ಜೀವನದಲ್ಲಿ ಗ್ರಹಗತಿಗಳ ಬದಲಾವಣೆ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಅತೀವ ಪ್ರಭಾವ ಬೀರುತ್ತವೆ. ಇಂದು ಗುರುವಾರ, ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಚೈತ್ರ ಮಾಸದ ಪೂರ್ಣಿಮೆಯ ದಿನ. ಇಂದಿನ ದಿನ ಭವಿಷ್ಯವು ಕೆಲವು ರಾಶಿಯವರಿಗೆ ಲಾಭ ತಂದರೆ, ಇನ್ನು ಕೆಲವರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ. 12 ರಾಶಿಗಳ ಇಂದಿನ ಫಲ ಇಲ್ಲಿದೆ:
ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಮಿಶ್ರ ಫಲವಿದೆ. ವ್ಯಾಪಾರಸ್ಥರಿಗೆ ನಷ್ಟದ ಭೀತಿ ಮತ್ತು ಮಾನಸಿಕ ಉದ್ವೇಗ ಕಾಡಬಹುದು. ಮಾತು ಮಿತಿ ಮೀರದಂತೆ ಎಚ್ಚವಹಿಸಿ, ಇಲ್ಲವಾದಲ್ಲಿ ಆಪ್ತರ ಮನಸ್ಸು ನೋಯಬಹುದು.
ವೃಷಭ ರಾಶಿ: ಬಂಧುಗಳೊಡನೆ ಮದುವೆಯ ಮಾತುಕತೆ ಸಫಲವಾಗಲಿದೆ. ಕಚೇರಿಯಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಲಿದೆ. ಸಂಗಾತಿಯ ನೆರವಿನಿಂದ ನೂತನ ಗೃಹ ನಿರ್ಮಾಣದ ಕನಸು ನನಸಾಗುವತ್ತ ಸಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಸಂಭವವಿದೆ.
ಮಿಥುನ ರಾಶಿ: ಇಂದು ವೃತ್ತಿ ನಿಮಿತ್ತ ಪ್ರಯಾಣ ಅನಿವಾರ್ಯವಾಗಬಹುದು. ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಕಾಲಹರಣ ಮಾಡುವುದನ್ನು ಬಿಟ್ಟು ಕೆಲಸದತ್ತ ಗಮನಹರಿಸಿದರೆ ಪ್ರಗತಿ ಖಚಿತ. ಸಮಯೋಚಿತ ಸ್ಪಂದನೆಯಿಂದ ಸಮಾಜದಲ್ಲಿ ಗೌರವ ದೊರೆಯಲಿದೆ.
ಕರ್ಕಾಟಕ ರಾಶಿ: ಮನಸ್ಸಿನಲ್ಲಿ ಆತಂಕದ ಛಾಯೆ ಇರಲಿದೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಹತ್ತಾರು ವಿಷಯಗಳ ಬಗ್ಗೆ ಒಟ್ಟಿಗೆ ಚಿಂತಿಸಿ ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳಬೇಡಿ.
ಸಿಂಹ ರಾಶಿ: ಇಂದು ಎದುರಾಳಿಗಳ ವಿರುದ್ಧ ನೀವು ಜಯ ಸಾಧಿಸುವಿರಿ. ಆದರೆ ಕೋಪದ ಮೇಲೆ ನಿಯಂತ್ರಣವಿರಲಿ. ಆರ್ಥಿಕ ಕಾರಣಕ್ಕಾಗಿ ದಾಂಪತ್ಯದಲ್ಲಿ ಅಸಮಾಧಾನ ಮೂಡಬಹುದು. ಆದಾಯಕ್ಕಾಗಿ ಅಡ್ಡದಾರಿ ಹಿಡಿಯುವುದು ಬೇಡ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರಲಿದೆ.
ಕನ್ಯಾ ರಾಶಿ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ. ಉದ್ಯಮದಲ್ಲಿ ವಿದೇಶಿ ಸಂಪರ್ಕಗಳು ಲಾಭ ನೀಡಲಿವೆ. ಮನೆಯಲ್ಲಿ ಅಶಾಂತಿ ಮೂಡದಂತೆ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಹಿರಿಯರ ಸಲಹೆಗಳಿಗೆ ಬೆಲೆ ಕೊಡಿ.
ತುಲಾ ರಾಶಿ: ವ್ಯಾಪಾರದಲ್ಲಿ ಲಾಭದಾಯಕ ಅವಕಾಶಗಳು ಒದಗಿ ಬರಲಿವೆ. ಸ್ಥಿರಾಸ್ತಿ ಖರೀದಿಯ ಚಿಂತನೆ ಫಲಪ್ರದವಾಗಲಿದೆ. ಆದರೆ, ಕೆಲಸದ ಸ್ಥಳದಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಅನವಶ್ಯಕವಾಗಿ ಕಾಡಬಹುದು.
ವೃಶ್ಚಿಕ ರಾಶಿ: ದಿನದ ಅಂತ್ಯದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಹಳೆಯ ಗೆಳೆಯರ ಭೇಟಿ ಸಂತಸ ತರಲಿದೆ. ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ಮನೆಗೆ ಬದಲಾಯಿಸುವ ಯೋಗವಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ದೂರವಿರುವ ಸಾಧ್ಯತೆ ಇದೆ.
ಧನು ರಾಶಿ: ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹಳೆಯ ಕಾಯಿಲೆಗಳು ಮರುಕಳಿಸಬಹುದು. ತಾಂತ್ರಿಕ ಜ್ಞಾನದ ಕೊರತೆ ಕಾಡಬಹುದು. ಕುಟುಂಬದಲ್ಲಿ ಸಾಮರಸ್ಯವಿದ್ದರೂ ವೈಚಾರಿಕ ಭಿನ್ನಾಭಿಪ್ರಾಯಗಳು ಎದುರಾಗಬಹುದು.
ಮಕರ ರಾಶಿ: ಇಂದು ನಿಮ್ಮ ವ್ಯಕ್ತಿತ್ವ ಇತರರ ಮೇಲೆ ಪ್ರಭಾವ ಬೀರಲಿದೆ. ಉನ್ನತ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಸಂಕಷ್ಟವನ್ನು ಚಾಣಾಕ್ಷತನದಿಂದ ನಿರ್ವಹಿಸುವಿರಿ.
ಕುಂಭ ರಾಶಿ: ಕೆಲಸದ ಸ್ಥಳದಲ್ಲಿ ಅಸಮಾಧಾನವಿರಲಿದೆ. ಚಂಚಲ ಮನಸ್ಸಿನಿಂದಾಗಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಕಷ್ಟವಾಗಬಹುದು. ಆದರೆ ಕುಟುಂಬಕ್ಕೆ ನಿಮ್ಮಿಂದ ಕೀರ್ತಿ ಬರಲಿದೆ.
ಮೀನ ರಾಶಿ: ಆತ್ಮೀಯರಿಗಾಗಿ ಹಣ ವ್ಯಯಿಸುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಆಲಸ್ಯ ಬೇಡ. ಅಪರಿಚಿತರ ಮುಂದೆ ವರ್ತನೆ ಸರಿಯಾಗಿರಲಿ. ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.
