ಜನ್ಮಸಂಖ್ಯೆ 1, 10, 19, 28
ಸ್ನೇಹಿತರು ಮತ್ತು ಬಂಧುಗಳೊಂದಿಗೆ ಕಿರು ಪ್ರವಾಸ ಅಥವಾ ರೆಸಾರ್ಟ್‌ಗಳಿಗೆ ಭೇಟಿ ನೀಡುವ ಯೋಗವಿದೆ. ವಿಶೇಷವೆಂದರೆ, ನೀವು ಯಾರಿಂದ ಸಹಾಯ ನಿರೀಕ್ಷಿಸಿರಲಿಲ್ಲವೋ ಅಂತಹ ವ್ಯಕ್ತಿಯೇ ಇಂದು ನಿಮ್ಮ ವೃತ್ತಿಜೀವನಕ್ಕೆ ದೊಡ್ಡ ಆಸರೆಯಾಗಲಿದ್ದಾರೆ. ಗೃಹಾಲಂಕಾರ ಮತ್ತು ಬ್ರ್ಯಾಂಡೆಡ್ ವಸ್ತುಗಳ ಖರೀದಿಗೆ ಅತಿಯಾದ ಖರ್ಚು ಮಾಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 2, 11, 20, 29
ಮನಸ್ಸಿನಲ್ಲಿ ಇಂದು ಸಣ್ಣದೊಂದು ಆತಂಕ ಮನೆಮಾಡಬಹುದು. ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದ ಸಂಕೋಚ ನಿಮ್ಮನ್ನು ಕಾಡಲಿದೆ. ನೇರ ಮಾತುಗಳನ್ನಾಡಲು ಹಿಂಜರಿಯಬೇಡಿ. ಸಹೋದ್ಯೋಗಿಗಳ ಸಲಹೆಯಿಂದ ಹೆಚ್ಚಿನ ಆದಾಯದ ದಾರಿಗಳು ತೆರೆಯಲಿವೆ. ಭಾರವಾದ ವಸ್ತುಗಳನ್ನು ಎತ್ತುವಾಗ ಜಾಗರೂಕರಾಗಿರಿ.
ಜನ್ಮಸಂಖ್ಯೆ 3, 12, 21, 30
ಹಣ ನೀಡಿದರೂ ಕೆಲಸದ ಗುಣಮಟ್ಟ ಸಿಗುತ್ತಿಲ್ಲ ಎಂಬ ಬೇಸರ ನಿಮ್ಮಲ್ಲಿರಬಹುದು. ಆದರೆ, ನಿಮ್ಮ ನಾಯಕತ್ವದಲ್ಲಿ ನಡೆದ ಸಣ್ಣ ಕೆಲಸಗಳಿಗೂ ಇಂದು ದೊಡ್ಡ ಮಟ್ಟದ ಮೆಚ್ಚುಗೆ ಸಿಗಲಿದೆ. ಕಲಾ ಕ್ಷೇತ್ರ ಅಂದರೆ ಸಿನಿಮಾ, ರಂಗಭೂಮಿ ಅಥವಾ ಯಕ್ಷಗಾನದಲ್ಲಿರುವವರಿಗೆ ಇಂದು ಯಶಸ್ಸಿನ ದಿನ. ನಿಮ್ಮಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಇತರರಿಗೆ ಉಡುಗೊರೆಯಾಗಿ ನೀಡುವ ಸಂದರ್ಭ ಬರಬಹುದು.
ಜನ್ಮಸಂಖ್ಯೆ4, 13, 22, 31
ಇಂದು ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುವಿರಿ. ಈ ಹಿಂದೆ ಸಮಯ ನೀಡಲಾಗದ ಆತ್ಮೀಯರ ಜೊತೆ ಕಾಲ ಕಳೆಯುವಿರಿ. ಕೃಷಿ ಕ್ಷೇತ್ರದಲ್ಲಿರುವವರಿಗೆ ಅಥವಾ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿರುವವರಿಗೆ ಇಂದು ಲಾಭದಾಯಕ ದಿನ. ಹೊಸ ಯಂತ್ರೋಪಕರಣಗಳ ಖರೀದಿಗೆ ಅಥವಾ ಕೊಟೇಷನ್ ಪಡೆಯಲು ಇದು ಸೂಕ್ತ ಸಮಯ.
ಜನ್ಮಸಂಖ್ಯೆ 5, 14, 23
ನಿಮ್ಮ ಕೆಲಸದ ಶೈಲಿಯಲ್ಲಿ ಮಹತ್ತರ ಬದಲಾವಣೆ ತರಲಿದ್ದೀರಿ. ಕೆಲಸ ಮುಗಿಯುವವರೆಗೆ ಅದರ ಗುಟ್ಟನ್ನು ಕಾಪಾಡಿಕೊಳ್ಳುವ ನಿರ್ಧಾರ ಮಾಡುವಿರಿ. ಈ ಹಿಂದೆ ನೀವು ಕೂಡಿಟ್ಟಿದ್ದ ಸಣ್ಣ ಉಳಿತಾಯವು ಇಂದು ತುರ್ತು ಸಮಯದಲ್ಲಿ ದೊಡ್ಡ ನೆರವಾಗಲಿದೆ. ನಿಮ್ಮ ಸಂಘಟನಾ ಶಕ್ತಿ ಇಂದು ಹೆಚ್ಚಿರಲಿದೆ.
ಜನ್ಮಸಂಖ್ಯೆ 6, 15, 24
ಇಂದು ನಿಮಗೆ ತಲೆಮಾರಿನ ಅಂತರದ (Generation Gap) ಅನುಭವವಾಗಲಿದೆ. ಹಣಕಾಸಿನ ವಿಷಯದಲ್ಲಿ ಯಾರಿಗೂ ಉಚಿತ ಸಲಹೆ ನೀಡಲು ಹೋಗಬೇಡಿ, ಅದು ಅಪಹಾಸ್ಯಕ್ಕೆ ಗುರಿಯಾಗಬಹುದು. ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ಘಟನೆಗಳಿಂದ ದೂರವಿರಿ. ಸೀಸನಲ್ ಅಥವಾ ಅಲ್ಪಾವಧಿಯ ವ್ಯಾಪಾರದಿಂದ ಆದಾಯ ಬರುವ ಅವಕಾಶವಿದೆ.
ಜನ್ಮಸಂಖ್ಯೆ 7, 16, 25
ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಹೇಳಿ, ಇಲ್ಲದಿದ್ದರೆ ನಿಮ್ಮ ನಿರೀಕ್ಷೆಗಳು ಇತರರಿಗೆ ಅರ್ಥವಾಗದು. ದಾಂಪತ್ಯ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹೊಸ ಮನೆ, ಸೈಟು ಅಥವಾ ಕಾರು ಖರೀದಿಯ ಬಗ್ಗೆ ಕುಟುಂಬದೊಂದಿಗೆ ಗಂಭೀರ ಚರ್ಚೆ ನಡೆಸಲು ಇಂದು ಪ್ರಶಸ್ತ ದಿನವಾಗಿದೆ.
ಜನ್ಮಸಂಖ್ಯೆ 8, 17, 26
ಕುಟುಂಬದಲ್ಲಿ ಸಾಮರಸ್ಯದ ವಾತಾವರಣವಿರುತ್ತದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗೆ ಬಜೆಟ್ ಸಿದ್ಧಪಡಿಸುವಿರಿ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ, ವಿಶೇಷವಾಗಿ ದೀರ್ಘ ಬಿಡುವಿನ ನಂತರ ಕೆಲಸಕ್ಕೆ ಮರಳುವವರಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಆಫರ್ ಬರಬಹುದು. ವರ್ಕ್ ಫ್ರಮ್ ಹೋಮ್ ಅಥವಾ ನಿಮಗೆ ಅನುಕೂಲಕರವಾದ ಪಾಳಿಯಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 9, 18, 27
ವಿದೇಶದಲ್ಲಿರುವವರಿಗೆ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಇಂದು ಸವಾಲಾಗಬಹುದು. ಬದಲಾಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಕಾಗಬಹುದು. ಯಾವುದಾದರೂ ರಹಸ್ಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದರೆ, ಇಂದು ಅದನ್ನು ಹೇಳಿಕೊಳ್ಳುವುದು ಮಾನಸಿಕ ನೆಮ್ಮದಿಗೆ ಕಾರಣವಾಗಲಿದೆ.





