ಬದರಿನಾಥ್ ಬಳಿ ಭಾರೀ ಹಿಮಪಾತ: 57 ಕಾರ್ಮಿಕರು ಹಿಮದಡಿ ಸಿಲುಕಿರುವ ಶಂಕೆ

ಬದರೀನಾಥ್ ಬಳಿ ಭಾರೀ ಹಿಮಪಾತ: 57 ಕಾರ್ಮಿಕರು ಹಿಮದಡಿ ಸಿಲುಕಿರುವ ಶಂಕೆ

Untitled Design 2025 02 28t152523.425

ಉತ್ತರಾಖಂಡ: ಬದರೀನಾಥ್ ಸಮೀಪ ಭಾರೀ ಹಿಮಪಾತ ಸಂಭವಿಸಿದ್ದು, 57ಕ್ಕೂ ಹೆಚ್ಚು ಕಾರ್ಮಿಕರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ರಕ್ಷಿಸಲು ವಿಪತ್ತು ನಿರ್ವಹಣಾ ತಂಡಗಳ ಕಾರ್ಯಾಚರಣೆ ಜೋರಾಗಿ ಮುಂದುವರಿದಿದೆ.

ಈ ಘಟನೆ ರಾಜ್ಯದ ಮಾನಾ ಪ್ರದೇಶದಿಂದ ಘಸ್ಟೋಲ್ ಕಡೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹಿಮಪಾತದ ಪರಿಣಾಮ 57 ಕಾರ್ಮಿಕರು ಹಿಮದಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದುವರೆಗೆ 16 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಸುಮನ್ ಮಾಹಿತಿ ನೀಡಿದ್ದಾರೆ.

ADVERTISEMENT
ADVERTISEMENT

ಕಳೆದ 48 ಗಂಟೆಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದ್ದು, ಹಿಮನದಿ ಕುಸಿದ ಪರಿಣಾಮ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳಗಳಿಗೆ ಭಾರೀ ಹಾನಿ ಉಂಟಾಗಿದೆ.

Exit mobile version