ಇಂದು ಮಾರ್ಚ್ 16, 2026 ರ ಸೋಮವಾರದಂದು ಗ್ರಹಗಳ ಸಂಚಾರದಿಂದಾಗಿ ಹಲವು ರಾಶಿಗಳಿಗೆ ಮಿಶ್ರ ಫಲಗಳಿವೆ. ಕೆಲವರು ಆರ್ಥಿಕ ಒತ್ತಡ, ಕಿರಿಕಿರಿ ಮತ್ತು ಅನ್ಯರ ಹಸ್ತಕ್ಷೇಪದಿಂದ ಬೇಸತ್ತು ಹೋಗಬಹುದು. ವಿಶೇಷವಾಗಿ ಕರ್ಕಾಟಕ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು ಅನ್ಯರ ಮಾತುಗಳು ಮತ್ತು ಚಾಡಿಗಳಿಂದ ಮನಸ್ಸು ಕೆಡಬಹುದು. ಇಂದಿನ ದಿನದಲ್ಲಿ ಕಾರ್ಯ ಒತ್ತಡ, ಪ್ರೀತಿಯ ಸುಖ-ದುಃಖ, ಹಣಕ್ಕಾಗಿ ತೊಂದರೆ, ತಪ್ಪು ತಿಳಿವಳಿಕೆ ಮತ್ತು ಅಸಹನೆಯಂತಹ ಸವಾಲುಗಳು ಕಾಣಿಸಿಕೊಳ್ಳಬಹುದು. ಆದರೆ ಧೈರ್ಯ ಮತ್ತು ಎಚ್ಚರಿಕೆಯಿಂದ ಮುನ್ನಡೆದರೆ ಶುಭ ಫಲಗಳೂ ಸಿಗಬಹುದು.
ಇಂದಿನ ಪಂಚಾಂಗ (16 ಮಾರ್ಚ್ 2026):
- ಶಾಲಿವಾಹನ ಶಕ: 1948, ವಿಶ್ವಾವಸು ಸಂವತ್ಸರ
- ಋತು: ಶಿಶಿರ, ಚಾಂದ್ರಮಾಸ: ಫಾಲ್ಗುಣ, ಸೌರ ಮಾಸ: ಮೀನ
- ಮಹಾನಕ್ಷತ್ರ: ಪೂರ್ವಾಭಾದ್ರ, ನಿತ್ಯನಕ್ಷತ್ರ: ಧನಿಷ್ಠಾ
- ವಾರ: ಸೋಮವಾರ, ಪಕ್ಷ: ಕೃಷ್ಣ, ತಿಥಿ: ದ್ವಾದಶಿ
- ಯೋಗ: ಶಿವ, ಕರಣ: ಗರಜ
- ಸೂರ್ಯೋದಯ: 06:32 AM, ಸೂರ್ಯಾಸ್ತ: 06:33 PM
- ಶುಭಾಶುಭ ಕಾಲಗಳು: ರಾಹು ಕಾಲ 08:03–09:33 AM, ಯಮಗಂಡ 11:03–12:33 PM, ಗುಳಿಕ 02:03–03:33 PM
ನಿಮ್ಮ ರಾಶಿಯ ಭವಿಷ್ಯ ಓದಿ:
ಮೇಷ ರಾಶಿ :
ನಿಮ್ಮ ವ್ಯಕ್ತಿತ್ವ ದೊಡ್ಡದಾಗಿ ಕಾಣುತ್ತದೆ. ಸ್ವಕೀಯರೇ ನಿಮ್ಮ ವೇಗವನ್ನು ಕುಂಠಿತಗೊಳಿಸಬಹುದು. ಆದಾಯಕ್ಕೆ ಬರಹಗಳು ಒತ್ತು ನೀಡುತ್ತವೆ. ಎಲ್ಲವನ್ನೂ ಪರಿಶೀಲಿಸಿ ಮುಂದುವರಿಯಿರಿ. ಸ್ನೇಹಿತರ ಸಹವಾಸ ಹೆಚ್ಚುತ್ತದೆ.
ವೃಷಭ ರಾಶಿ :
ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಬೇಕು. ವಾಹನ ಖರೀದಿ ಆಸೆ ಪ್ರಬಲವಾಗಬಹುದು. ದುಂದುವೆಚ್ಚದಿಂದ ಬೇಸರ. ಮಕ್ಕಳ ಜೊತೆ ಸಂತೋಷದ ಕ್ಷಣಗಳು ಇರಲಿವೆ.
ಮಿಥುನ ರಾಶಿ :
ವ್ಯಾಪಾರದಲ್ಲಿ ಬದಲಾವಣೆಗಳನ್ನು ಅಧ್ಯಯನ ಮಾಡಿ. ನಿಮ್ಮ ಒಳ್ಳೆಯತನವನ್ನು ಇತರರು ದುರುಪಯೋಗ ಮಾಡಬಹುದು. ಕುಟುಂಬದಲ್ಲಿ ಕಿರಿಕಿರಿ. ಏಕಾಏಕಿ ಮಾತು ಕೊಡಬೇಡಿ.
ಕರ್ಕಾಟಕ ರಾಶಿ :
ಆದಾಯ ಗೌಪ್ಯವಾಗಿಡಿ. ಮನಸ್ಸಿಗೆ ಮಂಕುತನ. ವಂಚನೆಯಿಂದ ಎಚ್ಚರ. ಅನ್ಯರ ಹಸ್ತಕ್ಷೇಪ ಮತ್ತು ಚಾಡಿ ಮಾತುಗಳು ಹೆಚ್ಚಾಗಬಹುದು ಯಾರ ಹಸ್ತಕ್ಷೇಪವನ್ನೂ ಸಹಿಸಲಾರಿರಿ.
ಸಿಂಹ ರಾಶಿ :
ಆರ್ಥಿಕ ಲಾಭದಿಂದ ಸುಖ. ಸಂತಾನದಿಂದ ಖುಷಿ. ಮಕ್ಕಳಿಂದ ಉಡುಗೊರೆ ಸಿಗಬಹುದು. ಬುದ್ಧಿಶಕ್ತಿಯಿಂದ ಜಯ. ಧೈರ್ಯದಿಂದ ಮುನ್ನಡೆಯಿರಿ.
ಕನ್ಯಾ ರಾಶಿ :
ಕಡಿಮೆ ಖರ್ಚು ಮತ್ತು ಆದಾಯ ಉದ್ಯಮಕ್ಕೆ ಆದ್ಯತೆ. ವಿರೋಧಿಗಳ ಅಡ್ಡಗಾಲು. ಮಕ್ಕಳ ವಿಚಾರದಲ್ಲಿ ಮೃದುತೆ. ಕೆಲಸಗಳು ಬೇಗ ಮುಗಿಯುತ್ತವೆ.
ತುಲಾ ರಾಶಿ :
ಹಿರಿಯರ ಮಾತಿನಿಂದ ಆದಾಯದ ನೆಮ್ಮದಿ ಹರಣ. ಹಣಕ್ಕಾಗಿ ಕಿರಿಕಿರಿ. ಮಕ್ಕಳಿಗೆ ಉತ್ತಮ ಹವ್ಯಾಸ ಬರುವಂತೆ ಮಾಡಿ. ಮನೆಯಲ್ಲಿ ನೆಮ್ಮದಿ.
ವೃಶ್ಚಿಕ ರಾಶಿ :
ಮಾತುಗಳನ್ನು ಬದಲಿಸಿ ಕೆಂಗಣ್ಣಿಗೆ ಗುರಿಯಾಗಬಹುದು. ಮಕ್ಕಳು ವಿರೋಧಿಸಬಹುದು. ವ್ಯಾಪಾರದಲ್ಲಿ ಪಾರದರ್ಶಕತೆ ಇರಲಿ. ದಾಂಪತ್ಯದಲ್ಲಿ ಸಾಮರಸ್ಯ ಬೇಕು.
ಧನು ರಾಶಿ :
ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ಪೂರ್ಣ. ಸಹೋದರರ ಭೇಟಿ. ರಾಜಕೀಯದಲ್ಲಿ ಸಿಕ್ಕಿಕೊಳ್ಳಬಹುದು. ಭೂಮಿ ವಿವಾದ ಆರಂಭ. ಅನಗತ್ಯ ವಾದದಿಂದ ದೂರವಿರಿ.
ಮಕರ ರಾಶಿ :
ಮಾತುಗಳು ಸಹೃದಯವಾಗಿದ್ದರೂ ಕೇಳಿಸಿಕೊಳ್ಳುವವರು ಸಿಗದಿರಬಹುದು. ಸ್ಥಿರಾಸ್ತಿ ಕೈತಪ್ಪಬಹುದು. ದಾಂಪತ್ಯದಲ್ಲಿ ಸಲುಗೆ ಅತಿ.
ಕುಂಭ ರಾಶಿ :
ಕಲಿಕೆಯಲ್ಲಿ ಚುರುಕುತನ. ಆತ್ಮಸ್ಥೈರ್ಯ. ಹೊಸ ವಿಚಾರಗಳು ಕಲಿಯುವಿರಿ. ಗುರಿ ಸಾಧನೆಗೆ ಸಾರ್ವಜನಿಕ ಸಂಪರ್ಕ ಕಳೆದುಕೊಳ್ಳಬಹುದು.
ಮೀನ ರಾಶಿ :
ದೈನಂದಿನ ಕಾರ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆಯಿಂದ ಶಾಂತಿ. ಹಿರಿಯರ ಆರೋಗ್ಯ ಗಮನಿಸಿ. ಹೊಸ ಹೂಡಿಕೆಗೆ ಮನಸ್ಸು ಮಾಡಿ.
