ಇಂದು ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರ. ದಕ್ಷಿಣಾಯನ, ಹೇಮಂತ ಋತು, ಪೌಷ ಮಾಸದ ಶುಕ್ಲ ಪಕ್ಷದ ತ್ರಯೋದಶೀ ತಿಥಿ. ರೋಹಿಣೀ ನಕ್ಷತ್ರ ಮತ್ತು ವಿಷ್ಕಂಭ ಯೋಗವಿದೆ. ಸೂರ್ಯೋದಯ ಬೆಳಿಗ್ಗೆ 06:50ಕ್ಕೆ ಮತ್ತು ಸೂರ್ಯಾಸ್ತ ಸಂಜೆ 06:06ಕ್ಕೆ ಇರಲಿದೆ.
ಮೇಷ ರಾಶಿ: ಇಂದು ನೀವು ಮೌನಕ್ಕೆ ಶರಣಾಗುವುದು ಉತ್ತಮ. ಅನಗತ್ಯ ಮಾತಿನಿಂದ ಅಪವಾದಗಳು ಬರಬಹುದು. ಹಣಕಾಸಿನ ನಷ್ಟದ ಮುನ್ಸೂಚನೆ ಇರುವುದರಿಂದ ಜಾಗರೂಕರಾಗಿರಿ. ಮಕ್ಕಳ ವಿವಾಹದ ಚಿಂತೆ ಕಾಡಬಹುದು. ಆಪತ್ತಿನಲ್ಲಿ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ದೊಡ್ಡ ಬೆಂಬಲ ನೀಡಲಿದೆ.
ವೃಷಭ ರಾಶಿ: ಮಾನಸಿಕ ಅಶಾಂತಿ ನಿಮ್ಮನ್ನು ಕಾಡಬಹುದು. ಭೂಮಿ ಮಾರಾಟದಲ್ಲಿ ಶ್ರಮವಿದ್ದರೂ ಯಶಸ್ಸು ಸಿಗಲಿದೆ. ವೃತ್ತಿ ನಿಮಿತ್ತ ವಿದೇಶ ಪ್ರಯಾಣದ ಯೋಗವಿದೆ. ಇಂದು ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಲು ಇದು ಸಕಾಲ.
ಮಿಥುನ ರಾಶಿ: ಕೆಲಸದ ಒತ್ತಡದಿಂದ ಮನಸ್ಸು ವಿಚಲಿತವಾಗಬಹುದು. ಸಂಗಾತಿಯೊಂದಿಗೆ ಸುಖದ ಕ್ಷಣಗಳನ್ನು ಕಳೆಯುವಿರಿ. ಉದ್ಯೋಗದಲ್ಲಿ ಪಕ್ಷಪಾತ ಕಂಡುಬಂದರೂ ಸಂಯಮ ಕಳೆದುಕೊಳ್ಳಬೇಡಿ. ಆಸ್ತಿ ಹಂಚಿಕೆ ವಿಷಯದಲ್ಲಿ ಅತೃಪ್ತಿ ಕಾಡಬಹುದು. ಯೋಜನೆಗಳನ್ನು ರಹಸ್ಯವಾಗಿಡುವುದು ಒಳ್ಳೆಯದು.
ಕರ್ಕಾಟಕ ರಾಶಿ: ಇಂದು ವಾಗ್ವಾದಗಳಿಂದ ದೂರವಿರಿ. ಕಚೇರಿಯಲ್ಲಿ ಬೇರೆಯವರ ತಪ್ಪಿಗೆ ನೀವು ದಂಡ ತೆರಬೇಕಾಗಬಹುದು. ಪ್ರೀತಿಯ ವಿಷಯದಲ್ಲಿ ಮನಸ್ಸಿನ ಚಾಂಚಲ್ಯ ಹೆಚ್ಚಾಗಲಿದೆ. ನಿಮ್ಮ ಅಂತಃಪ್ರಜ್ಞೆ ಹೇಳುವ ಮಾತನ್ನು ಕೇಳಿಸಿಕೊಳ್ಳಿ, ಇದರಿಂದ ದೊಡ್ಡ ನಷ್ಟಗಳಿಂದ ಪಾರಾಗಬಹುದು.
ಸಿಂಹ ರಾಶಿ: ಮಾತಿನ ಕಠಿಣತೆಯಿಂದ ದೂರವಿರಿ. ಮನೆಯ ಜವಾಬ್ದಾರಿಗಳು ಹೆಚ್ಚಾಗಲಿವೆ. ವಾಹನದಿಂದ ಆದಾಯ ಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿನ ಸಮಸ್ಯೆಗಳನ್ನು ಹೊರಗಿನವರಿಗೆ ತಿಳಿಯುವ ಮುನ್ನವೇ ಸರಿಪಡಿಸಿಕೊಳ್ಳಿ. ಏಕಾಂಗಿತನ ಇಂದು ನಿಮ್ಮನ್ನು ಕಾಡಬಹುದು.
ಕನ್ಯಾ ರಾಶಿ: ಹಣ ಮತ್ತು ವಸ್ತುಗಳ ಬಗ್ಗೆ ಎಚ್ಚರವಿರಲಿ. ಹಿತಶತ್ರುಗಳ ಕಾಟವಿದ್ದರೂ ನಿಮ್ಮ ಪ್ರಾಮಾಣಿಕತೆಗೆ ಗೌರವ ಸಿಗಲಿದೆ. ವ್ಯಾಪಾರದಲ್ಲಿನ ನಷ್ಟವನ್ನು ಚಾಣಾಕ್ಷತನದಿಂದ ಸರಿದೂಗಿಸುವಿರಿ. ಹಾಸ್ಯಭರಿತ ಮಾತುಗಳಿಂದ ಜನರ ಮನ ಗೆಲ್ಲುವಿರಿ.
ತುಲಾ ರಾಶಿ: ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ, ಯಾವುದಕ್ಕೂ ಹಿರಿಯರ ಸಲಹೆ ಪಡೆಯಿರಿ. ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ. ಅಧ್ಯಾತ್ಮದ ಕಡೆಗೆ ಮನಸ್ಸು ವಾಲುವುದು.
ವೃಶ್ಚಿಕ ರಾಶಿ: ಅಪರಿಚಿತರೊಂದಿಗೆ ಅತಿಯಾದ ಸಲುಗೆ ಬೇಡ. ಹಳೆಯ ಪ್ರೇಮ ವ್ಯವಹಾರಗಳು ಮರುಕಳಿಸಿ ಮುಜುಗರ ತರಬಹುದು. ಆಸ್ತಿ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದೀತು. ಅಧಿಕಾರಿಗಳಿಂದ ತೊಂದರೆಯಾಗುವ ಸಂಭವವಿದೆ, ಎಚ್ಚರದಿಂದಿರಿ.
ಧನು ರಾಶಿ: ದೂರ ಪ್ರಯಾಣದಿಂದ ಆಯಾಸ ಹೆಚ್ಚಾಗಬಹುದು. ಪ್ರೇಮ ಜೀವನದಲ್ಲಿ ಹೊಸ ತಿರುವು ಸಿಗಲಿದೆ. ವಸ್ತುಗಳನ್ನು ಕಳೆದುಕೊಳ್ಳುವ ಭೀತಿ ಇರುವುದರಿಂದ ಜಾಗ್ರತೆ ವಹಿಸಿ. ಸಂಗಾತಿಯ ಜೊತೆಗಿನ ಮುನಿಸನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ.
ಮಕರ ರಾಶಿ: ಸರ್ಕಾರಿ ಕೆಲಸಗಳಿಗಾಗಿ ಹಣ ವ್ಯಯವಾಗಬಹುದು. ಉನ್ನತ ಹುದ್ದೆಯ ಅವಕಾಶ ಬಂದರೂ ಮನಸ್ಸು ಒಪ್ಪದಿರಬಹುದು. ಶತ್ರುಗಳನ್ನು ದ್ವೇಷಿಸುವ ಬದಲು ಅವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವ ಕಲೆ ರೂಢಿಸಿಕೊಳ್ಳಿ.
ಕುಂಭ ರಾಶಿ: ಆರ್ಥಿಕ ವಿಷಯಗಳಲ್ಲಿ ಪಾರದರ್ಶಕತೆ ಇರಲಿ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಾಣುವಿರಿ. ನಿಮ್ಮ ಕಾರ್ಯದಲ್ಲಿ ನೀವು ಮಗ್ನರಾಗುವುದರಿಂದ ಕುಟುಂಬದವರ ಅಸಮಾಧಾನಕ್ಕೆ ಗುರಿಯಾಗಬಹುದು. ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವಿದೆ.
ಮೀನ ರಾಶಿ: ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ಇಷ್ಟದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ಭವಿಷ್ಯದ ಬಗ್ಗೆ ಅತಿಯಾದ ಆತಂಕ ಬೇಡ. ಗೃಹ ಬಳಕೆಯ ವಸ್ತುಗಳ ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ.
