ಹೆಂಡತಿ ಹುಟ್ಟುಹಬ್ಬಕ್ಕೆ ರಜೆ ಹಾಕದಿದ್ರೆ ಗಂಡಂದಿರಿಗೆ ತುಂಬ ಕಷ್ಟ ಅನ್ನೋ ಕಾಲ ಇದು.ಆದರೆ ಹೆಂಡತಿ ಹುಟ್ಟುಹಬ್ಬಕ್ಕೆಂದು ಲಂಡನ್‌ನಿಂದ ಬಂದ ಗಂಡ, ಸಪ್ರೈಸ್ ಕೊಡೋಕೆ ಬಂದು ತಾನೆ ಹೆಣವಾಗಿ ಹೋಗಿದ್ದಾನೆ. ಉತ್ತರಪ್ರದೇಶದ ಮೀರತ್‌ನಲ್ಲಿ ಇಂತಹ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ಸೇರಿ ಗಂಡನನ್ನೆ ಪೀಸ್ ,ಪೀಸ್ ಮಾಡಿದ ಪತ್ನಿ.
ಮೀರತ್‌ನಲ್ಲಿ 15 ದಿನಗಳ ನಂತರ ಗಂಡನನ್ನು ಪ್ರಿಯತಮನ ಜೊತೆ ಸೇರಿ ಪತ್ನಿ ಕೊಂದ ಘಟನೆ ಬಯಲಾಗಿದೆ. ಮರ್ಚೆಂಟ್ ನೇವಿ ಆಫೀಸರ್ ಸೌರಭ್ ರಜಪೂತ್ ನತದೃಷ್ಟ ಗಂಡ. ಪತ್ನಿ ಮುಸ್ಕಾನ್ ರಸ್ತೋಗಿ, ಪ್ರಿಯಕರ ಸಾಹಿಲ್ ಶುಕ್ಲಾ ಈ ಹತ್ಯೆಯ ಪ್ರಮುಖ ಆರೋಪಿಗಳಾಗಿದ್ದಾರೆ.
ಕಳೆದ ಮಾರ್ಚ್ 4ಕ್ಕೆ ಮರ್ಚೆಂಟ್ ನೇವಿ ಆಫೀಸರ್ ಸೌರಭ್ ರಜಪೂತ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದರ ಜಾಡು ಹಿಡಿದು ಹೋಗುವಷ್ಟರಲ್ಲಿ ಸೀಮೆಂಟ್ ತುಂಬಿದ್ದ ಡ್ರಮ್ ಒಳಗಿದ್ದ ತುಂಡು, ತುಂಡಾದ ಶವದ ವಾಸನೆ ಅಕ್ಕ-ಪಕ್ಕದ ಮನೆಯವರ ಮೂಗಿಗೆ ಬಡಿದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಂಚಿಂಚೂ ಮಾಹಿತಿಯನ್ನು ಹೊರ ತೆಗೆದಿದ್ದಾರೆ.
ಪ್ರೇಮ ಮದುವೆಗೆ ವಿರೋಧ, ಆದರೆ…
2016ರಲ್ಲಿ ಸೌರಭ್ ರಜಪೂತ್, ಮುಸ್ಕಾನ್ ರಸ್ತೋಗಿಯನ್ನು ಮದುವೆ ಮಾಡಿಕೊಂಡಿದ್ದರು. ಕುಟುಂಬದ ವಿರೋಧವಿದ್ದರೂ, ಇಬ್ಬರಿಗೆ 6 ವರ್ಷದ ಮಗಳೊಂದಿಗೆ ಸುಖದ ಕುಟುಂಬವಾಗಿತ್ತು. ಕೆಲಸದ ಹಿನ್ನೆಲೆಯಲ್ಲಿ ಸೌರಭ್ ಲಂಡನ್‌ಗೆ ಹೋಗಿದ್ದ. ಗಂಡ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ರೆ ಹೆಂಡತಿ ಪ್ರಿಯಕರನ ಜೊತೆ ಕಾಲ ಕಳೆಯುತ್ತಿದ್ದಳು.
ಹುಟ್ಟುಹಬ್ಬದ ‘ಸರ್‌ಪ್ರೈಸ್’ ಆಯಿತು ಮಾರಣಾಂತಿಕ!
ಕಳೆದ ಮಾರ್ಚ್ 4ರಂದು ಪತ್ನಿ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಕೊಡಲು ಸೌರಭ್ ಲಂಡನ್‌ನಿಂದ ಮೀರತ್‌ಗೆ ಬಂದಿದ್ದ. ಸರ್‌ಪ್ರೈಸ್ ಕೊಡೋಕೆ ಬಂದ ಗಂಡನಿಗೆ ಪತ್ನಿ ಬಿಗ್ ಶಾಕ್ ಕೊಟ್ಟಿದ್ದಾಳೆ. ತನ್ನ ಪ್ರಿಯಕರ ಸಾಹಿಲ್ ಜೊತೆ ಪತ್ನಿ ಮುಸ್ಕಾನ್ ರಸ್ತೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.ತನ್ನ ಲವ್ವರ್ ಜೊತೆ ಸಿಕ್ಕಿಬೀಳುತ್ತಿದ್ದಂತೆ ಮುಸ್ಕಾನ್, ಸೌರಭ್ನನ್ನ ಸಾಹಿಲ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ. ನಂತರ ದೇಹವನ್ನು ತುಂಡು-ತುಂಡು ಮಾಡಿ ಸಿಮೆಂಟ್ ಡ್ರಮ್‌ನಲ್ಲಿ ಮುಚ್ಚಲಾಯಿತು. ಆರೋಪಿಗಳು ಹಿಲ್ ಸ್ಟೇಷನ್‌ಗೆ ಟ್ರಿಪ್ ಹೋಗಿ, 15 ದಿನಗಳವರೆಗೆ ಕೊಲೆಯನ್ನು ಮುಚ್ಚಿಡಲು ಪ್ರಯತ್ನಿಸಿದರು.
ಸೌರಭ್ ಕುಟುಂಬಸ್ಥರಿಗೆ ಆತನಂತೆಯೇ ಮೆಸೇಜ್‌ಗಳನ್ನು ಮಾಡ್ತಿದ್ದಳು. ಮುಸ್ಕಾನ್ ಜೂಟಾಟದ ಹಿನ್ನೆಲೆಯಲ್ಲಿ ಸೌರಭ್ ಕೂಡ ಬದುಕಿದ್ದಾನೆ ಎಂದು ಕುಟುಂಬಸ್ಥರು ನಂಬಿದ್ದರು.
ಸೌರಭ್ ಸತ್ತಿರುವ ವಿಷಯ ಮುಚ್ಚಿಟ್ಟಿದ್ದ ಪತ್ನಿ ಮುಸ್ಕಾನ್ ರಸ್ತೋಗಿ, ಗಂಡನಿಗೆ ಫೋನ್ ಕೊಡು ಅಂದ್ರೆ ನೆಪವೊಡ್ಡಿ ತಪ್ಪಿಸಿಕೊಳುತ್ತಿದ್ದಳು. ಸರಿಯಾಗಿ 15 ದಿನಗಳ ಬಳಿಕ ಈ ದಂಪತಿ ವಾಸವಿದ್ದ ಮನೆಯಿಂದ ಕೆಟ್ಟ ವಾಸನೆ ಬರೋಕೆ ಶುರುವಾಗಿದೆ. ನೆರೆ ಹೊರೆಯವರು ಪೊಲೀಸರಿಗೆ ತಿಳಿಸಿದ ಮೇಲೆ ಸೌರಭ್ ಕೊಲೆಯಾಗಿರೋದು ಪತ್ತೆಯಾಗಿದೆ. ಆರೋಪಿಗಳಿಬ್ಬರನ್ನೂ ಮೀರತ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.