ವಿಜಯ್ 30 ಸೀಟು ಗೆದ್ದರೆ ತಲೆ ಬೋಳಿಸುತ್ತೇನೆ ಎಂದಿದ್ದ ಖ್ಯಾತ ಸಿನಿ ವಿಮರ್ಶಕರು ಹೇಳಿದಂತೆಯೇ ಮಾಡಿದ್ದಾರೆ..!!

BeFunky collage (98)

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಝಗಂ (TVK) ಪಕ್ಷ ಮೊದಲ ಪ್ರಯತ್ನದಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 108 ಸ್ಥಾನಗಳಲ್ಲಿ ಜಯಗಳಿಸಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಧೂಳೀಪಟ ಮಾಡಿದ TVK ಸರ್ಕಾರ ರಚನೆಗೆ ಸಕ್ರಿಯ ಕಸರತ್ತು ಆರಂಭಿಸಿದೆ.

ಈ ಭರ್ಜರಿ ಗೆಲುವಿನ ನಡುವೆಯೇ ವಿಜಯ್ ಪಕ್ಷದ ವಿರುದ್ಧ ಸವಾಲು ಹಾಕಿದ್ದ ಖ್ಯಾತ ಸಿನಿ ವಿಮರ್ಶಕ ಪ್ರಶಾಂತ್ ರಂಗಸ್ವಾಮಿ ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. “ಟಿವಿಕೆ 30 ಸೀಟುಗಳು ಗೆದ್ದರೆ ತಲೆ ಬೋಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಅವರು, ಈಗ 108 ಸೀಟುಗಳ ಗೆಲುವಿನ ಬಳಿಕ ತಲೆ ಬೋಳಿಸಿಕೊಂಡು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್‌ಗೆ ಭರ್ಜರಿ ಬೆಂಬಲ :

ತಮಿಳುನಾಡಿನ ಮಹಿಳೆಯರು, ಯುವಕರು ಮತ್ತು ಸಿನಿಮಾ ಅಭಿಮಾನಿಗಳು ವಿಜಯ್ ಅವರನ್ನು ಬೆಂಬಲಿಸಿದ್ದಾರೆ. ಪಕ್ಷ, ಸಿದ್ಧಾಂತ, ಧರ್ಮ ಮತ್ತು ಜಾತಿ ಮೀರಿ ಜನರು TVK ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಡಿಎಂಕೆ ಪಕ್ಷಕ್ಕೆ ಕೇವಲ 59 ಸೀಟುಗಳು ಬಂದಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಹಿರಿಯ ನಾಯಕರು ಸೋಲು ಕಂಡಿದ್ದಾರೆ. ಇದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸೂಚನೆಯಾಗಿದೆ.

ಪ್ರಶಾಂತ್ ರಂಗಸ್ವಾಮಿ ಅವರ ಈ ಕ್ರಿಯೆ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು “ಇದು ನಿಜವಾದ ಸ್ಪೋರ್ಟ್ಸ್ ಸ್ಪಿರಿಟ್” ಎಂದು ಪ್ರಶಂಸೆ ಮಾಡುತ್ತಿದ್ದಾರೆ.

Exit mobile version