಮಯ ನೀಡಲು ಸಾಧ್ಯವಾಗದಿದ್ದಲ್ಲಿ ಮನಸ್ತಾಪ ಉಂಟಾಗಬಹುದು. ಸರ್ಕಾರಿ ಕೆಲಸಗಳನ್ನು ಬಲವಂತವಾಗಿ ಮುಗಿಸಲು ಪ್ರಯತ್ನಿಸಬೇಡಿ.
ಜನ್ಮಸಂಖ್ಯೆ 9, 18, 27
ಇಂದು ನೀವು ಏಕಾಂಗಿಯಾಗಿ ಇರಲು ಬಯಸುತ್ತೀರಿ. ಹೆಚ್ಚಿನ ಜನರ ಸಂಪರ್ಕ ಬೇಡವೆನಿಸಬಹುದು. ಹಣಕಾಸಿನ ವಿಷಯದಲ್ಲಿ ಯಾವುದೇ ಹೊಸ ಪ್ರಯೋಗ ಬೇಡ. ಸಂಬಂಧಗಳ ಬಗ್ಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸೂಕ್ತ ಸಮಯವಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯನ್ನು ಅನುಭವಿಸಬಹುದು.





