ಪಾರಸ್ ಆಸ್ಪತ್ರೆಯ ಐಸಿಯು (ICU) ವಾರ್ಡ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಕುಖ್ಯಾತ ರೌಡಿ ಚಂದನ್ ಮಿಶ್ರಾ (Chandan Mishra) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಐವರು ದುಷ್ಕರ್ಮಿಗಳು ನುಗ್ಗಿ ಅವನನ್ನು ಕೊಲೆ ಮಾಡಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಬಕ್ಸಾರ್‌ನ ಕುಖ್ಯಾತ ರೌಡಿ ಚಂದನ್ ಮಿಶ್ರಾ, ವೈದ್ಯಕೀಯ ಕಾರಣಗಳಿಗಾಗಿ ಪೆರೋಲ್‌ನಲ್ಲಿ ಬಿಡುಗಡೆಯಾಗಿ ಪಾರಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ, ಐದು ಜನ ಆಗಂತುಕರು ಪಿಸ್ತೂಲುಗಳೊಂದಿಗೆ ಐಸಿಯು ವಾರ್ಡ್‌ಗೆ ನುಗ್ಗಿ ಚಂದನ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಈ ದಾಳಿಕೋರರು ಯಾವುದೇ ಭಯವಿಲ್ಲದೇ ಆಸ್ಪತ್ರೆಯ ಒಳಗೆ ಓಡಾಡುವುದು ಕಂಡುಬಂದಿದೆ. ಈ ದಾಳಿಯಲ್ಲಿ ಚಂದನ್ ಮಿಶ್ರಾ ಸಾವನ್ನಪ್ಪಿದ್ದಾನೆ.
Paras Hospital CCTV Footage Where Criminals killed a patient admitted at Paras Hospital in Patna by entering the hospital premises.
Four criminals came in a vehicle, parked it outside the hospital, entered the ICU, carried out the killing, and fled.#PatnaLawOrder pic.twitter.com/VUVCLJVM8L
— Siddhant Anand (@JournoSiddhant) July 17, 2025
ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕಾಯ್ ಶರ್ಮಾ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಈ ಕೊಲೆಯನ್ನು ವಿರೋಧಿ ಗ್ಯಾಂಗ್‌ನ ಸದಸ್ಯರು ನಡೆಸಿರಬಹುದು ಎಂದು ಶಂಕಿಸಲಾಗಿದೆ. ಚಂದನ್ ಶೇರು ಗ್ಯಾಂಗ್‌ನಿಂದ ಈ ದಾಳಿ ನಡೆದಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಚಂದನ್‌ನನ್ನು ಈ ಹಿಂದೆ ಬಕ್ಸಾರ್‌ನಿಂದ ಭಾಗಲ್ಪುರ ಜೈಲಿಗೆ ವರ್ಗಾಯಿಸಲಾಗಿತ್ತು ಮತ್ತು ಚಿಕಿತ್ಸೆಗಾಗಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿತ್ತು. ದಾಳಿಕೋರರನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆಸ್ಪತ್ರೆಗಳ ಸುತ್ತಮುತ್ತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಅನುಮಾನಾಸ್ಪದ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದರು.
ಚಂದನ್ ಮಿಶ್ರಾ ವಿರುದ್ಧ ಡಜನ್‌ಗಟ್ಟಲೆ ಕೊಲೆ ಆರೋಪಗಳಿದ್ದವು. ಆದರೆ, ಆತನ ಚಿಕಿತ್ಸೆಯ ಸಂದರ್ಭದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪೊಲೀಸರು ದಾಳಿಕೋರರನ್ನು ಹುಡುಕುತ್ತಿದ್ದಾರೆ.