ನವದೆಹಲಿ: ದೀಪಾವಳಿಯ ಸಂಭ್ರಮದ ವಾತಾವರಣದಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯ ಪ್ರಸಿದ್ದ ಘಂಟೆವಾಲಾ ಬೇಕರಿಗೆ ಭೇಟಿ ನೀಡಿ, ಸಾಂಪ್ರದಾಯಿಕ ಸಿಹಿತಿಂಡಿಗಳ ತಯಾರಿಕೆಯಲ್ಲಿ ಭಾಗವಹಿಸಿದ್ದಾರೆ. ಹಬ್ಬದ ಪ್ರಯುಕ್ತ ಸಿಹಿತಿಂಡಿಯನ್ನ ಸ್ವತಃ ರಾಹುಲ್ ತಯಾರಿಸಿದ್ದಾರೆ.
पुरानी दिल्ली की मशहूर और ऐतिहासिक घंटेवाला मिठाइयों की दुकान पर इमरती और बेसन के लड्डू बनाने में हाथ आज़माया।
सदियों पुरानी इस प्रतिष्ठित दुकान की मिठास आज भी वही है – ख़ालिस, पारंपरिक और दिल को छू लेने वाली।
दीपावली की असली मिठास सिर्फ़ थाली में नहीं, बल्कि रिश्तों और समाज… pic.twitter.com/bVWwa2aetJ
— Rahul Gandhi (@RahulGandhi) October 20, 2025
ಇದನ್ನ ರಾಹುಲ್ ಗಾಂಧಿ ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಪೋಸ್ಟ್‌ನಲ್ಲಿ ಅವರು ದೆಹಲಿಯ ಘಂಟೆವಾಲಾ ಬೇಕರಿಯಲ್ಲಿ ಸಾಂಪ್ರದಾಯಿಕ ಜಿಲೇಬಿ ಮತ್ತು ಬೇಸನ್ ಲಡ್ಡು ತಯಾರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಸಿಹಿತಿಂಡಿಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಈ ಪ್ರಕ್ರಿಯೆಯ ಹಿಂದೆ ಕಾರ್ಮಿಕರ ಶ್ರಮ ಮತ್ತು ಪ್ರತಿಭೆ ಇರುತ್ತದೆ ಎಂದು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ದೀಪಾವಳಿಯು ಕೇವಲ ಬೆಳಕಿನ ಹಬ್ಬವಷ್ಟೇ ಅಲ್ಲ, ಸಾಮಾಜಿಕ ಒಗ್ಗಟ್ಟು, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸ್ಥಳೀಯ ಆರ್ಥಿಕತೆಗೆ ಬೆಂಬಲ ನೀಡಬೇಕೆಂದು ತಿಳಿದುಬರುತ್ತದೆ.ದೀಪಾವಳಿಯು ವೈವಿಧ್ಯತೆಯಲ್ಲಿ ಏಕತೆಯನ್ನು ಮತ್ತು ಅಜ್ಞಾನದ ಕತ್ತಲೆಯ ಮೇಲೆ ಜ್ಞಾನದ ಬೆಳಕಿನ ವಿಜಯವನ್ನು ಪ್ರತಿಬಿಂಬಿಸುತ್ತದೆ.





