ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು?

Rashi bavishya

ಇಂದಿನ ದಿನ ಕೆಲವು ರಾಶಿಗಳಿಗೆ ಶುಭ ಫಲ, ಇನ್ನೂ ಕೆಲವರಿಗೆ ಸವಾಲುಗಳನ್ನು ಒಡ್ಡಲಿದೆ.  ಕುಟುಂಬ ಸಂಬಂಧಗಳು, ಆರೋಗ್ಯ, ಹಣಕಾಸು, ಮತ್ತು ಉದ್ಯೋಗದ ಕುರಿತು ಎಲ್ಲಾ 12 ರಾಶಿಗಳಿಗೆ ಜ್ಯೋತಿಷ್ಯ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಸತ್ಯವನ್ನೇ ಮಾತನಾಡಿ, ಇಲ್ಲದಿದ್ದರೆ ಅಪಮಾನ ಎದುರಾಗಬಹುದು. ಶುಭ ಸೂಚನೆಗಳು ದಾರಿಯನ್ನು ತೋರಿಸಲಿದೆ. ಪಾಲುದಾರಿಕೆಯ ಗೊಂದಲವನ್ನು ಮಾತನಾಡಿ ಬಗೆಹರಿಸಿ. ಸ್ಥಿರಾಸ್ತಿ ಪರಿಶೀಲನೆಗೆ ಸಮಯ ಒಳ್ಳೆಯದು. ರಕ್ತಸಂಬಂಧಿಕರಿಂದ ಮನಸ್ಸಿಗೆ ನೋವಾಗಬಹುದು. ಸ್ನೇಹಿತರೊಂದಿಗೆ ಕಷ್ಟವನ್ನು ಹಂಚಿಕೊಳ್ಳಿ. ಜವಾಬ್ದಾರಿಯನ್ನು ಕಾಳಜಿಯಿಂದ ನಿರ್ವಹಿಸಿ, ಯಶಸ್ಸು ನಿಮ್ಮದಾಗಬಹುದು.

ವೃಷಭ ರಾಶಿ

ಕುಟುಂಬದಿಂದ ದೂರವಾದರೆ ಒಂಟಿತನದ ಭಾವನೆ ಕಾಡಬಹುದು. ಆಸ್ತಿಯ ವಿಷಯದಲ್ಲಿ ಜಗಳ ಸಾಧ್ಯತೆ ಇದೆ, ಕಾನೂನು ಚರ್ಚೆ ಮಾಡಿ. ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಯಲಿದೆ. ಆರೋಗ್ಯಕ್ಕಾಗಿ ಶುದ್ಧ ವಾತಾವರಣಕ್ಕೆ ತೆರಳಿ. ಮನೆಯವರ ಮಾತು ಉತ್ಸಾಹಕ್ಕೆ ಭಂಗ ತರಬಹುದು. ಹಣ ಇದ್ದರೂ ಎಲ್ಲವೂ ಸಾಧ್ಯವಿಲ್ಲ ಎಂಬ ಸತ್ಯ ತಿಳಿಯಲಿದೆ.

ಮಿಥುನ ರಾಶಿ

ಬಂಧನಗಳನ್ನು ಕಳಚಿಡುವ ಧೈರ್ಯ ಇಂದು ಬರಲಿದೆ. ತುರ್ತು ಆರ್ಥಿಕ ಸ್ಥಿತಿಗೆ ಕಷ್ಟವಾಗಬಹುದು. ಸ್ನೇಹಿತರಿಂದ ದುರಭ್ಯಾಸ ಕಲಿಯುವ ಸಾಧ್ಯತೆ, ಆತುರವನ್ನು ತೋರಿಸಬೇಡಿ. ಯೋಜನೆಗಳು ಇಷ್ಟವಾಗಲಿದೆ. ಆಪ್ತರ ಅಗಲಿಕೆಯಿಂದ ನೋವು. ಉದ್ಯಮಕ್ಕೆ ಒಡನಾಡಿಯ ಸಹಾಯ ಪಡೆಯಿರಿ.

ಕರ್ಕಾಟಕ ರಾಶಿ

ಓದಿನಿಂದ  ಮನಸ್ಸಿನ ಬಾಧೆ ಕಡಿಮೆಯಾಗಲಿದೆ. ಸಾಲದ ಬಾಧೆ ತೀವ್ರವಾಗಬಹುದು. ದೂರದ ಬಂಧುಗಳ ಭೇಟಿಯಿಂದ ಸಂತೋಷ. ನಡವಳಿಕೆಯಲ್ಲಿ ಅಹಂಕಾರ ತೋರದಿರಿ. ಉದ್ಯೋಗದಲ್ಲಿ ಭಡ್ತಿಗೆ ಪ್ರಯತ್ನಿಸಿ. ಕೆಲವರ ಮಾತು ನೋವು ತರಬಹುದು.

ಸಿಂಹ ರಾಶಿ

ಅಪಾಯಕಾರಿ ಕೆಲಸಕ್ಕೆ ಕೈಹಾಕಬೇಡಿ. ಸಾಲ ತೀರಿಸಲು ಯೋಜನೆ ಯಶಸ್ವಿಯಾಗಲಿದೆ. ಉದ್ಯೋಗ ಶೋಧಕರಿಗೆ ಒಳ್ಳೆಯ ಸುದ್ದಿ. ಆರೋಗ್ಯಕ್ಕಾಗಿ ಖರ್ಚು. ಗೃಹ ಖರೀದಿಗೆ ಯೋಗ. ಮಾನಸಿಕ ಒತ್ತಡದಿಂದ ಕೆಲಸಕ್ಕೆ ಭಂಗ.

ಕನ್ಯಾ ರಾಶಿ

ಹಳೆಯ ವಾಹನ ದುರಸ್ತಿಗೆ ಖರ್ಚು. ವಾಹನ ಖರೀದಿಯ ಆಸೆ ಈಡೇರಲಿದೆ. ಆಮದು ವ್ಯವಹಾರದಲ್ಲಿ ಸಂಕಷ್ಟ. ಭೂಮಿ ವಿಸ್ತರಣೆಗೆ ಯೋಜನೆ. ಆಹಾರದಲ್ಲಿ ಮಿತಿ ಇಡಿ. ಸಮಯವನ್ನು ವ್ಯರ್ಥ ಮಾಡಬೇಡಿ.

ತುಲಾ ರಾಶಿ

ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ. ಭೂಮಿ ವ್ಯವಹಾರದಲ್ಲಿ ಲಾಭ ಕಡಿಮೆ. ಮೌನವಾಗಿರುವುದು ಒಳ್ಳೆಯದು. ಕಾಲ್ಪನಿಕ ಜಗತ್ತಿನಿಂದ ಹೊರಬನ್ನಿ. ಕುಟುಂಬ ಪಾಲಕರಿಗೆ ತೊಂದರೆಯಾಗದಿರಿ.

ವೃಶ್ಚಿಕ ರಾಶಿ

ವಿವಾಹದ ಜವಾಬ್ದಾರಿಯನ್ನು ನಿರ್ವಹಿಸಿ. ಬಲವಂತದ ಪ್ರೇಮದಲ್ಲಿ ವಿಫಲತೆ. ಉದ್ಯೋಗದಲ್ಲಿ ಖುಷಿಯ ವಾತಾವರಣ. ಹಳೆಯ ವಸ್ತು ಮಾರಾಟ. ಆರ್ಥಿಕತೆಗೆ ತಕ್ಕಂತೆ ವರ್ತಿಸದ ಸಂಗಾತಿಯಿಂದ ಅತೃಪ್ತಿ.  ಹೊರಗಿನ ಆಹಾರವನ್ನು ಮಿತಿಯಲ್ಲಿ ಸೇವಿಸಿ.

ಧನು ರಾಶಿ

ಸಾಮಾಜಿಕ ಕಾರ್ಯಕ್ಕೆ ಆರ್ಥಿಕ ಸಹಾಯ. ವಿದ್ಯಾರ್ಥಿಗಳಿಗೆ ತಾಯಿಯ ಸಹಾಯ. ಮನೆಗೆ ಉಪಕರಣ ಖರೀದಿ. ದೊಡ್ಡ ವ್ಯವಹಾರಸ್ಥರೊಂದಿಗೆ ಸಂವಾದ.

ಮಕರ ರಾಶಿ

ಉಪಯೋಗಿ ವಸ್ತು ಖರೀದಿ. ಕುಟುಂಬದಲ್ಲಿ ಸಲ್ಲದ ಮಾತುಗಳಿಂದ ತೊಂದರೆ. ಹೊಸ ಉದ್ಯಮಕ್ಕೆ ಧೈರ್ಯ ಕೊರತೆ. ಮಕ್ಕಳಿಂದ ಸಹಾಯ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಮುಖ್ಯ.

ಕುಂಭ ರಾಶಿ

ಆಮಿಷದಿಂದ ಕೆಲಸ ಮಾಡಿಸಿಕೊಳ್ಳಿ. ಕಾರ್ಯದ ಅನುಭವದಿಂದ ಉತ್ತಮ ಸ್ಥಾನ. ಕುಟುಂಬದವರ ನೆನಪು. ಮನೋರಂಜನೆಯಲ್ಲಿ ಸಮಯ ಕಳೆಯಿರಿ. ಕಛೇರಿಯ ಕೆಲಸವನ್ನು ಮುಂದೂಡಬೇಡಿ.

ಮೀನ ರಾಶಿ

ಮಾತಿಗೆ ಮಾತು ಬೆಳೆದು ಸ್ನೇಹದಲ್ಲಿ ಬಿರುಕು. ಚರ ಸಂಪತ್ತನ್ನು ಜೋಪಾನವಾಗಿ ಇರಿಸಿ. ಸ್ನೇಹಿತರಿಂದ ಲಾಭ. ವಿದ್ಯಾಭ್ಯಾಸದಲ್ಲಿ ಬದಲಾವಣೆ ಯೋಗ. ಕಛೇರಿಯಲ್ಲಿ ಸಹಾನುಭೂತಿ.

Exit mobile version