ವಿಶ್ವದಲ್ಲಿ ಅತಿಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿವರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದುಕೊಳ್ಳೋ ಮೂಲಕ ಕೋಟಿ ಕುಬೇರರ ದೇಶ ಅನ್ನೋ ಖ್ಯಾತಿ ಪಡೆದಿದೆ. ಭಾರತದ ಶತಕೋಟ್ಯಾಧೀಶರ ಪಟ್ಟಿಯೊಂದನ್ನು ಹುರೂನ್ ಸಂಸ್ಥೆ ಬಿಡುಗಡೆ ಮಾಡಿದ್ದು ಭಾರತದಲ್ಲಿ ಬರೋಬ್ಬರಿ 284 ಶತಕೋಟ್ಯಾಧಿಪತಿಗಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ 13 ಜನರು ಹೊಸದಾಗಿ ಶತಕೋಟ್ಯಾಧಿಪತಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ದಿಗ್ಗಜ ಮುಕೇಶ್ ಅಂಬಾನಿ ಆಸ್ತಿ 8.6 ಲಕ್ಷ ಕೋಟಿ ರೂಪಾಯಿ ಇಳಿಕೆಯಾಗಿದ್ದರೂ, ಈಗಲೂ ಅವರೇ ಭಾರತದ ನಂಬರ್ ಒನ್ ಶತಕೋಟ್ಯಾಧಿಪತಿಯಾಗಿದ್ದಾರೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025 ರ ಪ್ರಕಾರ ಮುಕೇಶ್ ಅದಾನಿ ಜಾಗತಿಕ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ ಆದರೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಉಳಿದಿದ್ದಾರೆ. ಇನ್ನು ರೋಶನಿ ನಾದರ್ 3.5 ಲಕ್ಷ ಕೋಟಿ ಮೌಲ್ಯದ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಕಳೆದ ವರ್ಷ ಭಾರತದ ಅತ್ಯಧಿಕ ಸಂಪತ್ತು ಗಳಿಕೆಯನ್ನು ದಾಖಲಿಸಿದ್ದು, ಸುಮಾರು 1 ಲಕ್ಷ ಕೋಟಿ ರೂಪಾಯಿ ಹೆಚ್ಚಳದೊಂದಿಗೆ, ಅವರ ಒಟ್ಟು ಸಂಪತ್ತು 8.4 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಅವರು ಈಗ ಜಾಗತಿಕವಾಗಿ 18 ನೇ ಶ್ರೀಮಂತ ವ್ಯಕ್ತಿ ಮತ್ತು ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ಅತಿಹೆಚ್ಚು ಬಿಲಿಯನೇರ್ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ ಬಿಟ್ಟರೆ ಅತಿಹೆಚ್ಚು ಕುಬೇರರು ಇರುವುದು ಭಾರತದಲ್ಲೇ. ನಂತರದ ಸ್ಥಾನದಲ್ಲಿ ಯುಕೆ, ಜರ್ಮನಿ, ಸ್ವಿಟ್ಜೆರ್ಲೆಂಡ್ ಸ್ಥಾನ ಗಿಟ್ಟಿಸಿಕೊಂಡಿದೆ
ಭಾರತದ ಟಾಪ್ 10 ಶತಕೋಟ್ಯಾಧೀಶರು
ಮುಕೇಶ್ ಅಂಬಾನಿ – 8.6 ಲಕ್ಷ ಕೋಟಿ ರೂಪಾಯಿ
ಅದಾನಿ ಗ್ರೂಪ್ಸ್‌ನ ಗೌತಮ್ ಅದಾನಿ – 8.4 ಲಕ್ಷ ಕೋಟಿ ರೂಪಾಯಿ
ಎಚ್‌ಸಿಎಲ್‌ನ ರೋಶನಿ ನಾದರ್ – 3.5 ಲಕ್ಷ ಕೋಟಿ ರೂಪಾಯಿ
ಸನ್ ಫಾರ್ಮಾದ ದಿಲೀಪ್ ಸಾಂಘ್ವಿ – 2.5 ಲಕ್ಷ ಕೋಟಿ ರೂಪಾಯಿ
ವಿಪ್ರೋದ ಅಜಿಂ ಪ್ರೇಂಜಿ – 2.2 ಲಕ್ಷ ಕೋಟಿ ರೂಪಾಯಿ
ಆದಿತ್ಯ ಬಿರ್ಲಾದ ಕುಮಾರ್ ಮಂಗಳಂ ಬಿರ್ಲಾ – 2 ಲಕ್ಷ ಕೋಟಿ ರೂಪಾಯಿ
ಸೀರಂ ಇನ್ಸ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ – 2 ಲಕ್ಷ ಕೋಟಿ ರೂಪಾಯಿ
ಬಜಾಜ್ ಆಟೋದ ನೀರಜ್ ಬಜಾಜ್ – 1.6 ಲಕ್ಷ ಕೋಟಿ ರೂಪಾಯಿ
ಆರ್‌ಜೆ ಕ್ರಾಪ್‌ನ ರವಿ ಜೈಪುರಿಯಾ – 1.4 ಲಕ್ಷ ಕೋಟಿ ರೂಪಾಯಿ
ಡಿ ಮಾರ್ಟ್‌ನ ರಾಧಾಕೃಷ್ಣ ದಮಾನಿ – 1.4 ಲಕ್ಷ ಕೋಟಿ ರೂಪಾಯಿ
ಚೀನಾದ ಶತಕೋಟ್ಯಾಧಿಪತಿಗಳ ಸರಾಸರಿ ಆಸ್ತಿ 29,027 ಕೋಟಿ ರೂಪಾಯಿ ಇದ್ದರೆ, ಭಾರತದ ಶತಕೋಟ್ಯಾಧಿಪತಿಗಳ ಸರಾಸರಿ ಆಸ್ತಿ 34,514 ಕೋಟಿ ರೂಪಾಯಿ ಇದೆ. ಭಾರತದ ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಸಂಪತ್ತನ್ನು ದೇಶದ 284 ಕೋಟ್ಯಾಧಿಪತಿಗಳು ಹೊಂದಿದ್ದಾರೆ. ಇವರೆಲ್ಲರ ಬಳಿ 98 ಲಕ್ಷ ಕೋಟಿ ರೂಪಾಯಿ ಸಂಪತ್ತಿದ್ದು, ಇದು ಭಾರತದ ಜಿಡಿಪಿಯ ಶೇ.33ರಷ್ಟಿದೆ. ಇನ್ನು ರೋಜರ್ ಪೇ ಸಂಸ್ಥಾಪಕರಾದ 34 ವರ್ಷದ ಶಶಾಂಕ್ ಕುಮಾರ್ ಮತ್ತು ಹರ್ಶಿಲ್ ಮಾಥುರ್ 8,643 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ದೇಶದ ಕಿರಿಯ ಕೋಟ್ಯಾಧಿಪತಿಗಳು ಎನಿಸಿಕೊಂಡಿದ್ದಾರೆ.