ತಮಿಳುನಾಡಿನ ಸಿಎಂ ಆಗಿ ದಳಪತಿ ವಿಜಯ್ ಫಿಕ್ಸ್! 118 ಸಂಖ್ಯಾ ಬಲದೊಂದಿಗೆ ಗದ್ದುಗೆ ಸಿದ್ಧ

Prajavani 2026 04 18 vrj3940t file85fgrpwvh2dbhcrdbx4

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ವಿಸಿಕೆ ಅಧಿಕೃತ ಬೆಂಬಲ ಘೋಷಿಸಿದ್ದು, ಇದರೊಂದಿಗೆ ವಿಜಯ್ ಅವರು ಮುಖ್ಯಮಂತ್ರಿಯಾಗುವುದು ಫಿಕ್ಸ್ ಆಗಿದೆ.ವಿಸಿಕೆ ಪಕ್ಷವು ಟಿವಿಕೆ ಪ್ರಧಾನ ಕಾರ್ಯದರ್ಶಿಗೆ ಬೆಂಬಲ ಪತ್ರ ಸಲ್ಲಿಸಿದೆ. ಟಿವಿಕೆ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪತ್ರ ಸಲ್ಲಿಕೆಯಾಯಿತು. ಇಬ್ಬರು ಶಾಸಕರ ಬೆಂಬಲದೊಂದಿಗೆ ಟಿವಿಕೆಯ ಸಂಖ್ಯಾಬಲ ಈಗ 118 ಕ್ಕೆ ಏರಿಕೆಯಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ೧೧೮ ತಲುಪಿರುವುದರಿಂದ ವಿಜಯ್ ಅವರು ಸ್ಪಷ್ಟ ಬಹುಮತದೊಂದಿಗೆ ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ಧರಾಗಿದ್ದಾರೆ.ಸಂಜೆ 5 ಗಂಟೆಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಲು ವಿಜಯ್ ಸಜ್ಜಾಗಿದ್ದಾರೆ.

ಸಂಖ್ಯಾಬಲ ವಿಭಜನೆ:
ಟಿವಿಕೆ – 107
ಕಾಂಗ್ರೆಸ್ – 5
ಸಿಪಿಐ – 2
ಸಿಪಿಎಂ – 2
ವಿಸಿಕೆ – 2
ಒಟ್ಟು = 118 

4 ದಿನಗಳಲ್ಲಿ 4ನೇ ಬಾರಿಗೆ ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವ ವಿಜಯ್, ಈ ಬಾರಿ ಮಿತ್ರಪಕ್ಷಗಳ ಶಾಸಕರ ಸಹಿಯೊಂದಿಗೆ ಬೆಂಬಲ ಪತ್ರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ. ರಾಜ್ಯಪಾಲರು ಸಂಜೆ 7.10 ಕ್ಕೆ ಕೇರಳಕ್ಕೆ ತೆರಳುವುದರಿಂದ, ಅವರು ಕೇರಳಕ್ಕೆ ಹೊರಡುವ ಮುನ್ನವೇ ಭೇಟಿ ನಡೆಸಿ ಹಕ್ಕು ಮಂಡಿಸುವ ತಂತ್ರ ರೂಪಿಸಲಾಗಿದೆ.

ಈ ಬಾರಿ ಸ್ಪಷ್ಟ ಬಹುಮತವಿರುವುದರಿಂದ ರಾಜ್ಯಪಾಲರು ವಿಜಯ್ ಅವರಿಗೆ ಸರ್ಕಾರ ರಚಿಸುವ ಆಹ್ವಾನ ನೀಡುವ ಸಾಧ್ಯತೆ ಹೆಚ್ಚಿದೆ.ತಮಿಳುನಾಡಿನಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಕಡಿವಾಣ ಬೀಳಲಿದೆ.

ದಳಪತಿ ವಿಜಯ್ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವುದು ಖಚಿತವಾಗಿದ್ದು, ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವ ಸಾಧ್ಯತೆ ಇದೆ. ರಾಜ್ಯ ಜನತೆ ಈಗ ಹೊಸ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ.

 

 

Exit mobile version