ಹುಬ್ಬಳ್ಳಿ : ವಿಶ್ವಕ್ಕೆ ಯುವ ಶಕ್ತಿಯ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಮಕ್ಕಳು ಮೈಗೂಡಿಸಿಕೊಂಡು ದೊಡ್ಡ ಸಾಧನೆ ಮಾಡಬೇಕು ಎಂದು ಸ್ವರ್ಣ ಸಮೂಹದ ಚೇರಮನ್ ಡಾ.ಚಿಗರು ಪಾಟಿ ವಿ.ಎಸ್.ವಿ.ಪ್ರಸಾದ ಹೇಳಿದರು.
ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 164ನೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಚಿಗರು ಪಾಟಿ ವಿ.ಎಸ್.ವಿ.ಪ್ರಸಾದ ಯುವ ಶಕ್ತಿ ದೇಶದ ಭವಿಷ್ಯವನ್ನೇ ಬದಲಿಸಬಲ್ಲದು ಅಲ್ಲದೇ ಶೀಘ್ರ ಭಾರತ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲ ಎಂದರು .
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಶಾಕಿರ್ ಮಾತನಾಡಿ, ಸನದಿ ಮಾಧುರ್ಯತೆ, ಔದಾರ್ಯತೆ, ಪವಿತ್ರತೆ ,ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನ ಮತ್ತು ಅಂತರ್ಮುಖ ಜೀವನದಲ್ಲಿ ಪರಾಕಾಷ್ಟೆಯನ್ನು ಹೊಂದಿದ ದೇಶ ಭಾರತವಾಗಿದ್ದು, ನಮ್ಮ ಯುವಕರು ಬಲಶಾಲಿಗಳಾಗಬೇಕು. ಯುವಕರು ಧೈರ್ಯವಾಗಿ ತಮ್ಮ ಕಾಲ ಮೇಲೆ ನಿಲ್ಲುವುದನ್ನು ಕಲಿತರೆ ಯಶಸ್ಸು ನಿಶ್ಚಿತ ಎಂಬ ವಿವೇಕಾನಂದರ ಮಾತು ನಮೆಗಲ್ಲರಿಗೂ ಆದರ್ಶ ಎಂದು ಯುವಕರಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿಜೇತ ಮಕ್ಕಳಿಗೆ ವಿವೇಕಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮಾಡಿ ಗಣ್ಯರು ಹಾಗೂ ನೆರೆದಿದ್ದ ಜನರಿಗೆ ಮನರಂಜನೆ ನೀಡಿ, ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಎನ್.ಎಲ್.ಇ ಸೊಸೈಟಿ ಉಪಾಧ್ಯಕ್ಷ ಶಿವರಾಮ ಹೆಗಡೆ, ಕಾಮತ್ ಹೊಟೆಲ್ ಸಮೂಹದ ಉದ್ಯಮಿ ಸದಾನಂದ ಕಾಮತ್ ಸೇರಿದಂತೆ ವಿವಿದ ಗಣ್ಯರು ವೇದಿಕೆ ಮೇಲಿದ್ದರು.





