ಮೀನು ಹಿಡಿಯುತ್ತಿದ್ದ ಯುವಕ ಮೀನಿಗೆ ಬಲಿ

Siddu stalin kcr (64)

ಕೆಲವೊಮ್ಮೆ ಸಾವು ಹೇಗೆಲ್ಲಾ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ಆದರೆ ಇಲ್ಲೊಬ್ಬರು ಮೀನಿನಿಂದಾಗಿ ಸಾವು ಕಂಡಿದ್ದಾರೆ. ಹೌದು, ತಮಿಳುನಾಡಿನ ಚೆಂಗಲ್ಪಟ್ಟು ಮೂಲದ 29 ವರ್ಷದ ವ್ಯಕ್ತಿ ಮಣಿಕಂಡನ್‌ ಸಾವಿಗೀಡಾದ ವ್ಯಕ್ತಿ.

ಇವರು ಸ್ಥಳೀಯ ಕೆರೆಯೊಂದರಲ್ಲಿ ಮೀನು ಹಿಡಿಯಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಹಿಡಿದ ಮೀನೊಂದನ್ನು ಬಾಯೊಳಗೆ ಹಾಕಿಕೊಂಡಿದ್ದು, ಈ ಮೀನು ಗಂಟಲಿನತ್ತ ಹೊರಳಿಕೊಂಡು ಹೋಗಿದ್ದ ಪರಿಣಾಮ ಮಣಿಕಂಡನ್ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮದುರನ್‌ತಕಮ್‌ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ಮೃತ ನಿವಾಸಿ ಮಣಿಕಂಡನ್ ಅರ್ಯಪಕ್ಕಂ ನಿವಾಸಿಯಾಗಿದ್ದಾರೆ. ದಿನಗೂಲಿ ಕಾರ್ಮಿಕನಾಗಿದ್ದ ಮಣಿಕಂಡನ್ ಆ ಪ್ರದೇಶದಲ್ಲಿ ತಮ್ಮ ಬರಿಗೈಲಿ ಮೀನು ಹಿಡಿಯುವ ಅಭ್ಯಾಸದಿಂದಲೇ ಹೆಸರುವಾಸಿಯಾಗಿದ್ದರು. ಎಂದಿನಂತೆ ಅವರು ನೀರು ಕಡಿಮೆ ಇದ್ದಂತಹ ಕೀಳವಳಮ್ ಕೆರೆಗೆ ನೀರು ಹಿಡಿಯಲು ಹೋಗಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಮಣಿಕಂಡನ್ ಮೊದಲಿಗೆ ಒಂದು ಮೀನು ಹಿಡಿದಿದ್ದಾರೆ. ಈ ವೇಳೆ ಇನ್ನೊಂದು ಮೀನನ್ನು ಇದೇ ಸಮಯದಲ್ಲಿ ಹಿಡಿದಿದ್ದು, ಮೊದಲು ಹಿಡಿದ ಮೀನನ್ನು ತಪ್ಪಿಸಿಕೊಂಡು ಹೋಗದಂತೆ ಬಾಯಲ್ಲಿ ತುಂಬಿಕೊಂಡಿದ್ದಾನೆ. 

ಸ್ಥಳೀಯವಾಗಿ ಪಣಂಗೊಟೈ ಎಂದು ಕರೆಯಲ್ಪಡುವ ಜೀವಂತ ಮೀನು ಇದಾಗಿದ್ದು, ಹೊರಳುತ್ತಾ ಮಣಿಕಂಡನ್‌ನ ಗಂಟಲಿನತ್ತ ಹೋಗಿ ಸಿಲುಕಿಕೊಂಡಿದೆ. ಜೊತೆಯಲ್ಲಿದ್ದವರು ಆತನ ಸಹಾಯಕ್ಕೆ ಧಾವಿಸಿದರಾದರೂ ಮೀನನ್ನು ಗಂಟಲಿನಿಂದ ಹೊರತೆಗೆಯುವಲ್ಲಿ ವಿಫಲರಾದರು.

ಈ ಮೀನು ಮೊನಚಾದ ಮುಳ್ಳನ್ನು ಹೊಂದಿದ್ದು, ಅಪಾಯದಲ್ಲಿರುವ ಸಮಯದಲ್ಲಿ ಈ ಮುಳ್ಳನ್ನು ಹೊರಬಿಡುತ್ತದೆ. ಹೀಗಾಗಿ ಗಂಟಲಿನಲ್ಲಿ ಸಿಲುಕಿದ ಮೀನನ್ನು ಹೊರತೆಗೆಯಲಾಗಲಿಲ್ಲ, ಪರಿಣಾಮ ಮಣಿಕಂಡನ್ ಗಂಟಲಿನಲ್ಲಿ ಮೀನು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಕೂಡಲೇ ಮಣಿಕಂಡನ್‌ನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದರು. 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version