ಇಂದಿನ ಪಂಚಾಂಗದಲ್ಲಿ ರಾಹು ಕಾಲ: 09:51 AM – 11:16 AM, ಗುಳಿಕ ಕಾಲ: 07:02 AM – 08:27 AM
ಮೇಷ: ಇಂದು ನಿಮ್ಮ ಸಂಕಲ್ಪ ದೃಢವಾಗಿರಲಿದೆ. ಪರೀಕ್ಷೆಯ ಫಲಿತಾಂಶವು ನಿಮ್ಮ ಮುಂದಿನ ಶೈಕ್ಷಣಿಕ ಹಾದಿಯನ್ನು ನಿರ್ಧರಿಸಲಿದೆ. ವಿವಾಹದ ಅಡೆತಡೆಗಳನ್ನು ನೀವೇ ಚತುರತೆಯಿಂದ ಬಗೆಹರಿಸಿಕೊಳ್ಳಬೇಕು. ಸಾಲ ನೀಡುವ ಮುನ್ನ ಯೋಚಿಸಿ.
ವೃಷಭ: ನಿಮ್ಮ ಪ್ರತಿಭೆಗೆ ಸರಿಯಾದ ವೇದಿಕೆ ಲಭ್ಯವಾಗಲಿದೆ. ಇಂದು ಆಲಸ್ಯದಿಂದಾಗಿ ಕೆಲಸಗಳು ವಿಳಂಬವಾಗಬಹುದು, ಮನೋನಿಗ್ರಹ ಮುಖ್ಯ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ.
ಮಿಥುನ: ರಾಜಕಾರಣಿಗಳಿಗೆ ಅಧಿಕಾರಿಗಳಿಂದ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಯಾಂತ್ರಿಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ. ತಂದೆಯಿಂದ ಆಸ್ತಿ ಅಥವಾ ಸಂಪತ್ತು ಲಭಿಸುವ ಸಾಧ್ಯತೆಯಿದೆ.
ಕರ್ಕಾಟಕ: ಕೃಷಿ ವ್ಯವಹಾರದಲ್ಲಿ ಲಾಭದ ನಿರೀಕ್ಷೆಯಿದೆ. ಆದರೆ ಇಂದು ನಿರುದ್ಯೋಗಿಗಳಿಗೆ ಮಾನಸಿಕವಾಗಿ ಸ್ವಲ್ಪ ಆತಂಕ ಎದುರಾಗಬಹುದು. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರಣಯ ಜೀವನದಲ್ಲಿ ಆಸಕ್ತಿ ಮೂಡಲಿದೆ.
ಸಿಂಹ: ಮನೆ ನಿರ್ಮಾಣದ ಯೋಚನೆಯಲ್ಲಿರುವವರಿಗೆ ಆಪ್ತರ ಸಲಹೆ ಉಪಯುಕ್ತವಾಗಲಿದೆ. ಕಚೇರಿಯಲ್ಲಿ ಒತ್ತಡವಿದ್ದರೂ, ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರಲಿದೆ. ಹಠಾತ್ ಕೋಪದಿಂದಾಗಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳಬೇಡಿ.
ಕನ್ಯಾ: ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಕಾನೂನು ವಿಚಾರಗಳಲ್ಲಿ ಸೋಲಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಇರಲಿ. ತಾಯಿಯೊಂದಿಗೆ ವಾಗ್ವಾದ ಬೇಡ. ಅವಧಿಗೂ ಮುನ್ನವೇ ಕೆಲಸಗಳನ್ನು ಮುಗಿಸಲು ಪ್ರಯತ್ನಿಸಿ.
ತುಲಾ: ಇಂದು ಸಾಲದ ಭೀತಿ ಎದುರಾಗಬಹುದು. ಅಧ್ಯಾತ್ಮದ ಕಡೆಗೆ ಒಲವು ತೋರುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ನಿಮ್ಮ ದಯಾಳು ಗುಣವನ್ನು ಇತರರು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಿ.
ವೃಶ್ಚಿಕ: ವೃತ್ತಿಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲವಲ್ಲ. ಇಂದು ಅನಿರೀಕ್ಷಿತ ಅಶುಭವಾರ್ತೆಯೊಂದು ನಿಮ್ಮನ್ನು ಕಾಡಬಹುದು. ಕೆಲಸದಲ್ಲಿ ನಿಷ್ಠೆ ಇರಲಿ, ವ್ಯರ್ಥ ಕಾಲಹರಣ ಮಾಡಬೇಡಿ.
ಧನು: ಹಳೆಯ ಸ್ನೇಹಿತರ ಭೇಟಿ ಖುಷಿ ನೀಡಲಿದೆ. ಕಠಿಣ ಕೆಲಸಗಳನ್ನು ಸರಳವಾಗಿ ಮಾಡುವ ಕಲೆ ನಿಮಗೆ ಒಲಿಯಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭವಾಗಲಿದೆ.
ಮಕರ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಅವಕಾಶಗಳು ದೊರೆಯಲಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಳೆಯ ಪ್ರೇಮ ವಿಚಾರಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮೂಲಕ ಮನಸ್ಸು ಹಗುರವಾಗಲಿದೆ.
ಕುಂಭ: ತಪ್ಪುಗ್ರಹಿಕೆಗಳಿಂದ ದೂರವಿರಿ. ಸಮಾರಂಭಗಳಲ್ಲಿ ನಿಮ್ಮ ಮಾತು ವಿವಾದಕ್ಕೆ ಕಾರಣವಾಗಬಹುದು, ಮೌನವೇ ಲೇಸು. ಕಳೆದುಕೊಂಡ ಅಮೂಲ್ಯ ವಸ್ತುಗಳು ಮತ್ತೆ ಸಿಗುವ ಸಾಧ್ಯತೆಯಿದೆ.
ಮೀನ: ಆಸ್ತಿ ಹಂಚಿಕೆಯ ಹಳೆಯ ವಿಚಾರಗಳು ಮರುಕಳಿಸಬಹುದು. ಅಧ್ಯಾತ್ಮ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನೆಯಲ್ಲಿ ಹಬ್ಬದಂತಹ ವಾತಾವರಣವಿರಲಿದ್ದು, ಆರ್ಥಿಕವಾಗಿ ಸಬಲರಾಗುವಿರಿ.





