ಗಂಟಲಲ್ಲಿ ಮೀನು ಸಿಲುಕಿ ಯುವಕ ಸಾ*ವು

ಗಂಟಲಲ್ಲಿ ಮೀನು ಸಿಲುಕಿ ಯುವಕ ಸಾ*ವು

Untitled Design 2025 03 03t172135.507

ಕೇರಳ: ಭತ್ತದ ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ಯುವಕನೊಬ್ಬ ಅಕಸ್ಮಿಕವಾಗಿ ಮೃತಪಟ್ಟಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ನಡೆದಿದೆ.

ಘಟನೆ ವಿವರ:
ಪುತ್ತುಪ್ಪಲ್ಲಿ ನಿವಾಸಿ ಆದರ್ಶ್ ಅಲಿಯಾಸ್ ಉನ್ನಿ (25) ಸಾವನ್ನಪ್ಪಿದ ಯುವಕ. ತನ್ನ ಸ್ನೇಹಿತರೊಂದಿಗೆ ಭತ್ತದ ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಭಾನುವಾರ ಸಂಜೆ 4.30ರ ಸುಮಾರಿಗೆ ಮೀನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ, ದಿಢೀರ್‌ ಒಂದು ಮೀನು ಬಾಯಿಗೆ ಹಾರಿ ಗಂಟಲೊಳಗೆ ಸಿಲುಕಿಕೊಂಡಿದೆ. ತಕ್ಷಣವೇ ಸ್ನೇಹಿತರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಯುವಕನ ಜೀವ ಉಳಿಸಲು ಸಾಧ್ಯವಾಗಲಿಲ್ಲ.

Exit mobile version