ನವದೆಹಲಿ, ಸೆಪ್ಟೆಂಬರ್ 17: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ವಿರೋಧಿಗಳು ಸೇರಿದಂತೆ ಹಲವು ಗಣ್ಯರು ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಈ ದಿನ ವಿರೋಧ ಪಕ್ಷದ ನಾಯಕರು ಕೂಡ ಮೋದಿಯವರಿಗೆ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಮೋದಿಯವರಿಗೆ ಶುಭಾಶಯ ತಿಳಿಸಿದ್ದಾರೆ. ಟ್ರಂಪ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ರೂಥ್‌ನಲ್ಲಿ ಬರೆದುಕೊಂಡಿದ್ದು, “ನನ್ನ ಸ್ನೇಹಿತ ನರೇಂದ್ರ ಮೋದಿಗೆ ಫೋನ್ ಕರೆ ಮಾಡಿ ಜನ್ಮದಿನದ ಶುಭಾಶಯಗಳನ್ನು ಕೋರಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು” ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಮೋದಿ ಅವರು, “ಧನ್ಯವಾದಗಳು ಸ್ನೇಹಿತ. ನನ್ನ ಹುಟ್ಟುಹಬ್ಬಕ್ಕೆ ಕರೆ ಮಾಡಿ ಪ್ರೀತಿಯಿಂದ ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು. ನಿಮ್ಮಂತೆಯೇ, ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ನಿಮ್ಮ ನಿರ್ಧಾರಗಳನ್ನ ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.
Best wishes to Prime Minister, Shri Narendra Modi Ji on his birthday.
May he be blessed with good health and long life.@narendramodi
— Mallikarjun Kharge (@kharge) September 17, 2025
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. “ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ” ಎಂದು ಅವರು ಬರೆದಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸರಿಸಾಟಿ ಇಲ್ಲದ ವಿಶ್ವನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತವನ್ನು ಮುನ್ನಡೆಸುತ್ತಿರುವ ಹಾಗೂ ಆತ್ಮನಿರ್ಭರತೆಯ ಮೂಲಕ ವಿಕಸಿತ ಭಾರತ ಸಾಕಾರಗೊಳಿಸುವ ನಿಮ್ಮ ಸಂಕಲ್ಪವು ಸಮಸ್ತ ಭಾರತೀಯರು ಹೆಮ್ಮೆಯಿಂದ ತಲೆ… pic.twitter.com/Ibeapkh9Vv
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 17, 2025
ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕೂಡ ಮೋದಿಯವರನ್ನು ಪ್ರಶಂಸಿಸಿ ಶುಭಾಶಯ ಸಲ್ಲಿಸಿದ್ದಾರೆ. ಅವರ ಟ್ವೀಟ್‌ನಲ್ಲಿ, “ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಜನ್ಮದಿನದ ಹೃತೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸರಿಸಾಟಿ ಇಲ್ಲದ ವಿಶ್ವನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ ಭಾರತವನ್ನು ಮುನ್ನಡೆಸುತ್ತಿರುವ ಹಾಗೂ ಆತ್ಮನಿರ್ಭರತೆಯ ಮೂಲಕ ವಿಕಸಿತ ಭಾರತ ಸಾಕಾರಗೊಳಿಸುವ ನಿಮ್ಮ ಸಂಕಲ್ಪವು ಸಮಸ್ತ ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ನಿಮ್ಮ ದೃಷ್ಟಿಕೋನವು ಭರವಸೆಯ ಬೆಳಕು ಮತ್ತು ದುರ್ಬಲರ ಕಲ್ಯಾಣ, ಸಬಲೀಕರಣಕ್ಕಾಗಿ ತಾವು ರೂಪಿಸಿರುವ ಕಾರ್ಯಕ್ರಮಗಳು ಜನಪರತೆಯ ಅನನ್ಯ ಮಾದರಿ ಹಾಗೂ ಪ್ರೇರಣೆ. ರಾಷ್ಟ್ರಕ್ಕಾಗಿ ನಿಮ್ಮ ಅವಿಶ್ರಾಂತ ಸಮರ್ಪಣೆಯ ದುಡಿಮೆ, ಶಿಸ್ತು ಮತ್ತು ಸಂಕಲ್ಪ ನಮಗೆ ದಾರಿದೀಪವಾಗಿದೆ. ನಿಮಗೆ ಆ ಭಗವಂತ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಿ ಭಾರತವನ್ನು ಪ್ರಗತಿಯ ಉನ್ನತಿಯತ್ತ ಮುನ್ನಡೆಸಿ ಜಾಗತಿಕ ಶಕ್ತಿಯನ್ನಾಗಿಸಲು ಸರ್ವಶಕ್ತಿಯನ್ನೂ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ.
Wishing Prime Minister Narendra Modi ji a happy birthday and good health.
— Rahul Gandhi (@RahulGandhi) September 17, 2025
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೂಡ ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ” ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
भारत के यशस्वी प्रधानमंत्री माननीय श्री @narendramodi जी को 75वें जन्मदिवस की हार्दिक शुभकामनाएँ।
पिछले 11 वर्षों में आपके अथक परिश्रम और तप ने करोड़ों भारतीयों के जीवन में अभूतपूर्व परिवर्तन लाया है। आपने प्रत्येक देशवासी के हृदय में राष्ट्रभक्ति का दीप प्रज्वलित किया और राष्ट्र… pic.twitter.com/tAoGu9dZLd— Pralhad Joshi (@JoshiPralhad) September 17, 2025
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮೋದಿಯವರನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ. “ಭಾರತದ ಗೌರವಾನ್ವಿತ ಪ್ರಧಾನಿ ಮೋದಿ ಅವರಿಗೆ 75 ನೇ ಹುಟ್ಟುಹಬ್ಬದ ಶುಭಾಶಯಗಳು. ಕಳೆದ 11 ವರ್ಷಗಳಲ್ಲಿ ನಿಮ್ಮ ಅವಿಶ್ರಾಂತ ಕಠಿಣ ಪರಿಶ್ರಮ ಮತ್ತು ಪರಿಶ್ರಮವು ಕೋಟ್ಯಂತರ ಭಾರತೀಯರ ಜೀವನದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ. ನೀವು ಪ್ರತಿಯೊಬ್ಬ ದೇಶವಾಸಿಯ ಹೃದಯದಲ್ಲಿ ದೇಶಭಕ್ತಿಯ ದೀಪವನ್ನು ಬೆಳಗಿಸಿದ್ದೀರಿ ಮತ್ತು ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಕಲ್ಪವನ್ನು ಜಾಗೃತಗೊಳಿಸಿದ್ದೀರಿ. ನಿಮ್ಮ ನಾಯಕತ್ವದಲ್ಲಿ, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ಇಂದು ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಸಂಕಲ್ಪವಾಗಿದೆ. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ. ಇದರಿಂದ ನೀವು ಮುಂಬರುವ ವರ್ಷಗಳಲ್ಲಿ ಅದೇ ಸಮರ್ಪಣೆ ಮತ್ತು ಶಕ್ತಿಯಿಂದ ಭಾರತ ಮಾತೆಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬಹುದು” ಎಂದು ಅವರು ಬರೆದಿದ್ದಾರೆ.