ಉತ್ತರ ಪ್ರದೇಶದಲ್ಲಿ ನೆಲೆಸಿದ್ದ ಜಮಾಲುದ್ದೀನ್ ಎಂಬಾತನ ನೇತೃತ್ವದಲ್ಲಿ ನಡೆಯುತ್ತಿದ್ದ ಅತಿ ದೊಡ್ಡ ಮತಾಂತರ ದಂಧೆಯೊಂದು ಇತ್ತೀಚೆಗೆ ಬಯಲಾಗಿದೆ. ಲವ್ ಜಿಹಾದ್ ಎಂಬ ತಂತ್ರದ ಮೂಲಕ ಅನ್ಯಧರ್ಮೀಯ ಯುವತಿಯರನ್ನು ಗುರಿಯಾಗಿಸಿ, ಕೋಟಿ ಕೋಟಿ ರೂಪಾಯಿಗಳ ಜಾಲವನ್ನು ಹೆಣೆದಿದ್ದ ಈ ಗ್ಯಾಂಗ್‌ನ ಚಟುವಟಿಕೆಗಳು ಉತ್ತರ ಪ್ರದೇಶ ಎಟಿಎಸ್ ತಂಡದ ತನಿಖೆಯಿಂದ ಬೆಳಕಿಗೆ ಬಂದಿವೆ.
ಜಮಾಲುದ್ದೀನ್ ಗ್ಯಾಂಗ್ ವಿವಿಧ ಸಮುದಾಯಗಳ ಯುವತಿಯರ ಮತಾಂತರಕ್ಕೆ ದರಪಟ್ಟಿಯನ್ನೇ ರಚಿಸಿತ್ತು. ಬ್ರಾಹ್ಮಣ, ಸಿಖ್, ಕ್ಷತ್ರಿಯ ಯುವತಿಯರನ್ನು ಮತಾಂತರಗೊಳಿಸಿದರೆ 15 ಲಕ್ಷ ರೂ. ಒಬಿಸಿ ಸಮುದಾಯದ ಯುವತಿಯರಿಗೆ 13 ಲಕ್ಷ ರೂ. ಮತ್ತು ಇತರ ಜಾತಿಗಳ ಯುವತಿಯರಿಗೆ 10 ಲಕ್ಷ ರೂ. ಬಹುಮಾನವನ್ನು ನಿಗದಿಪಡಿಸಲಾಗಿತ್ತು. ಈ ದಂಧೆಯಲ್ಲಿ ಭಾಗಿಯಾದ ಯುವಕರು ನಕಲಿ ಹಿಂದೂ ಗುರುತಿನ ಪತ್ರಗಳನ್ನು ಬಳಸಿ ಯುವತಿಯರನ್ನು ಪ್ರೀತಿಯ ಜಾಲಕ್ಕೆ ಬೀಳಿಸುತ್ತಿದ್ದರು.
ಜಮಾಲುದ್ದೀನ್‌ನ ಗ್ಯಾಂಗ್‌ಗೆ ಸುಮಾರು 40 ಮುಸ್ಲಿಂ ದೇಶಗಳಿಂದ ಕೋಟಿ ಕೋಟಿ ರೂಪಾಯಿಗಳ ಹಣಕಾಸಿನ ನೆರವು ಬರುತ್ತಿತ್ತು. ವಿದೇಶದ 40 ಬ್ಯಾಂಕ್ ಖಾತೆಗಳಿಂದ 100 ಕೋಟಿ ರೂ.ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗಿತ್ತು. ಈ ಹಣವನ್ನು ಯುವತಿಯರಿಗೆ ಆಮಿಷವಾಗಿ ಖರ್ಚು ಮಾಡಲಾಗುತ್ತಿತ್ತು. ಕೌಟುಂಬಿಕ ಸಮಸ್ಯೆಗಳು ಅಥವಾ ಬಡತನದಲ್ಲಿರುವ ಯುವತಿಯರನ್ನು ಗುರಿಯಾಗಿಸಿ, ಪ್ರೀತಿಯ ಹೆಸರಿನಲ್ಲಿ ಬೆದರಿಕೆ ಹಾಕಿ ಮತಾಂತರಗೊಳಿಸಲಾಗುತ್ತಿತ್ತು.
ಈ ಗ್ಯಾಂಗ್‌ನ ಯುವಕರು ಮೊದಲಿಗೆ ಯುವತಿಯರೊಂದಿಗೆ ಪ್ರೀತಿ, ಪ್ರೇಮ, ಪ್ರಣಯದ ಮಾತುಗಳನ್ನಾಡಿ ಸಂಬಂಧ ಬೆಳೆಸುತ್ತಿದ್ದರು. ನಂತರ ಬೆದರಿಕೆ ಹಾಕಿ ಅವರನ್ನು ಮತಾಂತರಗೊಳಿಸಿ ವಿವಾಹವಾಗುತ್ತಿದ್ದರು. ಜಮಾಲುದ್ದೀನ್ ತನ್ನ ಪತ್ನಿಯೊಂದಿಗೆ ಸೇರಿ ಈ ದಂಧೆಯನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಸುತ್ತಿದ್ದ. ಆತ ಇಸ್ಲಾಂ ಧರ್ಮದ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.
ಜಮಾಲುದ್ದೀನ್‌ನ ಕೃತ್ಯ ಬಯಲಾದ ತಕ್ಷಣ ಉತ್ತರ ಪ್ರದೇಶ ಸರ್ಕಾರವು ಆತನ ವಿರುದ್ಧ ಕಠಿಣ ಕ್ರಾಂತ ಕೈಗೊಂಡಿತು. ಆತನಿಗೆ ಸೇರಿದ ಸ್ವಾಸ್ತಿಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಉತ್ತರ ಪ್ರದೇಶ ಎಟಿಎಸ್ ತಂಡದಿಂದ ತನಿಖೆ ಆರಂಭವಾಯಿತು. ಜಮಾಲುದ್ದೀನ್ ಮತ್ತು ಆತನ ಸಹಚರರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.