ಮುಂಬೈ: ಕಾಂಡ್ಲಾದಿಂದ (Kandla) ಮುಂಬೈಗೆ (Mumbai) ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ (Spicejet Aircraft) ಚಕ್ರ ಟೇಕಾಫ್ (Take Off) ಆಗುವ ವೇಳೆ ರನ್‌ವೇನಲ್ಲೇ ಕಳಚಿಕೊಂಡ ಘಟನೆ ನಡೆದಿದೆ. ಈ ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಸಂಜೆ 5 ಗಂಟೆಯವರೆಗೆ ಎಲ್ಲಾ ನಿರ್ಗಮನಗಳನ್ನು ಸ್ಥಗಿತಗೊಳಿಸಲಾಯಿತು. ಇಷ್ಟಾದರೂ ವಿಮಾನ ಮುಂಬೈಗೆ ಪ್ರಯಾಣಬೆಳೆಸಿ, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಸ್ಪೈಸ್‌ಜೆಟ್ ವಿಮಾನವು ಟೇಕ್‌ಆಫ್ ವೇಳೆ ಹೊರಗಿನ ಚಕ್ರವನ್ನು ಕಳೆದುಕೊಂಡಿತು, ಇದು ರನ್‌ವೇನಲ್ಲಿ ಕಂಡುಬಂದ ಕಾರಣಕ್ಕಾಗಿ ವಿಮಾನವು ತಕ್ಷಣ ತುರ್ತು ಲ್ಯಾಂಡಿಂಗ್ ಮಾಡಿತು. ಸ್ಪೈಸ್‌ಜೆಟ್‌ನ ಮೊದಲ ಹೇಳಿಕೆಯ ಪ್ರಕಾರ, ವಿಮಾನವು ಸುರಕ್ಷಿತವಾಗಿ ಮುಂಬೈಗೆ ಲ್ಯಾಂಡ್ ಆಗಿದ್ದು, ಟರ್ಮಿನಲ್‌ಗೆ ಟ್ಯಾಕ್ಸಿ ಮಾಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
New :
– A @flyspicejet plane’s outer wheel flew away after take-off at Kandla
– Full emergency was declared at Mumbai airport
– Plane landed safely thankfully@DGCAIndia @AviationSafety pic.twitter.com/EFpG1t0jwh
— Tarun Shukla (@shukla_tarun) September 12, 2025
ನಿನ್ನೆ ಪ್ರೈಸ್‌ಜೆಟ್ ವಿಮಾನದ ಎಸಿಯಲ್ಲಿ ದೋಷ:
1. ಎಸಿ ದೋಷದಿಂದ ಅವ್ಯವಸ್ಥೆ: ಗುರುವಾರ, ದೆಹಲಿಯಿಂದ ಕಾಠ್ಮಂಡುಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಏರ್ ಕಂಡಿಷನಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿತು. ಇದರಿಂದ ವಿಮಾನದ ಒಳಗಿನ ತಾಪಮಾನ ಏರಿಕೆಯಾಗಿ, ಪ್ರಯಾಣಿಕರು ತೀವ್ರ ತೊಂದರೆಗೊಳಗಾದರು. ಇದರಿಂದ ಕೆರಳಿದ ಕೆಲವು ಪ್ರಯಾಣಿಕರು ಗಲಾಟೆ ಮಾಡಿದ್ದರಿಂದ ವಿಮಾನದೊಳಗೆ ಅವ್ಯವಸ್ಥೆ ಉಂಟಾಯಿತು. ಸಮಸ್ಯೆಯನ್ನು ಸರಿಪಡಿಸಲು ವಿಮಾನಯಾನ ಸಂಸ್ಥೆ ಪ್ರಯತ್ನಿಸಿತು ಎಂದು ತಿಳಿದುಬಂದಿದೆ.
2. ತಂಪು ಪಾನೀಯದಲ್ಲಿ ಲೋಹದ ವಸ್ತು: ಸೆಪ್ಟೆಂಬರ್ 8ರಂದು, ಗೋವಾದಿಂದ ಪುಣೆಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ SG 1080ರಲ್ಲಿ ಒಬ್ಬ ಪ್ರಯಾಣಿಕನಿಗೆ ಒದಗಿಸಿದ ತಂಪು ಪಾನೀಯದಲ್ಲಿ ಲೋಹದ ವಸ್ತು ಕಂಡುಬಂದಿತು. ಈ ಘಟನೆಯಿಂದ ಆತಂಕಗೊಂಡ ಪ್ರಯಾಣಿಕನನ್ನು ವಿಮಾನ ಇಳಿದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ತಪಾಸಣೆಯ ನಂತರ ಯಾವುದೇ ಲೋಹದ ವಸ್ತು ದೇಹದಲ್ಲಿ ಕಂಡುಬರಲಿಲ್ಲ ಎಂದು ದೃಢಪಟ್ಟಿದ್ದು, ಪ್ರಯಾಣಿಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಯು ಸೀಲ್ ಮಾಡಿದ ಪಾನೀಯವನ್ನು ಪರಿಶೀಲನೆಗೆ ಕಳುಹಿಸಿದ್ದು, ಅಗತ್ಯ ಸಹಾಯವನ್ನು ಒದಗಿಸಿದೆ ಎಂದು ತಿಳಿಸಿದೆ.