ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹ*ತ್ಯೆ

WhatsApp Image 2026 05 21 at 5.12.57 PM

ಪಾಕ್ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದ್ ಪ್ರದೇಶದಲ್ಲಿ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ ಹಮ್ಜಾ ಬುರ್ಹಾನ್ ಹತ್ಯೆ ಮಾಡಲಾಗಿದೆ. ಅಪರಿಚಿತ ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ ಅವನು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಕುರಿತು ಅಧಿಕೃತ ದೃಢೀಕರಣ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ.

ಹಮ್ಜಾ ಬುರ್ಹಾನ್, 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನೆಂದು ಹೇಳಲಾಗಿದೆ.. ಆ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧರ 40 ಮಂದಿ ಹುತಾತ್ಮರಾಗಿದ್ದು, ದೇಶಾದ್ಯಂತ ಆಕ್ರೋಶವನ್ನು ಉಂಟುಮಾಡಿತ್ತು.

ವರದಿಗಳ ಪ್ರಕಾರ, ಹಮ್ಜಾ ಬುರ್ಹಾನ್ ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿದ್ದು, ನಂತರ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗುತ್ತದೆ. ಭದ್ರತಾ ಸಂಸ್ಥೆಗಳು ಅವನನ್ನು 2022ರಲ್ಲಿ ಅಧಿಕೃತವಾಗಿ ಭಯೋತ್ಪಾದಕನೆಂದು ಘೋಷಿಸಿದ್ದವು. ಆತ “ಡಾಕ್ಟರ್” ಎಂದು ಎಂದೇ ಹೆಸರಾಗಿದ್ದ ಎಂಬ ಮಾಹಿತಿ ಇದೆ.

ಘಟನೆ ನಡೆದ ಪ್ರದೇಶದಲ್ಲಿ ಅಪರಿಚಿತ ಶೂಟರ್‌ಗಳು ಹಮ್ಜಾ ಬುರ್ಹಾನ್ ಮೇಲೆ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ದಾಳಿ ನಂತರ ಶೂಟರ್‌ಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳೀಯ ಪೊಲೀಸ್ ಹಾಗೂ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿವೆ.

ಈ ಹತ್ಯೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳ ನಡುವಿನ ಒಳಜಗಳ ಇರಬಹುದುದೆಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಗಳು ಇನ್ನೂ ಹೊರಬಂದಿಲ್ಲ. ಈ ಘಟನೆ ಸಂಬಂಧ ಪಾಕಿಸ್ತಾನ ಅಥವಾ ಯಾವುದೇ ಅಧಿಕೃತ ಭದ್ರತಾ ಸಂಸ್ಥೆಯಿಂದ ಇನ್ನೂ ಸ್ಪಷ್ಟವಾದ ಹೇಳಿಕೆ ಬಂದಿಲ್ಲ. ತನಿಖೆಯ ಬಳಿಕವೇ ಸಂಪೂರ್ಣ ಸತ್ಯ ಹೊರಬರುವ ನಿರೀಕ್ಷೆ ಇದೆ.

Exit mobile version