ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ದ್ವಿತೀಯ ಹಂತದ ಸಂಸತ್ ಅಧಿವೇಶನ ತೀವ್ರ ಕಾವು ಪಡೆದುಕೊಂಡಿದೆ. ಒಂದೆಡೆ ‘ನೀಟ್’ (NEET) ಪರೀಕ್ಷೆ ಅಕ್ರಮಗಳ ಕುರಿತು ಗಲಾಟೆ ನಡೆದಿದ್ದರೆ, ಮತ್ತೊಂದೆಡೆ ಎಫ್ಸಿಆರ್ಎ (FCRA – Foreign Contribution Regulation Act) ತಿದ್ದುಪಡಿ ಕಾಯ್ದೆಯ ಸುತ್ತ ಬಿಸಿಬಿಸಿ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಎರಡು ಪ್ರಮುಖ ವಿಷಯಗಳು ಸಂಸತ್ತಿನ ಒಳಗೂ ಹೊರಗೂ ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಗಿವೆ.
FCRA ಸುತ್ತ ರಣಾಂಗಣವಾದ ಅಧಿವೇಶನ
ಭಾರತದ ಸಂಸತ್ತಿನಲ್ಲಿ ‘ಎಫ್‌ಸಿಆರ್‌ಎ’ ತಿದ್ದುಪಡಿ ಮಸೂದೆಗೆ ಸಮ್ಮತಿ ಸಿಗದಂತೆ ತಡೆಯಲು ಅಮೆರಿಕದ ಪ್ರಭಾವಿ ತಜ್ಞರು ಹಾಗೂ ಸ್ಥಳೀಯ ಎನ್ಆರ್ಐಗಳು (NRI) ಅಲ್ಲಿನ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
FCRA ತಿದ್ದುಪಡಿಯಿಂದ ಭಾರತಕ್ಕೆ ಸಿಗುವ ಲಾಭಗಳೇನು?
ಭಾರತದಲ್ಲಿ’ಎಫ್‌ಸಿಆರ್‌ಎ’ ಕಾಯ್ದೆಯನ್ನು ಬಿಗಿಗೊಳಿಸುವುದರಿಂದ ವಿದೇಶಿ ದೇಣಿಗೆಯ ಹೆಸರಿನಲ್ಲಿ ನಡೆಯುವ ಅಕ್ರಮಗಳಿಗೆ ತಡೆ ಬೀಳಲಿದೆ:
•ಸರಿಯಾದ ಬಳಕೆಗೆ ಅನ್ವೇಷಣೆ: ವಿದೇಶದಿಂದ ಸರಕಾರೇತರ ಸಂಸ್ಥೆಗಳಿಗೆ (NGO) ಬರುವ ಹಣವು ಸೂಕ್ತ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂಬುದನ್ನು ಪಾರದರ್ಶಕಗೊಳಿಸಲು ಇದು ಸಹಕಾರಿ.
• ದುರ್ಬಳಕೆಗೆ ತಡೆ: ಈ ಹಿಂದೆ ಮಕ್ಕಳ ಕಲ್ಯಾಣ, ನಿರ್ಗತಿಕರ ಪುನರ್ವಸತಿಯಂತಹ ಯೋಜನೆಗಳ ಹೆಸರಿನಲ್ಲಿ ಬಂದ ವಿದೇಶಿ ಹಣವನ್ನು ಬೇರೆ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ನೂತನ ನಿಯಮಗಳಿಂದ ಈ ರೀತಿಯ ದುರ್ಬಳಕೆಗೆ ಪೂರ್ಣ ವಿರಾಮ ಬೀಳಲಿದೆ.
ಪ್ರತಿಪಕ್ಷಗಳ ವಿರೋಧ ಹಾಗೂ ಹೊರಗಿನ ಪ್ರತಿಭಟನೆಗಳ ನಡುವೆ ಈ ಕಾಯ್ದೆಯ ಚರ್ಚೆ ಮುಂದಕ್ಕೆ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.





