7 ಮೇ 2025 ಬುಧವಾರದ ರಾಶಿ ಭವಿಷ್ಯ ಇಲ್ಲಿದೆ. 12 ರಾಶಿಗಳಿಗೆ ಇಂದಿನ ದಿನದ ಫಲಾಫಲ, ಅದೃಷ್ಟ, ಸಂಪತ್ತು, ಕೆಲಸ, ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಮೇಷ ರಾಶಿ
ಆದಾಯಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಇಂದು ಜೀವನ ಸುಂದರವಾಗಿ ಕಾಣಲಿದೆ. ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಸಾಲದಿಂದ ಮುಕ್ತವಾಗುವ ಲಕ್ಷಣಗಳು ಕಂಡುಬರುತ್ತವೆ. ಸಂಜೆ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ಕೆಲಸದಲ್ಲಿ ವೇಗ ಮತ್ತು ಯೋಜನೆಗಳು ಯಶಸ್ವಿಯಾಗುತ್ತವೆ. ವಿರೋಧಿಗಳನ್ನು ನಿಮ್ಮ ಕಡೆಗೆ ಸೆಳೆಯಲು ಸಾಧ್ಯವಾಗುತ್ತದೆ. ಆತುರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ.
ವೃಷಭ ರಾಶಿ
ಶಿಸ್ತಿನಿಂದ ಇರಲು ಪ್ರಯತ್ನಿಸುವಿರಿ. ಗಟ್ಟಿಯಾದ ಸಂಕಲ್ಪವು ಯಶಸ್ಸಿನ ಗುಟ್ಟು. ಹಣ ಗಳಿಸುವ ಆಸೆ ತೀವ್ರವಾದರೂ ಸಫಲವಾಗದಿರಬಹುದು. ಮಾನಸಿಕ ಶಾಂತಿ ಅನುಭವಿಸುವಿರಿ. ಖರ್ಚುಗಳ ಮೇಲೆ ನಿಯಂತ್ರಣ, ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಕೆಲಸದ ವೇಗದಿಂದ ಆದಾಯ ಹೆಚ್ಚಾಗುವುದು. ಸಂಗಾತಿಯ ಬೇಸರ ಮತ್ತು ವೃತ್ತಿಯಲ್ಲಿ ಕಿರಿಕಿರಿ ಇರಬಹುದು. ಆರೋಗ್ಯದ ಬಗ್ಗೆ ಆತಂಕ ಬೇಡ.
ಮಿಥುನ ರಾಶಿ
ಪ್ರೇಮ ಆಕರ್ಷಣೆಯಿಂದ ಆರಂಭವಾಗಬಹುದು. ಸ್ನೇಹಿತರು ಹಣ ಖಾಲಿಮಾಡಿಸಬಹುದು. ದಾಂಪತ್ಯ ಜೀವನದಲ್ಲಿ ಒತ್ತಡ ಇರಬಹುದು. ಪ್ರಸಿದ್ಧಿಯ ಆಸೆ ಉಂಟಾಗುವುದು. ಹೊಸ ಅವಕಾಶಗಳಿಗೆ ಧೈರ್ಯ ಮತ್ತು ತಾಳ್ಮೆ ಬೇಕು. ಹಳೆಯ ಯೋಜನೆಯನ್ನು ಪುನರಾರಂಭಿಸಲು ಅವಕಾಶ. ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ ಸಿಗುವುದು. ದಾಂಪತ್ಯದ ವಿರಸದಿಂದ ಮಾನಸಿಕ ಆರೋಗ್ಯ ಕೆಡಬಹುದು.
ಕರ್ಕಾಟಕ ರಾಶಿ
ನಡೆ ನಿಧಾನವಾಗಿರಲಿದೆ. ಸಹೋದ್ಯೋಗಿಗಳ ಜೊತೆ ಕಲಹ ಸಾಧ್ಯ. ಅನವಶ್ಯಕ ಖರ್ಚಿಗೆ ಗಮನ ಬೇಕು. ಕೋಪವನ್ನು ತೋರಿಸಬಹುದು. ಒಳ್ಳೆಯ ಸುದ್ದಿಗಳೊಂದಿಗೆ ದಿನ ಆರಂಭವಾಗುವುದು. ಸಂತೋಷವಾಗಿರುವಿರಿ. ಯುವಕರು ವೃತ್ತಿಜೀವನದ ಬಗ್ಗೆ ಗಂಭೀರ. ಹೂಡಿಕೆಗೆ ಮಾಹಿತಿಯ ಕೊರತೆ. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿ.
ಸಿಂಹ ರಾಶಿ
ವಿಘ್ನಗಳನ್ನು ದೈವ ಬಲದಿಂದ ಎದುರಿಸುವಿರಿ. ಹಿತಶತ್ರುಗಳಿಂದ ತೊಂದರೆ. ಹೊಸ ಉದ್ಯೋಗ ಆರಂಭಕ್ಕೆ ಒಳ್ಳೆಯ ಸಮಯ. ಕೆಲಸದ ಹೊರೆ ಹೆಚ್ಚಿರಬಹುದು. ಕುಟುಂಬದ ಬೆಂಬಲ ಸಿಗುವುದು. ಪ್ರಯಾಣದ ಅವಕಾಶ. ಮಾನಸಿಕ ಒತ್ತಡ ನಿಯಂತ್ರಿಸಿ. ಕಾನೂನಿನ ವಿವಾದ ಪರಿಹಾರಕ್ಕೆ ಸರಿಯಾದ ಸಮಯ. ಸಾಧಿಸುವ ಛಲದಿಂದ ಯಾವುದೂ ಅಸಾಧ್ಯವಿಲ್ಲ.
ಕನ್ಯಾ ರಾಶಿ
ಉದ್ಯಮದ ಮೇಲೆ ಎಲ್ಲರ ದೃಷ್ಟಿ. ಹೊಸ ವಸ್ತುಗಳ ಖರೀದಿಗೆ ಸಮಯ. ಕುಟುಂಬದಲ್ಲಿ ಸಣ್ಣ ಕಲಹ. ಹಣದ ಒಳಹರಿವು ಸುಗಮ. ಒಳ್ಳೆಯ ಸುದ್ದಿ ಆಕಸ್ಮಿಕವಾಗಿ ಸಿಗುವುದು. ಶುಭಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ. ಸಂಗಾತಿಯ ಸೌಂದರ್ಯಕ್ಕೆ ಮರುಳಾಗುವಿರಿ. ವಕೀಲ ವೃತ್ತಿಯವರಿಗೆ ಜಯ. ಗೃಹ ನಿರ್ಮಾಣದ ಚರ್ಚೆಗೆ ಯೋಚನೆ.
ತುಲಾ ರಾಶಿ
ಯೋಜನೆಯನ್ನು ಮೊದಲೇ ಪೂರ್ಣಗೊಳಿಸಿ ಪ್ರಶಂಸೆ ಪಡೆಯುವಿರಿ. ಸರ್ಕಾರಿ ಕಾರ್ಯಗಳು ನಿಧಾನವಾಗುವುದು. ಮನಸ್ಸಿನ ಗೊಂದಲ. ವ್ಯರ್ಥ ಓಡಾಟ. ತಾಳ್ಮೆ ಮತ್ತು ತಿಳುವಳಿಕೆ ಮುಖ್ಯ. ಕಷ್ಟಪಟ್ಟು ಕೆಲಸ ಮಾಡಬೇಕಾಗುವುದು. ಪ್ರಮುಖ ನಿರ್ಧಾರಗಳಿಗೆ ಸಮಯ. ವ್ಯಾಪಾರದಲ್ಲಿ ತೊಡಕು, ಆದರೆ ಪರಿಹಾರದ ತಂತ್ರ ಸಿದ್ಧ. ನಿಷ್ಠೆಯನ್ನು ಬದಲಾಯಿಸಬೇಡಿ.
ವೃಶ್ಚಿಕ ರಾಶಿ
ಮೇಲಧಿಕಾರಿಗಳಿಂದ ಮಾನಸಿಕ ಹಿಂಸೆ. ವೈದ್ಯರ ಸಲಹೆಯನ್ನು ತಿರಸ್ಕರಿಸಬೇಡಿ. ಪ್ರತಿಭೆಯ ಪ್ರದರ್ಶನ ಇಂದು. ಸ್ನೇಹಿತರ ಜೊತೆ ನೋವು ಹಂಚಿಕೊಳ್ಳುವಿರಿ. ಹಳೆಯ ವಿವಾದದಿಂದ ಪರಿಹಾರ. ಕುಟುಂಬದ ವಾತಾವರಣ ಶಾಂತಿಯುತ. ಮಕ್ಕಳಿಗೆ ಹೊಸ ಅವಕಾಶಗಳು. ಆರ್ಥಿಕ ಸ್ಥಿತಿ ಸುಧಾರಿಸುವುದು. ಸೋಮಾರಿತನ ಬಿಟ್ಟು ಕೆಲಸಕ್ಕೆ ಪ್ರಯತ್ನಿಸಿ.
ಧನು ರಾಶಿ
ಕಾರ್ಯ ಸಿಗದೇ ಬೇಸರ. ವಂಚನೆಗೆ ನ್ಯಾಯಯುತ ಕ್ರಮ. ವ್ಯಾಪಾರದಲ್ಲಿ ಅಧಿಕ ಲಾಭ. ಸರ್ಕಾರಿ ಅಧಿಕಾರಿಗಳಿಗೆ ಸಂಕಷ್ಟ. ಸಂಬಂಧವಿಲ್ಲದ ವಿಷಯಗಳಲ್ಲಿ ತೊಡಗಬೇಡಿ. ಹಣದ ವಿಷಯದಲ್ಲಿ ಯಾರನ್ನೂ ನಂಬಬೇಡಿ. ನಿರ್ಲಕ್ಷ್ಯ ಸಮಸ್ಯೆಗೆ ಕಾರಣವಾಗಬಹುದು. ಗುರಿಯನ್ನು ಬದಲಿಸದೇ ಮುನ್ನಡೆಯುವಿರಿ. ಮಕ್ಕಳಿಗೆ ಪ್ರೋತ್ಸಾಹ. ಭೂಮಿಯ ಉತ್ಪನ್ನದಿಂದ ಲಾಭ.
ಮಕರ ರಾಶಿ
ಬಂಧುಗಳ ಘರ್ಷಣೆಯಿಂದ ಉದ್ಯೋಗದಲ್ಲಿ ತೊಂದರೆ. ಪ್ರಯಾಣದಿಂದ ಸುಖವಿಲ್ಲ. ಹತಾಶೆಯಿಂದ ಹೊರಬಂದು ಒಳ್ಳೆಯ ಕಾರ್ಯಕ್ಕೆ ಗಮನಹರಿಸಿ. ಯಶಸ್ಸು ಮತ್ತು ಆರ್ಥಿಕ ಲಾಭ. ಗೌರವ, ಪ್ರಭಾವ ಹೆಚ್ಚಾಗುವುದು. ಹೊಸ ಆದಾಯದ ಮೂಲಗಳು. ಕಾರ್ಯದ ಒತ್ತಡ ಅಧಿಕ. ಆರೋಗ್ಯದ ಗಮನ ಬೇಕು. ಕಛೇರಿಯಲ್ಲಿ ಪ್ರಶಂಸೆ ಸಿಗುವುದು.
ಕುಂಭ ರಾಶಿ
ಯಶಸ್ಸು ವಿವಾದಕ್ಕೆ ಸಿಕ್ಕಿಕೊಳ್ಳಬಹುದು. ಯೋಜನೆಗೆ ಎಲ್ಲವೂ ವಿರುದ್ಧವಾಗಬಹುದು. ಆಸ್ತಿ ಖರೀದಿಗೆ ಯೋಜನೆ. ಒಳ್ಳೆಯ ಪುಸ್ತಕಗಳನ್ನು ಓದಿ. ಅಜಾಗರೂಕತೆ ನಷ್ಟಕ್ಕೆ ಕಾರಣವಾಗಬಹುದು. ಸಂಗಾತಿಯ ಜೊತೆ ಮನಸ್ತಾಪ ದೂರಾಗುವುದು. ಇಷ್ಟವಾದ ವಸ್ತುಗಳ ಖರೀದಿ. ಉದ್ಯೋಗದ ಕಾರಣಕ್ಕೆ ದೂರಪ್ರಯಾಣ. ಭೂಮಿಯ ದಾಖಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ.
ಮೀನ ರಾಶಿ
ಕಾರ್ಯಕ್ಷೇತ್ರದಲ್ಲಿ ಕಿರಿಕಿರಿ. ಕೋಪದಿಂದ ಅಸಂಬದ್ಧ ಮಾತುಗಳು. ವಿವಾದವನ್ನು ಎಳೆದುಕೊಳ್ಳಬೇಡಿ. ಅತಿಯಾದ ಖರ್ಚು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಬುದ್ದಿವಂತರಾಗಿರಿ. ಕೋಪದಿಂದ ಕೆಲಸ ಹಾಳಾಗಬಹುದು. ಪ್ರವಾಸದಿಂದ ಉತ್ಸಾಹ. ದುಷ್ಟ ಜನರಿಂದ ದೂರವಿರಿ. ದಾಂಪತ್ಯದ ವಾಗ್ವಾದ ತೀವ್ರವಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ.