ಇಂದು ಶುಕ್ರವಾರದಂದು ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ಅಮಾವಾಸ್ಯೆ ಅಥವಾ ವೈಶಾಖ ಅಮಾವಾಸ್ಯೆ ಎಂತಲೂ ಸಹ ಕರೆಯಲಾಗುತ್ತದೆ. ಈ ದಿನ ಮಹಾಲಕ್ಷ್ಮೀ ದೇವಿಗೆ ವಿಶೇಷವಾಗಿ ದಿನವಾಗಿದೆ. ಶಾಲಿವಾಹನ ಶಕವರ್ಷ 1949ರಲ್ಲಿ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯಾಗಿದೆ. ನಕ್ಷತ್ರ ರೇವತಿ ಇರುವುದರಿಂದ ದಿನವು ಸಾಮಾನ್ಯವಾಗಿ ಶಾಂತಿಯುತವಾಗಿರಲಿದೆ . ಗ್ರಹಗಳ ಸ್ಥಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲದಿದ್ದರೂ, ಶನಿ ಗ್ರಹದ ಪ್ರಭಾವವು ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಬಹುದು. ಈ ದಿನ ದಾನ-ಧರ್ಮ, ಪೂಜೆ-ಪುನಸ್ಕಾರ ಮತ್ತು ಲಕ್ಷ್ಮೀ ಪೂಜೆಗೆ ಉತ್ತಮ ಸಮಯವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ದಿನವು ಮಿಶ್ರ ಫಲಗಳನ್ನು ನೀಡುತ್ತದೆ. ಕೆಲವು ರಾಶಿಗಳಿಗೆ ಆರ್ಥಿಕ ಲಾಭ ಮತ್ತು ಕುಟುಂಬ ಸುಖ ಸಿಗುವ ಸಾಧ್ಯತೆ ಇದೆ. ಆದರೆ ಕೆಲವು ರಾಶಿಗಳಲ್ಲಿ ಜಾಗರೂಕತೆ ಅಗತ್ಯವಿದೆ. ವೃತ್ತಿ, ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ. ಅತಿಯಾದ ಖರ್ಚು ಮತ್ತು ಕೋಪ ನಿಯಂತ್ರಣ ಮಾಡುವುದು ಒಳ್ಳೆಯದು. ಮಹಾಲಕ್ಷ್ಮೀ ಅರಾಧನೆಯಿಂದ ಸಕಲ ಕಾರ್ಯಗಳು ಸಿದ್ಧಿಯಾಗುವ ಭರವಸೆ ಇದೆ.
ಮೇಷ ರಾಶಿ: ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ ಸಿಗಬಹುದು. ಗೃಹದಲ್ಲಿ ಸಂಭ್ರಮದ ವಾತಾವರಣವಿರಲಿದೆ. ಸ್ತ್ರೀಯರ ಮೂಲಕ ಸಹಾಯ ಲಭಿಸುತ್ತದೆ. ಆದರೆ ಹಣ ಗಳಿಸಿದಷ್ಟು ಖರ್ಚಾಗುವ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ.
ವೃಷಭ ರಾಶಿ: ಶ್ರಮಕ್ಕೆ ಫಲ ಸಿಗುತ್ತದೆ. ಉದ್ಯಮದಲ್ಲಿ ನಿರ್ಧಾರಗಳಲ್ಲಿ ಗೊಂದಲವಿರಬಹುದು. ಸೋಮಾರಿತನ ತಪ್ಪಿಸಿ. ಹಣದ ಖರ್ಚು ಹೆಚ್ಚಾಗುವುದು. ಆಸ್ತಿ ವಿಚಾರಗಳನ್ನು ಶಾಂತಿಯುತವಾಗಿ ಬಗೆಹರಿಸಿ.
ಮಿಥುನ ರಾಶಿ: ಸಾಮಾಜಿಕ ಗೌರವ ಸಿಗುತ್ತದೆ. ಪ್ರಯಾಣ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷವಿರಲಿದೆ. ಆದರೆ ಕಚೇರಿಯಲ್ಲಿ ಸಣ್ಣ ಪುಟ್ಟ ಜಗಳಗಳು ಸಂಭವಿಸಬಹುದು ಹುಷಾರಾಗಿರಿ. ಆರೋಗ್ಯ ಉತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ: ಸೋಮಾರಿತನದಿಂದ ಕೆಲಸಗಳು ಸ್ಥಗಿತಗೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಹೆಚ್ಚು ಗಮನ ನೀಡಿ. ಹಣಕಾಸು ಸ್ಥಿರವಾಗಿರುತ್ತದೆ. ಸಂಗಾತಿಯೊಂದಿಗೆ ಸಮಾಧಾನದ ಮಾತುಗಳು ಅಗತ್ಯ.
ಸಿಂಹ ರಾಶಿ: ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ಆಲೋಚನೆಗಳು ಬರುತ್ತವೆ. ಕುಟುಂಬದಲ್ಲಿ ಗೊಂದಲ ತಪ್ಪಿಸಿ. ದಾನ ಮಾಡುವ ಮನಸ್ಸುಂಟಾಗುತ್ತದೆ. ಹಳೆಯ ಮಿತ್ರರ ಭೇಟಿ ಸಂತಸ ನೀಡುತ್ತದೆ.
ಕನ್ಯಾ ರಾಶಿ: ಪ್ರಯಾಣ ಸಾಧ್ಯ. ಆರೋಗ್ಯದಲ್ಲಿ ಏರುಪೇರು ಇರಬಹುದು. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಜಾಗರೂಕತೆಯಿಂದ ಇರಬೇಕು. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ.
ತುಲಾ ರಾಶಿ: ಹೊಸ ಉದ್ಯೋಗಕ್ಕೆ ಒಳ್ಳೆಯ ದಿನ. ಪ್ರೀತಿಪಾತ್ರರ ಬೆಂಬಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸುದ್ದಿ. ಕುಟುಂಬ ಆರೋಗ್ಯ ಚೆನ್ನಾಗಿರುತ್ತದೆ.
ವೃಶ್ಚಿಕ ರಾಶಿ: ಕೆಲಸದಲ್ಲಿ ಅಡೆತಡೆಗಳು ಸಂಭವಿಸಬಹುದು. ತಾಳ್ಮೆಯಿಂದಿರಿ. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಮನೆ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ.
ಧನು ರಾಶಿ: ಮಿಶ್ರ ಫಲ. ಹೊಸ ಯೋಜನೆಗಳಿಗೆ ಅನುಕೂಲ. ಉದ್ಯಮಿಗಳು ಕಷ್ಟಪಟ್ಟು ಕೆಲಸ ಮಾಡಬೇಕು. ಹೂಡಿಕೆಯಿಂದ ಲಾಭದ ಸಾಧ್ಯತೆ ಇದೆ.
