ಇಂದಿನ ಪಂಚಾಂಗ
ಇಂದು ಸೂರ್ಯೋದಯ 06:50ಕ್ಕೆ ಹಾಗೂ ಸೂರ್ಯಾಸ್ತ 06:27ಕ್ಕೆ ಸಂಭವಿಸಲಿದೆ. ಉತ್ತರಾಷಾಢ ನಕ್ಷತ್ರವಿದ್ದು, ವ್ಯಾಘಾತ ಯೋಗವಿದೆ. ಇಂದು ರಾಹುಕಾಲ ಬೆಳಿಗ್ಗೆ 11:12 ರಿಂದ ಮಧ್ಯಾಹ್ನ 12:39 ರವರೆಗೆ ಇರಲಿದ್ದು, ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡದಿರುವುದು ಒಳಿತು.
ಮೇಷ ರಾಶಿ: ಇಂದು ಕಚೇರಿ ಕೆಲಸದಲ್ಲಿ ಸಣ್ಣಪುಟ್ಟ ಗೊಂದಲಗಳು ನಿಮ್ಮ ನೆಮ್ಮದಿಯನ್ನು ಕದಡಬಹುದು. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಅನಿವಾರ್ಯತೆ ನಿಮಗಿದೆ. ಹಿತಶತ್ರುಗಳ ಕುತಂತ್ರವನ್ನು ಗುರುತಿಸಲು ವಿಫಲರಾಗುವ ಸಾಧ್ಯತೆಯಿದೆ, ಎಚ್ಚರವಿರಲಿ. ಹೊಸ ಯೋಜನೆಗಳ ಜವಾಬ್ದಾರಿ ನಿಮ್ಮ ಹೆಗಲೇರಲಿದೆ.
ವೃಷಭ ರಾಶಿ: ನಿಮ್ಮ ನಡವಳಿಕೆಯಲ್ಲಿನ ಬದಲಾವಣೆ ಆತ್ಮೀಯರಿಗೆ ಅಚ್ಚರಿ ತರಬಹುದು. ವ್ಯವಹಾರದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ನೀವು ಸಹಿಸುವುದಿಲ್ಲ. ಸಮಯದ ನಿರ್ವಹಣೆ ಇಂದು ನಿಮಗೆ ಸವಾಲಾಗಬಹುದು. ಸಂಬಂಧಿಕರನ್ನೇ ಪಾಲುದಾರರನ್ನಾಗಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಟೀಕೆಗಳಿಗೆ ಹಾರಿಕೆಯ ಉತ್ತರ ನೀಡಿ ಸಮಾಧಾನದಿಂದ ಇರುವುದು ಉತ್ತಮ.
ಮಿಥುನ ರಾಶಿ: ನಿಮ್ಮ ಸ್ವಾಭಿಮಾನಕ್ಕೆ ಇಂದು ಪೆಟ್ಟು ಬೀಳುವ ಪ್ರಸಂಗ ಎದುರಾಗಬಹುದು. ನಿಮ್ಮ ಹಾಸ್ಯ ಪ್ರವೃತ್ತಿ ಎಲ್ಲರಿಗೂ ಇಷ್ಟವಾಗದಿರಬಹುದು. ದೈಹಿಕ ಶ್ರಮದಿಂದ ಆಯಾಸ ಹೆಚ್ಚಾಗಲಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಳ್ಳುವ ಹಂಬಲ ನಿಮ್ಮದಾಗಲಿದೆ. ಅತಿಯಾದ ಪ್ರೀತಿ ಅಥವಾ ಭಾವನಾತ್ಮಕ ನಿರ್ಧಾರಗಳು ನಿಮಗೆ ಮುಳುವಾಗಬಹುದು.
ಕರ್ಕಾಟಕ ರಾಶಿ: ದಾಖಲೆ ಪತ್ರಗಳ ಕೆಲಸಕ್ಕಾಗಿ ಅಲೆದಾಟ ಅನಿವಾರ್ಯ. ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆಯಿದ್ದು, ತುರ್ತು ಹಣ ಹೊಂದಿಸಲು ಹರಸಾಹಸ ಪಡಬೇಕಾಗಬಹುದು. ವಿದ್ಯಾರ್ಥಿಗಳಿಗೆ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಸಂಬಂಧಿಕರ ಭೇಟಿ ನಿಮಗೆ ಅಷ್ಟಾಗಿ ಇಷ್ಟವಾಗದಿರಬಹುದು, ಆದರೂ ಅನಿವಾರ್ಯವಾಗಿ ಭಾಗವಹಿಸುವಿರಿ.
ಸಿಂಹ ರಾಶಿ: ಮಕ್ಕಳಿಂದ ಆರ್ಥಿಕ ಸಹಾಯ ದೊರೆತು ಮನಸ್ಸಿಗೆ ನೆಮ್ಮದಿ ನೀಡಲಿದೆ. ಆದರೆ, ಕೆಲವು ಹಳೆಯ ಕೆಟ್ಟ ಅಭ್ಯಾಸಗಳು ನಿಮ್ಮನ್ನು ಕಾಡಬಹುದು. ಅಪನಂಬಿಕೆಯಿಂದ ದೂರವಿರಿ. ಇಂದು ನ್ಯಾಯಾಲಯದ ಕೆಲಸಗಳಲ್ಲಿ ಜಯ ಸಿಗುವ ಸಾಧ್ಯತೆಯಿದ್ದು, ಬಹಳ ದಿನಗಳ ಕಾಯುವಿಕೆ ಅಂತ್ಯವಾಗಲಿದೆ.
ಕನ್ಯಾ ರಾಶಿ: ನಿಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಇದು ಸಕಾಲ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ನಿಮ್ಮ ಮೇಲಿರುವ ಆರೋಪಗಳನ್ನು ಬುದ್ಧಿವಂತಿಕೆಯಿಂದ ನಿವಾರಿಸಿಕೊಳ್ಳುವಿರಿ. ಹೊಸ ವಸ್ತುಗಳನ್ನು ಖರೀದಿಸುವಾಗ ಮೋಸ ಹೋಗದಂತೆ ಜಾಗ್ರತೆ ವಹಿಸಿ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ.
ತುಲಾ ರಾಶಿ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಭೂಮಿ ಅಥವಾ ಆಸ್ತಿ ವ್ಯವಹಾರದಿಂದ ಲಾಭ ಪಡೆಯುವ ಯೋಜನೆ ರೂಪಿಸುವಿರಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿನ ನೋವು ಮರೆಯುವಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಮಯ ಮತ್ತು ಸಂದರ್ಭವನ್ನು ಸರಿಯಾಗಿ ಅವಲೋಕಿಸಿ.
ವೃಶ್ಚಿಕ ರಾಶಿ: ಸಾಲದ ಹಣ ಮರಳಿ ಬರುವ ಆಶಯ ಮೂಡಲಿದೆ. ನಿಮ್ಮ ಕೆಲಸದ ಉತ್ಸಾಹ ಇತರರಿಗೆ ಮಾದರಿಯಾಗಲಿದೆ. ಆದರೆ, ನಿಮ್ಮ ನಿರ್ಲಕ್ಷ್ಯದ ಸ್ವಭಾವದಿಂದ ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವ ಭೀತಿಯಿದೆ. ಅನಗತ್ಯ ವಾದಗಳನ್ನು ಬಿಟ್ಟು ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಿ. ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಆದಾಯ ಹೆಚ್ಚಲಿದೆ.
ಧನು ರಾಶಿ: ಪ್ರತಿಕೂಲ ಸಂದರ್ಭಗಳನ್ನು ಎದುರಿಸುವ ಕಲೆಯನ್ನು ಇಂದು ಕಲಿಯುವಿರಿ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಅಲೆದಾಟ ತಪ್ಪಿದ್ದಲ್ಲ. ತಂದೆಯ ನಿರ್ಧಾರಗಳ ಬಗ್ಗೆ ಅಸಮಾಧಾನ ಮೂಡಬಹುದು. ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯದತ್ತ ಗಮನ ಹರಿಸಿ. ಯಾರೋ ಹೇಳಿದ ಕಿವಿಮಾತುಗಳಿಗಿಂತ ಸ್ವಂತ ಬುದ್ಧಿಯನ್ನು ಬಳಸಿ.
ಮಕರ ರಾಶಿ: ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಕೆಲಸದಲ್ಲಿ ಅಡೆತಡೆಗಳು ಕಂಡುಬಂದರೆ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುವುದು ಒಳಿತು. ಕೆಲಸಗಳನ್ನು ಮುಂದೂಡುವ ಪ್ರವೃತ್ತಿ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು. ಸಮಾಜದಲ್ಲಿ ಪ್ರತಿಷ್ಠೆ ತೋರಿಸಲು ಹೋಗಿ ಅಪಮಾನಕ್ಕೆ ಒಳಗಾಗಬೇಡಿ.
ಕುಂಭ ರಾಶಿ: ಪ್ರೇಮ ವಿಚಾರದಲ್ಲಿ ಕಹಿ ಅನುಭವವಾಗುವ ಸಾಧ್ಯತೆಯಿದೆ. ಅತಿಯಾದ ಆತ್ಮವಿಶ್ವಾಸ ಬೇಡ. ಅಪಘಾತ ಅಥವಾ ಅಹಿತಕರ ಸುದ್ದಿಗಳು ನಿಮ್ಮನ್ನು ಖಿನ್ನತೆಗೆ ದೂಡಬಹುದು. ಉದ್ಯೋಗದ ವಿಷಯದಲ್ಲಿ ಬಂಧುಗಳಿಂದ ಸಹಾಯ ದೊರೆಯಲಿದೆ.
ಮೀನ ರಾಶಿ: ಗೆಲುವಿಗಾಗಿ ಕಠಿಣ ಪರಿಶ್ರಮ ಅನಿವಾರ್ಯ. ನಿಮ್ಮ ಮಾತುಗಳು ಇಂದು ನಿಮ್ಮ ಭವಿಷ್ಯವನ್ನು ನಿರ್ಧರಿಸಲಿವೆ. ವಾಹನ ಸೌಕರ್ಯ ಲಭಿಸಲಿದೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಿರಲಿದೆ. ಆರ್ಥಿಕ ಉಳಿತಾಯಕ್ಕಾಗಿ ನೀವು ಮಾಡುವ ಯೋಜನೆಗಳು ಯಶಸ್ವಿಯಾಗಲಿವೆ.





