ಉತ್ತರ ಪ್ರದೇಶ: ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಆರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ನಂತರ ಛಾವಣಿಯಿಂದ ಎಸೆದು ಕೊಂದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿರುದ್ದ ಸ್ಥಳೀಯರು ಮತ್ತು ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಕಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಬಾಡಿಗೆ ಮನೆಯ ಟೆರೇಸ್‌ನಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ, ಆರೋಪಿಗಳು ರಾಜು ಮತ್ತು ವೀರು ಎಂಬ ಇಬ್ಬರು ಯುವಕರು ಅವಳನ್ನು ಗುರಿಯಾಗಿರಿಸಿಕೊಂಡಿರುವುದಾಗಿ ತನಿಖೆ ಬಹಿರಂಗಪಡಿಸಿದೆ. ಕುಟುಂಬದವರ ಆರೋಪದ ಪ್ರಕಾರ, ದುಷ್ಕರ್ಮಿಗಳು ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆಸಿ, ನಂತರ ಸುಮಾರು 20 ಅಡಿ ಎತ್ತರದ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ. ಗಂಭೀರ ಗಾಯಗಳೊಂದಿಗೆ ಹತ್ತಿರದ ಜಮೀನಿನಲ್ಲಿ ಪತ್ತೆಯಾದ ಬಾಲಕಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಪೊಲೀಸರು ಬಾಲಕಿ ಸಾವನ್ನಪ್ಪಿರುವುದನ್ನ ದೃಡಪಡಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪವನ್ನು ದೃಢಪಡಿಸಲು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಬಾಲಕಿ ತಂದೆ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಶಂಕಿತರ ಹುಡುಕಾಟವನ್ನು ಆರಂಭಿಸಿದರು. ಸಿಕಂದರಾಬಾದ್ ಕೈಗಾರಿಕಾ ಪ್ರದೇಶದ ಒಂದು ಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಆರೋಪಿಗಳ ಸ್ಥಳದ ಬಗ್ಗೆ ಮಾಹಿತಿ ಸಿಕ್ಕ ನಂತರ, ಪೊಲೀಸರು ಕನ್ವಾರಾದಲ್ಲಿ ಅವರನ್ನು ಬಂದಿಸಲು ಕಾರ್ಯಾಚರಣೆ ನಡೆಸಿದರು. ಈ ಬಗ್ಗೆ ಮಾತನಾಡಿರುವ ಬುಲಂದ್‌ಶಹರ್ ಪೊಲೀಸ್ ಮುಖ್ಯ (ಎಸ್‌ಪಿ) ಡಾ. ತೇಜ್‌ವೀರ್ ಸಿಂಗ್, ಪೊಲೀಸ್ ತಂಡವು ಕೈಗಾರಿಕಾ ಪ್ರದೇಶದಲ್ಲಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ ಆದರೆ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದರು. ಬಳಿಕ ಪೊಲೀಸರ ಪ್ರತಿದಾಳಿಯಲ್ಲಿ, ಇಬ್ಬರೂ ಶಂಕಿತರ ಕಾಲುಗಳಿಗೆ ಗುಂಡೇಟಿನ ಗಾಯಗಳಾಗಿವೆ. ಅವರನ್ನು ತಕ್ಷಣ ನಿಯಂತ್ರಣಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆಯ , ಪೊಲೀಸರು ಆರೋಪಿಯಿಂದ ಎರಡು ಪಿಸ್ತೂಲ್‌ಗಳನ್ನ ವಶಪಡಿಸಿಕೊಂಡಿದ್ದಾರೆ. ಎಸ್‌ಪಿ ಸಿಂಗ್ ಅವರು ಹೇಳಿದಂತೆ, ಆರೋಪಿಗಳು ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ತಾವು ಘಟನೆಯಲ್ಲಿ ಭಾಗಿಯಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ನಾವು ಈಗ ವೈದ್ಯಕೀಯ ವರದಿಗಳಿಗಾಗಿ ಕಾಯುತ್ತಿದ್ದೇವೆ, ಅದರ ಆಧಾರದ ಮೇಲೆ ಎಫ್ಐಆರ್‌ಗೆ ಸಂಬಂಧಿತ ಕಲಮುಗಳನ್ನು ಸೇರಿಸಲಾಗುತ್ತದೆ ಮತ್ತು ಕಾನೂನು ಕ್ರಮಗಳು ಮುಂದುವರೆಯುತ್ತವೆ.
ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ವ್ಯಕ್ತಿಗೆ ಚಾಕುವಿನಿಂದ ಕೊಂದ ಯುವತಿ
ಇದೇ ಸಮಯದಲ್ಲಿ, ಜನವರಿ 2 ರಂದು ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ 50 ವರ್ಷದ ಮಧ್ಯವಯಸ್ಕ ವ್ಯಕ್ತಿಯನ್ನು, 18 ವರ್ಷದ ಯುವತಿ ಹರಿತವಾದ ಆಯುಧದಿಂದ ಎದುರಿಸಿದ ಕೊಂದಿದ್ದಾಳೆ. ಪೊಲೀಸರು ಆ ಮಹಿಳೆಯನ್ನು ಬಂಧಿಸಿ, ಕೊಲೆಯ ಪ್ರಕರಣ ದಾಖಲಿಸಿದ್ದಾರೆ.





