ಪಟ್ನಾ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ-ಜೆಡಿಯು-ಎಲ್‌ಜೆಪಿ ಸಾರಥ್ಯದ ಎನ್‌ಡಿಎ ಮೈತ್ರಿ ಕೂಟ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಭಾರೀ ಮೇಲುಗೈ ಸಾಧಿಸಿದೆ. ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನವನ್ನು ಮೋದಿ-ನಿತೀಶ್ ಜೋಡಿ ಕ್ಲೀನ್ ಸ್ವೀಪ್ ಮಾಡಿದೆ. ಹಾಗಾದ್ರೆ, ಬಿಹಾರದ ಆಡಳಿತಾರೂಢ ಎನ್‌ಡಿಎ ಮತ್ತೊಮ್ಮೆ ಗೆಲ್ಲಲು ಕಾರಣಗಳೇನು? ವಿಪಕ್ಷ ಮಹಾಘಟಬಂಧನ ಹೀನಾಯ ಸೋಲು ಕಾಣಲು ಕಾರಣಗಳೇನು..? ಇಲ್ಲಿದೆ ಸಮಗ್ರ ವಿಶ್ಲೇಷಣೆ:
ಬಿಹಾರದಲ್ಲಿ ಎನ್‌ಡಿಎ ಗೆಲುವಿಗೆ ಕಾರಣಗಳೇನು..?
- 2 ದಶಕಗಳ ಕಳಂಕ ರಹಿತ ಆಡಳಿತ ನೀಡಿರುವ ನಿತೀಶ್ ಕುಮಾರ್
- ಪ್ರಧಾನಿ ಮೋದಿ & ನಿತೀಶ್ ಕುಮಾರ್ ಜೋಡೆತ್ತಿನ ಡಬಲ್ ಎಂಜಿನ್
- ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ನೀಡಿದ ಭರಪೂರ ಅನುದಾನ & ಅಭಿವೃದ್ಧಿ ಯೋಜನೆಗಳು
- ಮೋದಿ ಸರ್ಕಾರದ ಜನಪ್ರಿಯ ರೋಡ್, ರೈಲು & ಡಿಜಿಟಲ್ ಇನ್ ಫ್ರಾ ಯೋಜನೆ
- ಜಾತಿ ಗಣತಿ ಶಿಫಾರಸ್ಸಿನ ಅನ್ವಯ ಅತಿ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳ
- ಅತಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ವಿಶೇಷ ಯೋಜನೆಗಳು
- ಮಹಿಳಾ ಸಬಲೀಕರಣಕ್ಕಾಗಿ ನಿತೀಶ್ & ಮೋದಿ ಸರ್ಕಾರದ ಯೋಜನೆಗಳು
- ಮಹಿಳೆಯರಿಗಾಗಿ ನಿತೀಶ್ ಸರ್ಕಾರ ಘೋಷಿಸಿದ 10 ಸಾವಿರ ರೂ. ಗ್ಯಾರಂಟಿ ಯೋಜನೆ
- ಮಹಿಳೆಯರಿಗಾಗಿಯೇ ಪ್ರತ್ಯೇಕ ಉದ್ಯೋಗ ಯೋಜನೆ ಘೋಷಿಸಿದ್ದ ಸರ್ಕಾರ
- ಮೇಲ್ವರ್ಗದ ಮತಗಳ ಮೇಲೆ ಬಿಜೆಪಿ ಕಣ್ಣು, ಒಬಿಸಿ ಮೇಲೆ ಜೆಡಿಯು ನಿಗಾ & ದಲಿತರಿಗೆ ಗಾಳ ಹಾಕಿದ ಎಲ್‌ಜೆಪಿ..!
ಬಿಹಾರದಲ್ಲಿ ಮಹಾಘಟಬಂಧನದ ಸೋಲಿಗೆ ಕಾರಣಗಳೇನು..?
- ಕಾಂಗ್ರೆಸ್ – ಆರ್‌ಜೆಡಿ ಸೀಟು ಹಂಚಿಕೆ ಗೊಂದಲಗಳು
- ಪ್ರಣಾಳಿಕೆಯಲ್ಲಿ ಅವಾಸ್ತವಿಕ ಭರವಸೆಗಳನ್ನು ನೀಡಿದ್ದ ಮಹಾಘಟಬಂಧನ (ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ)
- ಆರ್‌ಜೆಡಿ ಪಾಲಿಗೆ ಕಪ್ಪು ಚುಕ್ಕಿಯಾಗಿ ಉಳಿದು ಹೋಗಿರುವ ಜಂಗಲ್ ರಾಜ್ ಆರೋಪ
- ತೇಜಸ್ವಿ ಯಾದವ್ ಅವರಿಗೆ ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್‌ರಿಂದಲೇ ಹಿನ್ನಡೆ..! (ವರ್ಚಸ್ಸು ಸಿಗುವ ಬದಲು ಕಳಂಕದ ಕಪ್ಪು ಚುಕ್ಕಿ)
- ಮಹಾಘಟಬಂಧನ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಗೆ ದೂರದೃಷ್ಟಿಯ ಕೊರತೆ
- ಕಾಂಗ್ರೆಸ್ ಪಕ್ಷ ನೈಜ ಸಮಸ್ಯೆಗಳನ್ನು ಬದಿಗಿಟ್ಟು ವೋಟ್ ಚೋರಿ ಹಿಂದೆ ಬಿದ್ದಿದ್ದು
- ಬಿಹಾರದಲ್ಲಿ ಪಕ್ಷ ಸಂಘಟನೆಯಲ್ಲಿ ಎಡವಿದ ಕಾಂಗ್ರೆಸ್
- ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ ಮುಸ್ಲಿಂ ಮತಗಳನ್ನು ವಿಭಜಿಸಿದ್ದು..
- ಆರ್‌ಜೆಡಿ ಮಾಜಿ ಸದಸ್ಯ ಪಪ್ಪು ಯಾದವ್ ರಿಂದಲೂ ಪಕ್ಷದ ಇಮೇಜ್‌ಗೆ ಡ್ಯಾಮೇಜ್
- ಪ್ರಶಾಂತ್ ಕಿಶೋರ್ ಜನಸುರಾಜ್ ಪಕ್ಷದ ಭ್ರಷ್ಟಾಚಾರ ವಿರೋಧಿ ಅಭಿಯಾನ ಫಲ ಕೊಡಲಿಲ್ಲ
ಒಟ್ಟಿನಲ್ಲಿ ಹೇಳೋದಾದ್ರೆ ಈ ಚುನಾವಣೆಯಲ್ಲಿ ಬಿಹಾರದ ಮಟ್ಟಿಗೆ ಆರ್‌ಜೆಡಿಗೆ ಮುಖಭಂಗವಾದರೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಅದರಲ್ಲೂ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಮಟ್ಟದಲ್ಲೇ ಭಾರೀ ಹಿನ್ನಡೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ, ಪಾಂಡಿಚೆರಿ ಸೇರಿದಂತೆ ಹಲವಡೆ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಇವುಗಳ ಮೇಲೂ ಪರೋಕ್ಷ ಪರಿಣಾಮ ಉಂಟಾಗೋದು ಖಚಿತವಾಗಿದೆ.





