ಮಹಾಕುಂಭಮೇಳದಲ್ಲಿ ಪ್ರಧಾನಿ ಮೋದಿ ಅಮೃತಸ್ನಾನ

ಮಹಾಕುಂಭಮೇಳದಲ್ಲಿ ಪ್ರಧಾನಿ ಮೋದಿ

Untitled design (21)

ಮಹಾ ಮಹಾಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಪ್ರಯಾಗ್ರಾಜ್ನಲ್ಲಿ ಅಮೃತ ಸ್ನಾನಕ್ಕೆ ಮುನ್ನ ಪ್ರಧಾನಿ ಮೋದಿ ಬೋಟ್ ಮೂಲಕ ಜಲ ವಿಹಾರ ನಡೆಸಿದರು. ದೂರದ ದಡದಲ್ಲಿ ನಿಂತಿದ್ದ ಭಕ್ತಾದಿಗಳತ್ತ ಕೈ ಬೀಸಿದರು. ಪ್ರಧಾನಿ ಮೋದಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಭದ್ರತೆಯ ನಡುವೆ ಸಾಧು – ಸಂತರು, ಅಘೋರಿಗಳು ಹಾಗೂ ಭಕ್ತಾದಿಗಳ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದಿಲ್ಲಿ ವಿಧಾನಸಭೆಗೆ ಮತದಾನ ನಡೆಯುತ್ತಿರುವ ದಿನವೇ ಪ್ರಧಾನಿ ಮೋದಿ ಅವರ ಪುಣ್ಯ ಸ್ನಾನ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

ಇದೇ ವೇಳೆ ಅವರು ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಥ್ ಕೊಟ್ಟರು. ಆದಿತ್ಯನಾಥ್ ಅವರು ಮೋದಿ ಅವರಿಗೆ ಕುಂಭಮೇಳದಲ್ಲಿ ನೀಡಲಾದ ವಿವಿಧ ಸೌಕರ್ಯಗಳ ಬಗ್ಗೆ ವಿವರಿಸಿದರು.

ADVERTISEMENT
ADVERTISEMENT

ಮೋದಿ ಅವರ ಪುಣ್ಯ ಸ್ನಾನದ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ ಹಾಗೂ ಕುಂಭನಗರಿಯಲ್ಲಿ ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು. ಜನವರಿ 13ರಂದು ಕುಂಭಮೇಳ ಪ್ರಾರಂಭವಾಗಿದೆ. ಇದುವರೆಗೆ 20 ಕೋಟಿಗೂ ಅಧಿಕ ಜನ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರುವರಿ 26ರಂದು ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ.

Exit mobile version