ಅನಾಥ ಮಗುವಿಗೆ ಜೀವನ ಕೊಟ್ಟವಳಿಗೆ ಕೊಲೆಯ ಶಿಕ್ಷೆ..!

Untitled design 2025 05 17t192933.172

ಭುವನೇಶ್ವರ : ತಾನು ಸಾಕಿದ ಮಗಳಿಂದಲೇ ತಾಯಿ ಕೊಲೆಯಾಗಿರುವ ಧಾರುಣ ಘಟನೆ ಒಡಿಶಾದ ಗಜಪತಿ ಜಿಲ್ಲೆಯ ಪರಲಖೆಮುಂಡಿಯಲ್ಲಿ ನಡೆದಿದೆ. ರಾಜಲಕ್ಷ್ಮಿ ಕರ್ ಎಂಬ ಮಹಿಳೆ, ತಾನು ಸಾಕಿದ 13 ವರ್ಷದ ಮಗಳಿಂದಲೇ ಕೊಲೆಯಾಗಿದ್ದಾರೆ.

ರಾಜಲಕ್ಷ್ಮಿಗೆ ಸ್ವಂತ ಮಕ್ಕಳಿರಲಿಲ್ಲ. 13 ವರ್ಷಗಳ ಹಿಂದೆ ರಸ್ತೆಯ ಬದಿಯಲ್ಲಿ ಕೇವಲ 3 ದಿನದ ಹೆಣ್ಣು ಶಿಶುವೊಂದು ಸಿಕ್ಕಿತ್ತು. ಕಾನೂನು ಪ್ರಕಾರ ಆ ಮಗುವನ್ನು ದತ್ತು ಪಡೆದ ರಾಜಲಕ್ಷ್ಮಿ, ಆಕೆಗೆ ತಾಯಿಯ ಪ್ರೀತಿ, ಶಿಕ್ಷಣ ನೀಡಿದರು. ಒಳ್ಳೆಯ ಶಾಲೆಯಲ್ಲಿ ಓದಿಸಿ, ಉತ್ತಮ ಸಂಸ್ಕಾರವನ್ನು ನೀಡಿ ಮುದ್ದಾಗಿ ಬೆಳೆಸಿದರು. ಆದರೆ, 8ನೇ ತರಗತಿಯಲ್ಲಿದ್ದ ಈ ಬಾಲಕಿಯ ವರ್ತನೆ ರಾಜಲಕ್ಷ್ಮಿಯನ್ನು ಕೊನೆಗೆ ಆಘಾತಕ್ಕೆ ಒಳಗಾಗುವಂತೆ ಮಾಡಿತ್ತು.

ಮಗಳು ಮನೆಯಿಂದ ಹೊರಗೆ ಹೋದಾಗ, ಕೆಲವು ಹುಡುಗರ ಜೊತೆ ಸುತ್ತಾಡುತ್ತಾ, ಕ್ಲಾಸ್‌ಗೆ ಬಂಕ್ ಮಾಡುತ್ತಾ, ಸ್ವೇಚ್ಛಾಚಾರದ ಜೀವನ ನಡೆಸುತ್ತಿದ್ದಳು. ಈ ವಿಷಯ ರಾಜಲಕ್ಷ್ಮಿಗೆ ಗೊತ್ತಾದಾಗ, ಅವರು ಮಗಳನ್ನು ಕರೆದು ಬುದ್ಧಿವಾದ ಹೇಳಿದರು. “ಇನ್ನುಮುಂದೆ ಹುಡುಗರ ಜೊತೆ ಸುತ್ತಾಡಬೇಡ” ಎಂದು ಎಚ್ಚರಿಕೆ ನೀಡಿದರು. ಆದರೆ, ಈ ಸಲಹೆಯೇ ಅವರ ಸಾವಿಗೆ ಕಾರಣವಾಯಿತು.

ಕೋಪಗೊಂಡ ಬಾಲಕಿ, “ನೀನು ನನ್ನ ಹೆತ್ತ ತಾಯಿಯೇ?” ಎಂದು ರಾಜಲಕ್ಷ್ಮಿಯನ್ನು ಪ್ರಶ್ನಿಸಿದಳು. ತಾಯಿಯ ಈ ಮಾತುಗಳನ್ನು ತನ್ನ ಇಬ್ಬರು ಗೆಳೆಯರಿಗೆ ಹಂಚಿಕೊಂಡ ಆಕೆ, ಅವರೊಂದಿಗೆ ಸೇರಿ ತಾಯಿಯನ್ನೇ ಕೊಲ್ಲಲು ಯೋಜನೆ ರೂಪಿಸಿದಳು. ಏಪ್ರಿಲ್ 29ರಂದು, 13 ವರ್ಷದ ಬಾಲಕಿ ತನ್ನ ಇಬ್ಬರು ಸ್ನೇಹಿತರಾದ ಗಣೇಶ್ ರಾತ್ (21) ಮತ್ತು ದಿನೇಶ್ ಸಾಹು (20) ಜೊತೆ ಸೇರಿ ರಾಜಲಕ್ಷ್ಮಿಯನ್ನು ಕೊಂದಳು. ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ, ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಯಿತು. ನಂತರ ಆಸ್ಪತ್ರೆಗೆ ಕರೆದೊಯ್ಯದಿದ್ದು ರಾಜಲಕ್ಷ್ಮಿ ಸತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೊಲೆಯನ್ನು ಹೃದಯಾಘಾತ ಎಂದು ಬಿಂಬಿಸಲಾಯಿತು. ರಾಜಲಕ್ಷ್ಮಿಗೆ ಈ ಹಿಂದೆ ಒಮ್ಮೆ ಹೃದಯಾಘಾತವಾಗಿತ್ತು ಎಂಬ ಕಾರಣಕ್ OUNG, ಎಲ್ಲರೂ ಈ ಸುದ್ದಿಯನ್ನು ನಂಬಿದರು. ಆದರೆ, ರಾಜಲಕ್ಷ್ಮಿಯ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಆಕೆಯ ಮೊಬೈಲ್ ಫೋನ್ ಸಿಕ್ಕಿತ್ತು. ಅದರಲ್ಲಿ ಬಾಲಕಿ ಮತ್ತು ಆಕೆಯ ಗೆಳೆಯರ ನಡುವಿನ ವಾಟ್ಸಾಪ್ ಚಾಟ್‌ಗಳು ಕೊಲೆಯ ಯೋಜನೆಯನ್ನು ಬಯಲಿಗೆಳೆದವು. ಚಿನ್ನಾಭರಣ ಮತ್ತು ಹಣ ಕದಿಯುವ ಉದ್ದೇಶವೂ ಈ ಕೊಲೆಯ ಹಿಂದಿತ್ತು ಎಂದು ಮಾಹಿತಿ ತಿಳಿದುಬಂದಿದೆ.

ಮೇ 14ರಂದು ಸಿಬಾ ಪ್ರಸಾದ್ ದೂರು ದಾಖಲಿಸಿದ ನಂತರ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು. ಈ ಘಟನೆಯು ಸಾಕು ತಾಯಿಯ ತ್ಯಾಗ ಮತ್ತು ಮಗಳ ಕೃತಘ್ನತೆಯನ್ನು ತೋರಿಸಿದೆ.

Exit mobile version